ಮಂಗಳೂರು: ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲು ಕಂಡಿದ್ದೇನೆ ಈ ಬಗ್ಗೆ ಇವಿಎಂ ಮೇಲೆ ಅನುಮಾನ ಇದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಜೆ ಆರ್ ಲೋಬೋ ಅವರು ನನಗೆ ಇವಿಎಂ ಮೇಲೆ ಅನುಮಾನ ಇದೆ, ಇದಕ್ಕಾಗಿ ನ್ಯಾಯಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ,
ಈ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಸಮರ ಮಾಡಲಾಗುವುದು. ಇವಿಎಂ ನ ಎಲ್ಲಾ ಬೂತ್ ಗಳ ವಿವಿ ಪ್ಯಾಟ್ ನ ಮತ ಎಣಿಕೆ ಗೆ ನ್ಯಾಯಲಯದ ಅನುಮತಿ ಬೇಕಾಗಿದೆ ಎಂದು ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಜೆ ಆರ್ ಲೋಬೋ ಹೇಳಿಕೆ ನೀಡಿದ್ದಾರೆ.
Click this button or press Ctrl+G to toggle between Kannada and English