ಧರ್ಮಸ್ಥಳದಲ್ಲಿ ರಾತ್ರಿ ಹತ್ತನಾವಧಿ ಉತ್ಸವ

6:25 PM, Saturday, May 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

dharmastalaಉಜಿರೆ: ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಹತ್ತನಾವಧಿ (ತುಳು: ಪತ್ತನಾಜೆ) ಉತ್ಸವ ನಡೆಯಿತು.ಉತ್ಸವ ಬಲಿ, ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆದು ಧ್ವಜ ಮರ (ಕೊಡಿಮರ) ಅವರೋಹಣದೊಂದಿಗೆ ವರ್ಷದ ಉತ್ಸವಗಳು ಸಮಾಪನಗೊಂಡವು.

ಮುಂದೆ ದೀಪಾವಳಿ ವರೆಗೆ ರಂಗಪೂಜೆ, ಉತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ.

ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರ ಮೂರ್ತಿಯನ್ನು ವೈಭವದ ಮೆರವಣಿಗೆಯಲ್ಲಿ ಛತ್ರ ಗಣಪತಿ ಸನ್ನಿಧಿಗೆ ಕೊಂಡು ಹೋಗಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹತ್ತನಾವಧಿ ಬಳಿಕ ಮೂರು ದಿನ ಸೇವೆ ಆಟ ಪ್ರದರ್ಶನ ನೀಡಿ ಇಂದು ಭಾನುವಾರ ಈ ವರ್ಷದ ಬಯಲಾಟ ಪ್ರದರ್ಶನ ಮುಕ್ತಾಯಗೊಂಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English