ಮಂಗಳೂರು: ಕರಾವಳಿ ಮಂಗಳೂರಿನಲ್ಲಿ ಎರಡು ದಿನಗಳಿಂದ ಆರಂಭವಾದ ಮಳೆಯ ಆರ್ಭಟ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಗಾಳಿ ಮಳೆಯ ರಭಸಕ್ಕೆ ಹಲವೆಡೆ ಮರಗಳು ನೆಲಕ್ಕುರುಳಿದೆ.
ಭಾರಿ ಮಳೆಗೆ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲದೆ ಶಾಲೆಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಇತ್ತ ಭಾರಿ ಮಳೆಗೆ ಹಳೆ ಕಟ್ಟಡ ಹಾಗೂ ಮರಗಳು ನೆಲಕ್ಕುರುಳಿದೆ.
ಮಂಗಳೂರಿನ ಕಾರ್ ಸ್ಟ್ರೀಟ್‌ನಲ್ಲಿ ಹಳೆಯ ಕಟ್ಟಡವೊಂದರ ಮೇಲಿನ ಅಂತಸ್ತು ಕುಸಿದಿದ್ದು, ಕಟ್ಟಡದ ಹೊರಗೆ ನಿಲ್ಲಿಸಲಾಗಿದ್ದ ಎರಡು ಬೈಕ್ ಗಳಿಗೆ ಹಾನಿಯಾಗಿದೆ. ಅಲ್ಲದೆ ಜಿಲ್ಲೆಯ ಹಲವೆಡೆ ಮರಗಳು ರಸ್ತೆಗೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
Click this button or press Ctrl+G to toggle between Kannada and English