ರಾತ್ರಿ ಕರ್ಫ್ಯೂ : ಕಟೀಲು ಯಕ್ಷಗಾನ ಮೇಳಗಳ ಪ್ರದರ್ಶನ ಸಮಯ ಬದಲಾವಣೆ

12:25 AM, Thursday, December 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kateelu Melaಮಂಗಳೂರು : ಕಟೀಲು‌ ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ ಎಂದು ಮೇಳದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಕಟೀಲು‌ ದೇವಸ್ಥಾನದ ಆರು ಯಕ್ಷಗಾನ ಮೇಳಗಳು ಡಿಸೆಂಬರ್ ‌24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ‌ ಕೊನೆಗೊಳ್ಳಲಿದೆ.

ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ. ನಾಳೆಯಿಂದ ಕರ್ಫ್ಯೂ ಮುಗಿಯುವ ತನಕ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಈ ದಿನದಲ್ಲಿ‌ ಯಕ್ಷಗಾನ ಬುಕ್ ಮಾಡಿದವರು ಕಾಲಮಿತಿ ಯಕ್ಷಗಾನಕ್ಕೆ‌ ಸಹಕಾರ ನೀಡಬೇಕೆಂದು ಕ್ಷೇತ್ರದ ಆಡಳಿತ‌ ಮಂಡಳಿ ವಿನಂತಿ ಮಾಡಿಕೊಂಡಿದೆ.

ಕಟೀಲು ಯಕ್ಷಗಾನ ಮೇಳ‌ ಮಾಮೂಲಿಯಾಗಿ ರಾತ್ರಿ 9 ಗಂಟೆಗೆ ಪ್ರಸಂಗ ಆರಂಭಿಸಿ ಬೆಳಗ್ಗಿನ‌ ಜಾವ 6 ಗಂಟೆಯವರೆಗೂ ನಡೆಯುತ್ತದೆ. ಆದರೆ ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English