ರಾತ್ರಿ ಕರ್ಫ್ಯೂ : ಕಟೀಲು ಯಕ್ಷಗಾನ ಮೇಳಗಳ ಪ್ರದರ್ಶನ ಸಮಯ ಬದಲಾವಣೆ

Thursday, December 24th, 2020
Kateelu Mela

ಮಂಗಳೂರು : ಕಟೀಲು‌ ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ ಎಂದು ಮೇಳದ ವ್ಯವಸ್ಥಾಪಕರು ತಿಳಿಸಿದ್ದಾರೆ. ಕಟೀಲು‌ ದೇವಸ್ಥಾನದ ಆರು ಯಕ್ಷಗಾನ ಮೇಳಗಳು ಡಿಸೆಂಬರ್ ‌24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ‌ ಕೊನೆಗೊಳ್ಳಲಿದೆ. ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು […]

ಕಟೀಲು ದೇವಸ್ಥಾನದ ಆರು ಯಕ್ಷಗಾನ ಮೇಳಗಳ ತಿರುಗಾಟ ಆರಂಭ

Friday, November 22nd, 2019
Kattel Ata

ಮಂಗಳೂರು : ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಬಯಲಾಟ ಮೇಳಗಳ ಈ ಸಾಲಿನ ತಿರುಗಾಟ ನ.22ರಂದು ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿಅವರ ಸಂಚಾಲಕತ್ವದಲ್ಲೇ ಆರಂಭಗೊಡಿದೆ. ಈ ಮಧ್ಯೆ ಕಟೀಲು ಮೇಳಗಳ ಏಲಂ ವಿವಾದ ಕುರಿತು ಗುರುವಾರ ಹೈಕೋರ್ಟ್‌ನ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿ  ಡಿ.9ಕ್ಕೆ ಮುಂದೂಡಿದೆ. ಡಿಸೆಂಬರ್ 9 ರ ವರೆಗೆ  ಯಕ್ಷಗಾನ ಮೇಳದ ಉಸ್ತುವಾರಿಯನ್ನು ಜಿಲ್ಲಾಧಿಕಾರಿ ನೋಡಿಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೆ ಮೇಳದ ನಿರ್ವಹಣೆಯನ್ನು ಆಡಳಿತ ಮಂಡಳಿ ವಹಿಸಿಕೊಳ್ಳಬೇಕು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಟೀಲು ಮೇಳಗಳ […]

ಧರ್ಮಸ್ಥಳದಲ್ಲಿ ರಾತ್ರಿ ಹತ್ತನಾವಧಿ ಉತ್ಸವ

Saturday, May 26th, 2018
dharmastala

ಉಜಿರೆ: ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಹತ್ತನಾವಧಿ (ತುಳು: ಪತ್ತನಾಜೆ) ಉತ್ಸವ ನಡೆಯಿತು.ಉತ್ಸವ ಬಲಿ, ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆದು ಧ್ವಜ ಮರ (ಕೊಡಿಮರ) ಅವರೋಹಣದೊಂದಿಗೆ ವರ್ಷದ ಉತ್ಸವಗಳು ಸಮಾಪನಗೊಂಡವು. ಮುಂದೆ ದೀಪಾವಳಿ ವರೆಗೆ ರಂಗಪೂಜೆ, ಉತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ. ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರ ಮೂರ್ತಿಯನ್ನು ವೈಭವದ ಮೆರವಣಿಗೆಯಲ್ಲಿ ಛತ್ರ ಗಣಪತಿ ಸನ್ನಿಧಿಗೆ ಕೊಂಡು ಹೋಗಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹತ್ತನಾವಧಿ ಬಳಿಕ ಮೂರು ದಿನ ಸೇವೆ ಆಟ ಪ್ರದರ್ಶನ […]