ಕುಮಾರಸ್ವಾಮಿಯವರಿಂದ ರಾಜ್ಯದ ಜನತೆಗೆ ಅವಮಾನ: ಬಿ.ಎಸ್. ಯಡಿಯೂರಪ್ಪ

4:48 PM, Monday, May 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

yedyurappaಬೆಂಗಳೂರು: ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ. ಜನತೆಯ ಮುಲಾಜಿನಲ್ಲಿಇಲ್ಲ ಎಂದು ಹೇಳುವ ಮೂಲಕ ನಾಡಿ ೬.೫ ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ವೈ, ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮೇಗೌಡ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ಬಳಿಕ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಎಸ್ವೈ, ಕುಮಾರಸ್ವಾಮಿ ಅವರು ತನ್ನ ಹೇಳಿಕಯ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಭಾರತದ ಇತಿಹಾಸಲ್ಲಿ ಯಾವ ಮುಖ್ಯಮಂತ್ರಿ ಕೂಡ ಮತದಾರರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿಲ್ಲ. ಕುಮಾರಸ್ವಾಮಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಇದಕ್ಕೆ ಅವರು ಕೂಡಲೇ ಜನರ ಕ್ಷಮೆಯಾಚಿಸಬೇಕು ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3800 ಅಧಿಕ ರೈತರ ಆತ್ಮಹತ್ಯೆ ಆಗಿದೆ. ಚುನಾವಣೆ ಬಳಿಕ ಮುಂದುವರೆದಿರುವುದು ವಿಷಾದನೀಯ. ಸಾಲಮನ್ನಾಮಾಡಿ ಇದ್ದಿದ್ದರೆ ಅದನ್ನು ತಡೆಗಟ್ಟಬಹುದಿತ್ತು. ಈಗ ಸಮ್ಮಿಶ್ರ ಸರ್ಕಾರದ ನೆಪ ನೀಡಿ ಕೊಟ್ಟ ಮಾತಿನಿಂದ ಹಿಂದೆ ಸರಿದಿದ್ದಾರೆ. ಕುರ್ಚಿಗಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಈಗ ಕುಂಟುನೆಪ ಹೇಳ್ತಾ ಇದ್ದಾರೆ. ಅವರು ಸಾಂದರ್ಭಿಕ ಶಿಶು ಆದರೂ ಆಗಿರಲಿ, ಸನ್ನಿವೇಶದ ಶಿಶುವೂ ಆಗಿರಲಿ, ರೈತರು ಬಲಿಪಶುಗಳು ಆಗುವುದನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿಯವರು ಈಗ ಪೊಲೀಸ್ ಬಲವನ್ನು ಉಪಯೋಗಿಸಿ ಪ್ರತಿಭಟನೆ ಹತ್ತಿಕ್ಕಲು ಹೊರಟಿದ್ದಾರೆ. ನಮ್ಮ ಶಾಸಕರನ್ನು, ಸಂಸದರನ್ನು ಬಂಧಿಸುವ ಕೆಲಸ ನಡೆದಿದೆ. ಶಾಂತಿಯುತವಾಗಿ ಬಂದ್ ಮಾಡುವ ಅಧಿಕಾರ, ಹೋರಾಟದ ಅಧಿಕಾರ ಸಾಮಾನ್ಯ ಜನತೆಗೆ ಇಲ್ಲವೇ ? ಪೊಲೀಸ್ ದರ್ಪ, ಬಲಪ್ರಯೋಗವನ್ನು ಮೆಟ್ಟಿನಿಂತು ಸಾಮಾನ್ಯ ಜನ ಗಟ್ಟಿಯಾಗಿ ನಿಂತು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ರೈತರ ಹೋರಾಟಕ್ಕೆ ಸಹಕಾರ ನೀಡಿದ್ದೇವೆ. ರೈತರ ಪರವಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಒಂದು ವಾರದಲ್ಲಿ ರೈತರ ಸಾಲ ಮನ್ನಾ ಮಾಡಲಾಗದಿದ್ದರೆ ರಾಜೀನಾಮೆ ನೀಡಿ ತೆರಳುವುದಾಗಿ ಹೆಚ್ಡಿಕೆ ಹೇಳಿದ್ದಾರೆ. ಹೀಗಾಗಿ ಒಂದು ವಾರ ಕಾಯುತ್ತೇವೆ. ನಂತರ ಹೋರಾಟದ ರೂಪುರೇಷೆಗಳನ್ನು ನಿರ್ಧಾರ ಮಾಡ್ತೇವೆ ಎಂದು ಬಿಎಸ್ವೈ ಹೇಳಿದರು.

ಸರ್ಕಾರ ಬಂದು ೫ ದಿನಗಳಾದರೂ ಇನ್ನೂ ದೊಂಬರಾಟ ನಿಂತಿಲ್ಲ. ದೆಹಲಿಯಲ್ಲಿ ಸಂಪುಟ ರಚನೆ ಸರ್ಕಸ್ ನಡೆಯುತ್ತಿದೆ. ರಾಹುಲ್ ಜೊತೆ ಚರ್ಚೆ ಆದ ಮೇಲೂ ಒಮ್ಮತ ನಿರ್ಧಾರಕ್ಕೆ ಬಾರದೆ ಗುಲಾಂ ನಬಿ ಆಝಾದ್ ಗೆ ಜವಾಬ್ದಾರಿ ವಹಿಸಿ ತೆರಳಿದ್ದಾರೆ. ಯಾರಿಗೆರ ಯಾವ ಖಝಾತೆ ಎಂದು ಕಚ್ಚಾಡುತ್ತಿರುವ ಇವರಿಂದ ಯಾವ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು? ಇಂದು ವಿಚಿತ್ರ ಪರಿಸ್ಥಿತಿ ರಾಜ್ಯದಲ್ಲಿದೆ. ರಾಹುಲ್ ವಿದೇಶದಿಂದ ಬರುವವರೆಗೂ ಸಚಿವ ಸಂಪುಟ ರಚನೆಯಾಗುವ ವಿಶ್ವಾಸ ನನಗಿಲ್ಲ ಎಂದು ಬಿಎಸ್ವೈ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English