ಮಂಗಳೂರು: ಮಹಾಮಳೆಗೆ ನನ್ನ ಮೇಲೆ ಟೀಕೆ ಮಾಡುವವರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಜೆ ಆರ್ ಲೋಬೋ ಅವರು ಮಂಗಳೂರಿನಲ್ಲಿ ಒಂದೇ ದಿನ 24 ಸೆಂಟಿ ಮೀಟರ್ ಮಳೆಯಾಗಿತ್ತು. ಇದು ಹಿಂದೆ ಬಂದಿರಲಿಲ್ಲ.ಆದರೆ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ನನ್ನ ಮೇಲೆ ಟೀಕೆ ಮಾಡಲಾಗುತ್ತಿದೆ. ಎಂದಿದ್ದಾರೆ.
ಅದೇ ರೀತಿ ಸಂಸದರು ಮಾಡಿದ ಕಾಮಗಾರಿ ಪ್ರದೇಶದಲ್ಲಿಯು ಪ್ರವಾಹ ಪರಿಸ್ಥಿತಿ ಇತ್ತು. ಅದಕ್ಕೆ ನಾನು ಸಂಸದರನ್ನು ದೂರುವುದಿಲ್ಲ. ಯಾವುದೇ ಪ್ರತಿನಿಧಿ ತಾಂತ್ರಿಕ ವ್ಯಕ್ತಿಯಲ್ಲ.
ತಾಂತ್ರಿಕ ಸಲಹೆಗಾರರು ಇದಕ್ಕೆ ಕಾರಣ. ಆ ಕಾರಣದಿಂದ ತಾಂತ್ರಿಕ ಸಲಹೆಯನ್ನು ನೀಡುವ ಐಡಿಎಫ್ ಬಗ್ಗೆ ತನಿಖೆ ನಡೆಸುವಂತೆ ಮಹಾನಗರ ಪಾಲಿಕೆ ಗೆ ಪತ್ರ ಸಲ್ಲಿಸಿದ್ದೆನೆ. ಐಡಿಎಫ್ ನ ಲೋಪ ಇದ್ದರೆ ಅವರ ಕನ್ಸಲ್ಟನ್ಸಿ ಅಮಾನತು ಮಾಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English