ಯೋಗಿ ಮುಖಕ್ಕೆ ಚಪ್ಪಲಿಯಲ್ಲಿ ಹೊಡಿಯಬೇಕು ಎನಿಸಿತ್ತು: ವ್ಯಗ್ರರಾದ ಉದ್ಧವ್‌

12:54 PM, Saturday, May 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

yogi-adithyanathಮುಂಬೈ: ಶಿವಸೇನೆ ಮುಖ್ಯಸ್ಥ ಉದ್ಧವ್‌‌ ಠಾಕ್ರೆ ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ವಿವಾದಾತ್ಮಕ ಬರಹ ಪ್ರಕಟಿಸಿದ್ದಾರೆ. ಸಿಎಂ ಯೋಗಿಯನ್ನು ಅವರ ಚಪ್ಪಲಿಯಿಂದಲೇ ಅವರ ಮುಖಕ್ಕೆ ಹೊಡೆಯಬೇಕೆಂದು ಶಿವಸೇನಾ ವರಿಷ್ಠ ಉದ್ಧವ್‌ ಠಾಕ್ರೆಗೆ ಅನಿಸಿತ್ತಂತೆ. ಹೀಗಂತಾ ಅವರೇ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಹೊಸ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

ಪಲ್ಗಾರ್‌ಗೆ ಭೇಟಿ ನೀಡಿದ್ದ ವೇಳೆ ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಸ್ಪಷ್ಟನಮನ ಸಲ್ಲಿಸುವಾಗ ಸಿಎಂ ಯೋಗಿ ಚಪ್ಪಲಿ ಧರಿಸಿದ್ದರ ಬಗ್ಗೆ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಪ್ಪಲಿ ಧರಿಸಿಯೇ ಪುಷ್ಪನಮನ ಸಲ್ಲಿಸುವುದನ್ನು ನೋಡಿ ಅವರ ಚಪ್ಪಲಿಯಲ್ಲೇ ಅವರ ಮುಖಕ್ಕೆ ಹೊಡೆಯಬೇಕು ಎನಿಸಿತ್ತು ಎಂಬುದನ್ನು ಮುಖವಾಣಿಯಲ್ಲಿ ಬರೆದುಕೊಂಡು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಅವರು ಯೋಗಿ ಅಲ್ಲ, ಆತ ಬೋಗಿ. ಯೋಗಿಯಾಗಿದ್ದರೆ ಸರ್ವವನ್ನೂ ತ್ಯಜಿಸಿ ಗುಹೆಗೆ ಹೋಗಿ ಕೂರುತ್ತಿದ್ದರು. ಆದರೆ ಆತ ಬೋಗಿ, ಹಾಗಾಗಿಯೇ, ಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ ಎಂದು ಠಾಕ್ರೆ ತಮ್ಮ ಬರಹದಲ್ಲಿ ಯೋಗಿ ವಿರುದ್ಧ ಸಿಡಿಮಿಡಿಗೊಂಡಿರುವುದನ್ನು ಸಾಕ್ಷೀಕರಿಸಿದ್ದಾರೆ.

ಬಿಜೆಪಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಠಾಕ್ರೆ, ತಮ್ಮ ದಾರಿಗೆ ಅಡ್ಡ ಬಂದವರನ್ನು ಬಿಜೆಪಿ ಇರಿದು ಕೊಲ್ಲುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ದವ್ ಠಾಕ್ರೆ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇದ್ದು, ಪ್ರಧಾನಿ ಮೋದಿ ಹಾಗೂ ಅಮಿತ್‌ ಷಾ ನಡೆಗಳನ್ನು ಹೋದಲ್ಲಿ ಬಂದಲ್ಲಿ ಟೀಕಿಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English