ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಸದನದಲ್ಲಿ ವಿಶ್ವಾತಮತ ಗೊತ್ತುವಳಿ ಮಂಡಿಸಿದರು.
ಕೇಂದ್ರ ಸರ್ಕಾರ ಯಾವ ರೀತಿ ಸುಳ್ಳು ದಾಖಲೆ ನಿರ್ಮಾಣ ಮಾಡಿದಾರೆ. ಕೇಂದ್ರ ಸರ್ಕಾರದ ಯಾವುದೇ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ. ಕೇಂದ್ರ ಸರ್ಕಾರ ಗೂಟ ಹೊಡೆದುಕೊಂಡು ಇರ್ತಾರಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಮನಸ್ಸಿಗೆ ಆಘಾತವಾಗಿದೆ. ನಾನು ಸುಮ್ಮ ಸುಮ್ಮನೇ ಮತ ಪಡೆಯಲು ಈ ಕಾರ್ಯಕ್ರಮ ಜಾರಿಗೆ ತರಲು ಯೋಚಿಸಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗ್ತಾರೆ ಎಂಬ ಭಯದಿಂದ ಜೆಡಿಎಸ್ ಬೆಂಬಲ ನೀಡಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಇದು ಬಿಜೆಪಿ ರಾಜಕೀಯ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಬಿ.ಎಸ್. ಯಡಿಯೂರಪ್ಪ ಅವರ ಭಾಷಣಕ್ಕೆ ಕುಮಾರಸ್ವಾಮಿ ಪ್ರತ್ಯುತ್ತರ. ಬಿಎಸ್‌ವೈ ಬಳಸಿದ ಭಾಷೆ ಸರಿಯಿಲ್ಲ. ಅವರು ಇನ್ನು ಮುಂದೆ ಅಧಿಕಾರಕ್ಕೆ ಬರಲ್ಲ. ಹಾಗಾಗಿಯೇ ಅವರು ಇವತ್ತು ಬಯಲು ರಂಗದ ಆಟಕ್ಕೆ ರಿಹರ್ಸಲ್ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಬೇಡಿಕೆ ಈಡೇರದಿದ್ದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ಹೇಳಿದ ಬಿಎಸ್‌ವೈ ಸೇರಿ ಬಿಜೆಪಿ ಶಾಸಕರು ವಾಕ್ ಔಟ್ ಮಾಡಿದರು.
ನೀವು ನಿಮ್ಮ ಪ್ರಣಾಳಿಕೆಯನ್ನು ಈಡೇರಿಸದಿದ್ದರೆ, ರಾಜ್ಯಾದ್ಯಂತ ಮುಷ್ಕರ ಮಾಡುವುದಾಗಿ ಬಿಎಸ್‌ವೈ ಘೋಷಿಸಿದರು
ಸಾಯಂಕಾಲದೊಳಗೆ ಸಾಲಮನ್ನಾ ಮಾಡುವುದಾದರೆ ನನ್ನ ಸಂಪೂರ್ಣ ಬೆಂಬಲವಿದೆ
ಸಾಂದರ್ಭಿಕ ಶಿಶು ಎಂದ್ರೆ ಊಸರವಳ್ಳಿ: ಹೆಚ್‌ಡಿಕೆ ವಿರುದ್ಧ ಯಡಿಯೂರಪ್ಪ ಕಿಡಿ
ನಂಬಿಕೊಂಡು ಬಂದಿರುವ ಕಾಂಗ್ರೆಸ್‌ಗೆ ಜ್ಞಾನೋದಯವಾಗಲಿ: ಬಿಎಸ್‌ವೈ ವ್ಯಂಗ್ಯ
ನಾಗರಹಾವಿನ ರೋಷಕ್ಕೆ 12 ವರ್ಷ ಮಾತ್ರ ಆಯಸ್ಸು, ಕುಮಾರಸ್ವಾಮಿಯ ರೋಷಕ್ಕೆ ಹೆಚ್ಚು ದೀರ್ಘಾಯಸ್ಸು: ಬಿಎಸ್‌ವೈ
ಬಾಯ್ತಪ್ಪಿ ಸಿಎಂ ಸಿದ್ದರಾಮಯ್ಯ ಎಂದ ಯಡಿಯೂರಪ್ಪ: ಸದನದಲ್ಲಿ ನಗೆ
ಐದು ವರ್ಷ ಸರ್ಕಾರ ನಡೆಸಿ, ನಾವು ವಿರೋಧ ಪಕ್ಷದಲ್ಲೇ ಕೂತು ಕೆಲಸ ಮಾಡುತ್ತೇವೆ: ಯಡಿಯೂರಪ್ಪ
ಅವಕಾಶವಾದಿಗಳ ಜೊತೆ ಕೈಜೋಡಿಸಬೇಡಿ, ನಮ್ಮೊಂದಿಗೆ ಬನ್ನಿ ಎಂದು ಶಾಸಕರಿಗೆ ಕರೆ ನೀಡಿದ್ದು ನಿಜ: ಬಿಎಸ್‌ವೈ
ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಇಲ್ಲದಂತೆ ಮಾಡುತ್ತಾರೆ ನೋಡಿ: ಡಿಕೆಶಿಗೆ ಯಡಿಯೂರಪ್ಪ ಎಚ್ಚರಿಕೆ
ರೈತರಿಗೆ ಶೇ.4ರ ಬಡ್ಡಿದರದಲ್ಲಿ ಸಾಲ, ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್
16 ಜಿಲ್ಲೆಗಳಲ್ಲಿ ಜೆಡಿಎಸ್ ಒಂದೂ ಸ್ಥಾನವನ್ನೂ ಗೆದ್ದಿಲ್ಲ. 128 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಪಕ್ಷ ಜೆಡಿಎಸ್: ಬಿಎಸ್‌ವೈ ವಾಗ್ದಾಳಿ
ಜನಾಭಿಪ್ರಾಯದ ವಿರುದ್ಧವಾಗಿದ್ದ ಪಕ್ಷಕ್ಕೆ ಸರ್ಕಾರ ರಚಿಸಲು ರಕ್ಷಣೆ ನೀಡಿದ್ದೀರಿ ಎಂದು ಡಿಕೆಶಿಗೆ ವಾಗ್ಬಾಣ ಬಿಟ್ಟ ಬಿಎಸ್‌ವೈ
ಬಿಜೆಪಿ ಅಧ್ಯಕ್ಷನಾದ ಬಳಿಕ ರಾಜ್ಯವನ್ನು ಮೂರು ಬಾರಿ ರಾಜ್ಯವನ್ನು ಸುತ್ತು ಹಾಕಿ ಬಂದಿದ್ದೇನೆ. ಕಾಂಗ್ರೆಸ್ 122 ಸ್ಥಾನವಿದ್ದ ಕಾಂಗ್ರೆಸ್ 78ಕ್ಕೆ ಬಂದಿದೆ.
ಕುಮಾರಸ್ವಾಮಿ ಅವರೊಂದಿಗೆ ಅಧಿಕಾರದಲ್ಲಿದ್ದಾಗ ಅವರ ನಿರ್ಧಾರಕ್ಕೆ ಅಡ್ಡಿ ಬಂದಿಲ್ಲ. 20 ತಿಂಗಳು ಯಾವುದೇ ಅಡ್ಡಿ ಆತಂಕ ಇಲ್ಲದೇ ಸರ್ಕಾರ ನಡೆಯಿತು. ಆದರೆ, 20 ತಿಂಗಳ ಬಳಿಕ ಅವರು ತಿರುಗಿಬಿದ್ದರು. ಇಲ್ಲ ಸಲ್ಲದ ಷರತ್ತುಗಳನ್ನು ವಿಧಿಸಿದ್ದರು.
ಮುಖ್ಯಮಂತ್ರಿಯಾಗಲು ಅವಕಾಶ ನೀಡಿರದಿದ್ದರೆ ನಿಮ್ಮ ಸ್ಥಾನ ಎಲ್ಲಿರುತ್ತಿತ್ತು ಎಂದು ಕುಮಾರಸ್ವಾಮಿಗೆ ಪ್ರಶ್ನಿಸಿದ ಯಡಿಯೂರಪ್ಪ.
20 ತಿಂಗಳು ಅಧಿಕಾರ ಹಂಚಿಕೊಂಡಿದ್ದು ನನ್ನ ದೊಡ್ಡ ಅಪರಾಧ. ಇದಕ್ಕಾಗಿ ನಾನು ರಾಜ್ಯದ ಜನರ ಕ್ಷಮೆ ಕೋರುತ್ತೇನೆ.
ರಾಜ್ಯದ ಜನರಿಗೆ ವಿಶ್ವಾಸದ್ರೋಹ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ. ಇದು ರಾಜ್ಯದ ಜನರ ಅಭಿಮತ ಎಂದು ಬಿಎಸ್‌ವೈ
ವಿಶ್ವಾಸ ಮತ ಯಾಚಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ಟಾಂಗ್ ನೀಡುತ್ತಿರುವ ಪ್ರತಿಪಕ್ಷ ನಾಯಕ ಬಿಎಸ್‌ವೈ
ರಾಜ್ಯದ ಅಭಿವೃದ್ಧಿಗೆ ನಮ್ಮ ಸಮಯ ನೀಡೋಣ. ನಾನು ಯಾವುದೇ ಜಾತಿ ರಾಜಕೀಯ ಮಾಡುವುದಿಲ್ಲ. ಇದಕ್ಕೆಲ್ಲ ಮಾಧ್ಯಮದವರ ಸಹಕಾರವೂ ಬೇಕು
ಬಿಎಸ್‌ವೈ ಅವರ ಭಾವನೆಗಳೇನಿವೆಯೋ ಅವುಗಳನ್ನೂ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದ ಹೆಚ್‌ಡಿಕೆ
ಸಾಲವನ್ನು ಮಾಡದೇ ರಾಜ್ಯದ ಜನರಿಗೆ ಜನಪರ ಕಾರ್ಯಕ್ರಮಗಳನ್ನು ನೀಡುತ್ತೇನೆ
ನನ್ನ ಮೇಲೆ ವಿಶ್ವಾಸ ಇಟ್ಟಿರುವ ಕಾಂಗ್ರೆಸ್ ನಾಯಕರು, ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಹೆಚ್‌ಡಿಕೆ
ಅನುಭವದ ಕೊರತೆ ನಡುವೆಯೂ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ
ಬಿಜೆಪಿಯ ಹಲವು ಆಮಿಷಗಳನ್ನು ಮೀರಿ ನನ್ನ ಬೆಂಬಲಕ್ಕೆ ನಿಂತ ಜೆಡಿಎಸ್ – ಕಾಂಗ್ರೆಸ್ ಶಾಸಕರಿಗೆ ಅಭಿನಂದನೆ ಎಂದ ಕುಮಾರಸ್ವಾಮಿ
ಇದೇ ವೇಳೆ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ಶ್ಲಾಘಿಸಿದರು.
ರೈತರ ನೋವು ಚನ್ನಾಗಿ ಗೊತ್ತು, ಅವರ ಸಾಲ ಮನ್ನಾ ಮಾಡುತ್ತೇನೆ. ಅದಕ್ಕೆಲ್ಲ ಸ್ವಲ್ಪ ಸಮಯಾವಕಾಶಬೇಕು
ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ಮಾಡಿ, ಅವರ ವಿಶ್ವಾಸ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳುತ್ತೇನೆ. ಇದಕ್ಕೆ ಸಮಯ ಬೇಕು. ಬಿಎಸ್‌ವೈ ಅವರಿಗೆ ಇರುವ ಆತುರ ನಮಗೆ ಇಲ್ಲ. ಸಂಪೂರ್ಣ ವಿಶ್ವಾಸ ಮತ ಪಡೆದ ಬಳಿಕ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ
ಜಗದೀಶ್ ಶೆಟ್ಟರ್ ಹೇಳಿಕೆ ಉಲ್ಲೇಖಿಸಿ ಟಾಂಗ್ ಕೊಟ್ಟ ಸಿಎಂ ಕುಮಾರಸ್ವಾಮಿ, ದಯವಿಟ್ಟು ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ ಎಂದು ವಿಭಾಗಿಸಬೇಡಿ ಎಂದರು. ನಮ್ಮ ಸರ್ಕಾರ 5 ವರ್ಷ ಆಡಳಿತ ನಡೆಸುತ್ತಿದೆ. ಇದರಲ್ಲಿ ಯಾವುದೇ ಅನುಮಾನಬೇಡ. ನಾವು ಬಡವರ ಮೇಲೆ ತೆರಿಗೆ ಹಾಕಿಲ್ಲ ಅನ್ನೋದನ್ನು ಸದನದಲ್ಲಿ ಕುಮಾರಸ್ವಾಮಿ ಪ್ರಸ್ತಾಪಿಸಿದರು.
ಹಿಂದಿನ ಅಂದರೆ ತಮ್ಮ 2006ರಿಂದ 2008 ರ ಅವಧಿಯ ಸರ್ಕಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನ ಸದನದ ಮುಂದಿಟ್ಟರು
ಸಾಲಮನ್ನಾ ಮಾಡವುದನ್ನು ನಿಮ್ಮಿಂದ ಹೇಳಿಸಿಕೊಳ್ಳಬೇಕಾಗಿಲ್ಲ. 2006 ರಲ್ಲಿ ನಮ್ಮ – ನಿಮ್ಮ ಸರ್ಕಾರ ಇದ್ದಾಗ ಸಾಲ ಮನ್ನಾ ಮಾಡುವ ಪ್ರಸ್ತಾಪ ಮಾಡಿದರೆ, ಬಿ.ಎಸ್. ಯಡಿಯೂರಪ್ಪ ನಿರಾಕಿಸಿದ್ದರು. 2010 ರಲ್ಲಿ ವಿಧಾನಸಭೆಯಲ್ಲಿ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಹೇಳಿದ್ದ ಪತ್ರಿಕಾ ಉಲ್ಲೇಖವನ್ನು ಕಲಾಪದಲ್ಲಿ ಪ್ರಸ್ತಾಪಿಸಿದರು. ಈ ಮೂಲಕ ಬಿಎಸ್‌ವೈ ಅವರ ಸಾಲಮನ್ನಾ ಸವಾಲಿಗೆ ಕುಮಾರಸ್ವಾಮಿ ಉತ್ತರ ಕೊಟ್ಟರು
ರಾಜ್ಯದ ಜನ ನನಗೆ ಮತ್ತೆ ಅವಕಾಶ ನೀಡಿದ್ದಾರೆ. ನನಗೆ ಗೊತ್ತು ಜನ ಯಾರಿಗೂ ಬಹುಮತ ಕೊಟ್ಟಿಲ್ಲ. 2008 ರಲ್ಲೂ ಬಿಜೆಪಿಗೆ ಸಂಪೂರ್ಣ ಬಹುಮತ ಕೊಟ್ಟಿದ್ದಿಲ್ಲ. ಅವತ್ತು ಕಾಂಗ್ರೆಸ್ ನ 5 ಬಂಡಾಯ ಶಾಸಕರು ಗೆದ್ದಿದ್ದರು. ಆಗ ಕಾಂಗ್ರೆಸ್ ಮನಸ್ಸು ಮಾಡಿದ್ದರೆ ನೀವು ಸರ್ಕಾರ ರಚನೆ ಮಾಡಲಾಗುತ್ತಿರಲಿಲ್ಲ.
ರೈತರ ಸಾಲ ಮನ್ನಾ ಮಾಡದಿದ್ದರೆ ಸುಮ್ಮನೆ ಕೂರಲ್ಲ ಅಂತಾ ಹೇಳಿದ್ದೀರಿ ಎಂದು ಬಿಎಸ್‌ವೈ ಹೇಳಿಕೆ ಉಲ್ಲೇಖಿಸಿದ ಕುಮಾರಸ್ವಾಮ
ನನಗೆ ಅಂಟಿಕೊಂಡಿರುವ ಬ್ಲಾಕ್ ಮಾರ್ಕ್ ತೆಗೆಯುವುದೇ ನನ್ನ ಉದ್ದೇಶ
ನಾನು ಯಾವುದೇ ವಚನ ಭ್ರಷ್ಟತೆ ಮಾಡಿಲ್ಲ, ಆ ಆರೋಪ ಮಾತ್ರ ಹೊರಿಸಬೇಡಿ- ಸದನದಲ್ಲಿ ಕುಮಾರಸ್ವಾಮಿ ಮನವಿ
ಸದನದಲ್ಲಿ ಕಾವೇರಿದ ಚರ್ಚೆ, ವಿಧಾನಸೌಧದ ಹೊರಗಡೆ ಧಾರಾಕಾರ ಮಳೆ
ಬಿಎಸ್‌ವೈ ಅವರ ಟೀಕೆಗೆ ಸದನದಲ್ಲಿ ಸುದೀರ್ಘ ಉತ್ತರ ನೀಡಿದ ಸಿಎಂ
ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ತೆರೆಯಲು ನನ್ನದೂ ಪಾಲಿದೆ- ಕುಮಾರಸ್ವಾಮಿ
ಸರ್ಕಾರ ಏಕೆ ರಚನೆ ಮಾಡುತ್ತಿದ್ದೇನೆ ಎಂಬುದನ್ನು ಸದನಕ್ಕೆ ಉತ್ತರ ನೀಡಿದ ಸಿಎಂ ಕುಮಾರಸ್ವಾಮಿ
ನನಗೆ ಸಿಎಂ ಆಗುವ ಯಾವುದೇ ಆಸೆಯಿಲ್ಲ. ಆದರೆ ಈಗಿನ ಸಂದರ್ಭದಲ್ಲಿ ಸರ್ಕಾರ ರಚನೆ ಅನಿವಾರ್ಯ. ಈ ಹಿಂದೆ ಬಿಜೆಪಿ ಜತೆಗೂಡಿ ಸರ್ಕಾರ ರಚನೆ ಮಾಡಿದ್ದೇನೆ. ಆಗ ನಮ್ಮ ತಂದೆ ನಿರ್ಧಾರದ ವಿರುದ್ಧ ನಡೆದುಕೊಂಡಿದ್ದೆ. ಇದರಿಂದ ನಮ್ಮ ತಂದೆ ಆರೋಗ್ಯ ಹದಗೆಟ್ಟಿತ್ತು. ಈಗ ತಂದೆಯ ನಿರ್ಧಾರದಂತೆ ಸರ್ಕಾರ ರಚನೆ ಮಾಡಿದ್ದೇನೆ.
ನಾವು ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ನಮ್ಮ ತಂದೆ 18 ತಿಂಗಳು ಸಿಎಂ ಹಾಗೂ 10 ತಿಂಗಳು ಪ್ರಧಾನಿಯಾಗಿದ್ದರು ಎಂದು ಸದನಕ್ಕೆ ಉತ್ತರ ನೀಡಿದರು.
ಸಿಂಗಲ್ ಲಾರ್ಜೆಸ್ಟ್ ಪಾರ್ಟಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದ್ದನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಇದರ ಬಗ್ಗೆ ನನ್ನ ಆಕ್ಷೇಪವೇನೂ ಇಲ್ಲ. ಆದರೆ ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲಿ ರಾಜ್ಯಪಾಲರು ಅನುಮತಿ ನೀಡಿದ್ದು ಸರಿಯೇ ಎಂದು ಬಿಎಸ್ ವೈ ಹೇಳಿಕೆಗೆ ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ ಫೋನ್ ಮಾಡಿ ಮೈತ್ರಿಗೆ ಆಹ್ವಾನ ಮಾಡಿದರು. ಅವರಿಗೆ ಅಭಿನಂದನೆ ಎಂದು ಕುಮಾರಸ್ವಾಮಿ ಹೇಳಿದರು. ಈ ಹಿಂದೆ ಸಿಎಂ ಆಗಲು ಬಿಜೆಪಿ ನೀಡಿದ ಸಹಕಾರವನ್ನು ನೆನಪಿಸಿಕೊಂಡರು.
ಬಿಜೆಪಿ ಅಲ್ಲದೇ ಬೇರೆ ಪಕ್ಷ ಅಧಿಕಾರಕ್ಕೆ ಬರಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದು ಸರಿಯೇ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಈ ನಡೆ ಸರಿಯೇ ಎಂದು ಪ್ರಶ್ನಸಿದರು.
ರಾಜ್ಯದ ಜನ ಯಾವ ರೀತಿ ಮ್ಯಾಂಡೇಟ್ ನೀಡಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಇದೊಂದು ವಿಚಿತ್ರ ರೀತಿಯ ಸಂದರ್ಭ.
2004 ರಲ್ಲಿ ಇಂತಹುದೇ ಸಂದರ್ಭ ಒದಗಿ ಬಂದಿತ್ತು. ಇಂತಹುದೇ ಸ್ಥಿತಿ ಈಗ 2018 ರಲ್ಲೂ ಬಂದಿದೆ.
ಮೇ. 19 ರಂದು ಸದನದಲ್ಲಿ ಮಾತನಾಡಿದ್ದ ಬಿಎಸ್‌ವೈ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ವಿಶ್ವಾಸಮತ ಯಾಚಿಸಲು ಪ್ರಸ್ತಾವನೆ ಮಂಡಿಸಿದ ಸಿಎಂ ಕುಮಾರಸ್ವಾಮಿ. ಪ್ರಸ್ತಾವನೆ ಮಂಡಿಸಿ ಮಾತನಾಡುತ್ತಿರುವ ಕುಮಾರಸ್ವಾಮಿ
ಸಾಂವಿಧಾನಿಕ ನಿಯಮಾವಳಿಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರಬೇಕಿದೆ ಎಂದು ಸ್ಪೀಕರ್ ಕೋರಿದರು.
ಪರಿಣಾಮಕಾರಿಯಾದ ಭಾಷೆಯನ್ನ ಬಳಸಿ, ಸದನದ ಗೌರವವನ್ನು ಕಾಪಾಡಬೇಕಿದೆ. ಎಲ್ಲ ಅಸಮಾಧಾನವನ್ನು ಸೌಮ್ಯ ಭಾಷೆಯಲ್ಲಿ ವ್ಯಕ್ತಪಡಿಸುವಂತೆ ಉಪ ಕಥೆ ಮೂಲಕ ಮಾರ್ಮಿಕವಾಗಿ ವಿವರಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್
ಸದನದ ಗೌರವವನ್ನು ಕಾಪಾಡುವಂತೆ ಎಲ್ಲ ಸದಸ್ಯರಲ್ಲೂ ಮನವಿ ಮಾಡಿದ ಸ್ಪೀಕರ್ ರಮೇಶ್ ಕುಮಾರ್
ಪ್ರತಿಪಕ್ಷ ನಾಯಕ ಯಡಿಯೂರಪ್ಪ ಒರಟರು, ಆದ್ರೆ ಅವರು ಒಳ್ಳೆಯವರು. ಅವರನ್ನು ಬಗ್ಗಿಸುವ ವಿಶ್ವಾಸ ನನಗಿದೆ ಎಂದ ರಮೇಶ್ ಕುಮಾರ್
ಎರಡನೇ ಬಾರಿಗೆ ಸ್ಪೀಕರ್ ಆಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ. ನಿಮ್ಮೆಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದರು.
ನನಗೆ ರಾಜಕೀಯ ಅವಕಾಶ ಕಲ್ಪಿಸಿದ್ದು ದೇವರಾಜ್ ಅರಸ್ ಎಂದು ರಮೇಶ್ ಕುಮಾರ್ ನೆನಪಿಸಿಕೊಂಡರು
ಪ್ರತಿಪಕ್ಷದ ನಾಯಕರಾಗಿ ಬಿ.ಎಸ್. ಯಡಿಯೂರಪ್ಪ ಹಾಗೂ ಉಪ ನಾಯಕರಾಗಿ ಗೋವಿಂದ ಕಾರಜೋಳ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿದ ಸ್ಪೀಕರ್
ಹೊಸ ಸದಸ್ಯರಿಗೆ ಹಿತ ನುಡಿ ಹೇಳಿದ ರಮೇಶ್ ಕುಮಾರ್, ಚಕ್ರಾಧಿಪತ್ಯದ ಕಥೆ ಹೇಳಿದ ಸ್ಪೀಕರ್
ಲಂಡನ್ ನಲ್ಲಿ 1641ರಲ್ಲಿ ರಾಜನ ತಲೆ ಕತ್ತರಿಸಿ, ರಾಜರ ವಿರುದ್ಧ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆಯಲಾಯಿತು.
ಕೊನೆ ಸಾಲಿನ ಶಾಸಕರಿಗೂ ಮಾತನಾಡಲು ಅವಕಾಶ ಮಾಡಿಕೊಡಿ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಆ ಜಾಗದಿಂದ ಒಳ್ಳೆ ಕೆಲಸ ಮಾಡಿ ಎಂದು ಸ್ಪೀಕರ್ ಗೆ ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದರು.
ಯಾವುದೇ ಕಾರಣಕ್ಕೂ ತಮ್ಮ ಸ್ಥಿಮಿತ ಕಳೆದುಕೊಳ್ಳಬೇಡಿ, ನಮ್ಮಂತಹ ಚಿಕ್ಕವರು ತಪ್ಪು ಮಾಡಿದರೆ ತಿದ್ದಿ ಬುದ್ದಿ ಹೇಳಿ. ನಾವು ಕಾಡಿಸಿದರೆ ಸಿಡಿಮಿಡಿಗೊಳ್ಳಬೇಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿದ ಶಾಸಕ ಕೃಷ್ಣ ಬೈರೇಗೌಡ
ಸ್ಪೀಕರ್‌ಗೆ ಅಭಿನಂದಿಸಿ, ಕುಡುಚಿ ಶಾಸಕ ಪಿ. ರಾಜೀವ್, ಕೃಷ್ಣ ಬೈರೇಗೌಡ, ಡಿಕೆಶಿ ಸೇರಿದಂತೆ ಬಹುತೇಕರು ಮಾತನಾಡಿದರು.
ಸ್ಪೀಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರತಿಪಕ್ಷದ ಉಪ ನಾಯಕ ಗೋವಿಂದ್ ಕಾರಜೋಳ ಹೇಳಿದರು.
ರಮೇಶ್ ಕುಮಾರ್ ಅವರಿಗೆ ನವಿರಾಗಿ ಕಾಲೆಳೆದ ಮಾಜಿ ಸಿಎಂ ಸಿದ್ದರಾಮಯ್ಯ. ನಿಮಗೆ ಸಂವಿಧಾನದ ಉತ್ತಮ ಜ್ಞಾನವಿದೆ. ನೀವು ಉತ್ತಮ ಲಾಯರ್ ಆಗ್ತಿದ್ದಿರಿ. ಕೋರ್ಟ್‌ನಲ್ಲಿ ವಾದಕ್ಕೆ ನಿಂತರೆ ಉತ್ತಮ ಲಾಯರ್ ಆಗಬಹುದು ಎಂದು ರಮೇಶ್ ಕುಮಾರ್ ಅವರನ್ನು ಸಿದ್ದರಾಮಯ್ಯ ಬಣ್ಣಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಹಾಗೂ ನಮ್ಮೆಲ್ಲ ಶಾಸಕರ ಪರವಾಗಿ ನಿಮಗೆ ಅಭಿನಂದನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಶಾಸಕಾಂಗದ ಘನತೆಯನ್ನು ಎತ್ತಿ ಹಿಡಿಯಲು ನಿಮಗೆ ದೀರ್ಘವಾದ ಅನುಭವವಿದೆ. ಚಿಕ್ಕ ವಯಸ್ಸಿನಲ್ಲೇ ನೀವು ಶಾಸಕರಾಗಿ ಆಯ್ಕೆ ಆಗಿ ಬಂದವರು. 40 ವರ್ಷಗಳ ಸುದೀರ್ಘ ಅನುಭವ ನಿಮಗಿದೆ ಎಂದು ರಮೇಶ್ ಕುಮಾರ್ ಅವರನ್ನು ಹೊಗಳಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ
ಸ್ಪೀಕರ್ ಆಯ್ಕೆ ಸರ್ವಾನುಮತದಿಂದ ಆಯ್ಕೆ ಮಾಡುವುದೇ ಸೂಕ್ತ ಎಂದು ನಾನು ನಿನ್ನೆಯೇ ಪ್ರತಿಪಕ್ಷಕ್ಕೆ ಕೇಳಿದ್ದೆ. ಇವತ್ತು ಪ್ರತಿಪಕ್ಷ ಸಭಾಧ್ಯಕ್ಷರ ಅವಿರೋಧ ಆಯ್ಕೆಗೆ ಸಹಕಾರ ನೀಡಿತು. ಈ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದರು.
ಸಭಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಆಯ್ಕೆ ಆಗುವುದು ಸೂಕ್ತ ಎಂಬ ಕಾರಣದಿಂದ ಬಿಜೆಪಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದಿದ್ದೇವೆ. ನೂತನ ಸಭಾಧ್ಯಕ್ಷರಿಗೆ ಅಭಿನಂದನೆ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಹೇಳಿದರು.
ನಮ್ಮ ತಂದೆಯವರ ನೇತೃತ್ವದ ಸರ್ಕಾರದಲ್ಲಿ ತಾವು ಸಭಾಧ್ಯಕ್ಷರಾಗಿದ್ದಿರಿ, ಈಗ ಮತ್ತೆ ಅಂದರೆ ಮಗನ ಅವಧಿಯಲ್ಲಿ ಸ್ಪೀಕರ್ ಆಗಿದ್ದು ನನ್ನ ಸುದೈವ.
ಹೊಸ ಶಾಸಕರಿದ್ದಾರೆ ಅವರಿಗೆ ತಾವು ಮಾರ್ಗದರ್ಶನ ಮಾಡುವಂತೆ ಸ್ಪೀಕರ್‌ಗೆ ಸಿಎಂ ಮನವಿ
ಸ್ಪೀಕರ್ ಆಯ್ಕೆ ಬಳಿಕ ಮಾತು ಆರಂಭಿಸಿದ ಕುಮಾರಸ್ವಾಮಿ- ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದ ಹೆಚ್‌ಡಿಕೆ. ಇದೇ ವೇಳೆ ಎಲ್ಲ ಪ್ರತಿಪಕ್ಷದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ನೂತನ ಸಿಎಂ
2ನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆ ಆದ ರಮೇಶ್‌ಕುಮಾರ್. ರಮೇಶ್ ಕುಮಾರ ಕಾರ್ಯವೈಖರಿಯನ್ನು ಬಣ್ಣಿಸಿದ ಕುಮಾರಸ್ವಾಮಿ. ಮಹಿಳಾ ಸಭಾಧ್ಯಕ್ಷೆ ನಾಗರತ್ನಮ್ಮ, ಚಂದ್ರೇಗೌಡರನ್ನು ಸ್ಮರಿಸಿದ ಸಿಎಂ.
ಸ್ಪೀಕರ್ ಸ್ಥಾನ ಅಲಂಕರಿಸಿದ ರಮೇಶ್‌ಕುಮಾರ್
ಕೆ.ಆರ್. ರಮೇಶ್ ಕುಮಾರ್ ಅವರು ನೂತನ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆ
ಈ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಸರ್ವಾನುಮತದಿಂದ ಆಯ್ಕೆ ಆದರು ಎಂದು ಹಂಗಾಮಿ ಸ್ಪೀಕರ್ ಬೋಪಯ್ಯ ಘೋಷಣೆ
ವಿಧಾನಸಭಾ ಕಲಾಪ ಆರಂಭ
ಸ್ಪೀಕರ್ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರ ವಾಪಸ್ ಪಡೆದ ಸುರೇಶ್ ಕುಮಾರ್
ಸ್ಪೀಕರ್ ಆಗಿ ರಮೇಶ್ ಕುಮಾರ್ ಅವಿರೋಧ ಆಯ್ಕೆ ಖಚಿತ
ಟ್ವೀಟರ್‌ನಲ್ಲಿ ಘೋಷಿಸಿದ ಬಿಜೆಪಿ ನಾಯಕ ಸುರೇಶ್ ಕುಮಾರ್
ಹಸಿರು ಶಾಲು ಹೊತ್ತುಕೊಂಡೇ ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಸಿಎಂ ಯಡಿಯೂರಪ್ಪ
ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿರುವ ಕಲಾಪ, ಸಭಾಂಗಣಕ್ಕೆ ಆಗಮಿಸುತ್ತಿರುವ ಮೂರು ಪಕ್ಷಗಳ ಶಾಸಕರು
ಖಾಸಗಿ ಬಸ್‌ಗಳಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ, ಅಸೆಂಬ್ಲಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ. ಅವರ ಹಿಂದೆಯೇ ಹೆಜ್ಜೆ ಹಾಕಿದ ಸ್ಪೀಕರ್ ಅಭ್ಯರ್ಥಿ ರಮೇಶ್ ಕುಮಾರ್
ಮೊದಲಿಗೆ ಸ್ಪೀಕರ್ ಚುನಾವಣೆ ನಡೆಯಲಿದ್ದು, ಆ ಬಳಿಕ ಸಿಎಂ ಕುಮಾರಸ್ವಾಮಿ ಅವರಿಂದ ವಿಶ್ವಾಸಮತ ಯಾಚನೆ
ಅಸೆಂಬ್ಲಿಗೆ ಆಗಮಿಸಿದ ಜೆಡಿಎಸ್ ಶಾಸಕರು, ವಿಸ್ವಾಸಮತ ಯಾಚನೆಯಲ್ಲಿ ಪಾಲ್ಗೊಳ್ಳಲಿರುವ ಎಂಎಲ್‌ಎಗಳು
ವಿಧಾನಸೌಧದತ್ತ ತೆರಳಿದ ಬಿಜೆಪಿ ಶಾಸಕರು. ಸ್ಪೀಕರ್ ಚುನಾವಣೆಯಲ್ಲಿ ಪಾಲ್ಗೊಳ್ಳಲು ವಿಧಾನಸೌಧಕ್ಕೆ ಆಗಮನ
ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿ.ಎಸ್. ಯಡಿಯೂರಪ್ಪ ಸನ್ನದ್ಧ
12 ವರ್ಷಗಳ ಬಳಿಕ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಲು ಬಿಎಸ್‌ವೈ ಸಿದ್ಧ
ಜೆಡಿಎಸ್ ಶಾಸಕರನ್ನು ಉದ್ದೇಶಿಸಿ ಸಿಎಂ ಕುಮಾರಸ್ವಾಮಿ ಮಾತನಾಡಿದರು. ರೆಸಾರ್ಟ್ ರಾಜಕೀಯ ಅನಿವಾರ್ಯ ಎಂದು ಸಮರ್ಥನೆ. ಇಷ್ಟು ದಿನಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದ ಸಿಎಂ.
ಜೆಡಿಎಸ್ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ ಹೆಚ್‌ಡಿಕೆ
ನಾನು ಎಲ್ಲಿ ಹೋಗಿಲ್ಲರೀ… ಮಕ್ಕಳು ಮರಿಗಳನ್ನು ನೋಡಲು ಹೋಗುವುದು ಬೇಡವೇ ಎಂದು ಮಾಧ್ಯಮದವರಿಗೆ ಡಿಕೆಶಿ ಪ್ರಶ್ನೆ
ವಿಧಾನಸೌಧಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್
ವಿಧಾನಸೌಧದಲ್ಲಿ ನಡೆಯುತ್ತಿರುವ ಶಾಸಕಾಂಗ ಸಭೆಗೆ ಆಗಮಿಸಿದ ಡಿಕೆಶಿ
ಜೂ. 1ಕ್ಕೆ ಜಯನಗರ ವಿಧಾನಸಭೆ ಚುನಾವಣೆ ಹಿನ್ನೆಲೆ
ಜಯನಗರ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್. ಪ್ರಹ್ಲಾದ್ ಆಯ್ಕೆಗೆ ಕಾರ್ಪೋರೇಟರ್‌ಗಳ ಅಸಮಾಧಾನ
ಆರ್. ಅಶೋಕ್ ಎದುರು ಅಸಮಾಧಾನ ತೋಡಿಕೊಂಡ ಮಾಜಿ ಕಾರ್ಪೋರೇಟರ್‌ಗಳು
ಕಾರ್ಪೋರೇಟರ್‌ಗಳ ಅಸಮಾಧಾನದ ಹಿನ್ನೆಲೆಯಲ್ಲಿ ಗರಂ ಆದ ಮಾಜಿ ಉಪ ಮುಖ್ಯಮಂತ್ರಿ
ಕಾರ್ಪೋರೇಟರ್‌ಗಳನ್ನು ಸಮಾಧಾನ ಪಡಿಸುತ್ತಿರುವ ಬಿಜೆಪಿ ಮುಖಂಡ
ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ- ಜಮೀರ್ ಅಹಮ್ಮದ್ ಹೇಳಿಕೆ
ಕಾಂಗ್ರೆಸ್ ಶಾಸಕಾಂಗ ಸಭೆಗೆ ಡಿ.ಕೆ.ಶಿವಕುಮಾರ್ ಗೈರು ಹಾಜರು
ಸಭೆಯಲ್ಲಿ ವಿಜಯನಗರದ ಶಾಸಕ ಆನಂದ್ ಸಿಂಗ್, ಮಸ್ಕಿ ಶಾಸಕ ಪ್ರತಾಪಗೌಡ ಹಾಜರು
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ, ಡಿಕೆಶಿ ಯಾವುದೇ ಅಸಮಾಧಾನ ಹೊಂದಿಲ್ಲ- ಕೆ.ಕೆ. ವೇಣುಗೋಪಾಲ್ ಸ್ಪಷ್ಟನೆ
11.20 : ಶ್ಯಾಗ್ರಿಲಾ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಆರಂಭ
ಇಂದಿನ ಅಧಿವೇಶನದಲ್ಲೇ ನೂತನ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾಕ್ಕೆ ಬಿ.ಎಸ್.ಯಡಿಯೂರಪ್ಪ ಒತ್ತಾಯ
ನನಗೆ ಯಾವುದೇ ಟೆನ್ಶನ್ ಇಲ್ಲ. ಬಹುಮತ ಸಾಬೀತುಪಡಿಸಲು ಯಾವುದೇ ಅಡ್ಡಿ ಇಲ್ಲ : ಕುಮಾರಸ್ವಾಮಿ
9.20 : ಪ್ರೆಸ್ಟೀಜ್ ಗಾಲ್ಫ್ ರೆಸಾರ್ಟ್‌ನಿಮದ ವಿಧಾನಸೌಧದತ್ತ ಹೊರಟ ಜೆಡಿಎಸ್ ಶಾಸಕರು.
Click this button or press Ctrl+G to toggle between Kannada and English