ವಕ್ಫ್ ಬೋರ್ಡ್ ಕೋಟ್ಯಾಂತರ ಆಸ್ತಿ ಗೋಲ್ಮಾಲ್, ಮುತವಲ್ಲಿ ಮತ್ತು ಖರೀದಿದಾರರಿಗೆ ನೊಟೀಸು

9:57 PM, Monday, June 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Kachi Memonಮಂಗಳೂರು : ಕಚ್ಚಿ ಮೆಮೂನ್ ಮಸ್ಜಿದ್, ಗೋಳಿಕಟ್ಟಾ ಬಜಾರ್ ಬಂದರ್ ಮಂಗಳೂರು, ಇದರ ಮುತವಲ್ಲಿ ವಕ್ಫ್ ಬೋರ್ಡ್‌ಗೆ ಸಂಬಂಧ ಪಟ್ಟ ಕೋಟ್ಯಾಂತರ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ತಿಳಿಯದಂತೆ ಮಾರಿರುವುದನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ನ್ಯಾಯಾಲಯ ಮಾರಾಟ ಮಾಡಿದ ಮುತವಲ್ಲಿ ಮತ್ತು ಖರೀದಿ ಮಾಡಿದ ಆರು ಮಂದಿಗೆ ನೋಟಿಸು ಜಾರಿ ಮಾಡಿದೆ.

ನಗರದ ಗೋಳಿಕಟ್ಟಾ ಬಜಾರಿನಲ್ಲಿರುವ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದೆ ಎನ್ನಲಾದ 69 ಸೆಂಟ್ಸ್ ಜಾಗವನ್ನು ಬಂದರು ಕಚ್ಚಿ ಮೆಮೂನ್ ಮಸ್ಜಿದ್, ಮುತವಲ್ಲಿ ಮಂಗಳಾದೇವಿ ಸಮೀಪವಾಸವಾಗಿರುವ ವನಿತಾ ಅರವಿಂದಾಕ್ಷ, ಜಗದೀಶ್ ಮಿಜಾರ್, ಕೃಪಾಲಿ, ರವಿಶಂಕರ ಮಿಜಾರ್, ರಂಜನ್ ಮಿಜಾರ್ ಎಂಬವರಿಗೆ ಮಾರಿದ್ದಾರೆ. ಬಜಿಲಕೇರಿ ಎಂಬಲ್ಲಿ ಇವರು ಅನಧಿಕೃತವಾಗಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬಹುಮಹಡಿಯ ಕಟ್ಟಡ ಕಟ್ಟಿದ್ದಾರೆ ಎಂದು ಆರೋಪಿಸಿ ವಕ್ಫ್ ಬೋರ್ಡ್‌ಗೆ ನೋಟಿಸು ನೀಡಿದೆ.

ಈ ಬಗ್ಗೆ ಖರೀದಿದಾರರಲ್ಲಿ ಒಬ್ಬರಾದ ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರ್ ಇದು ನಮಗೆ ಕಚ್ಚಿ ಮೆಮೂನ್ ಮಸ್ಜಿದ್‌ಯ ಮೂಲ ಗೇಣಿಯಿಂದ ಬಂದಿದ್ದು ನಾವು ಕ್ರಮವಾಗಿ ವಾರ್ಷಿಕ ಬಾಡಿಗೆ ಕಟ್ಟಿದ್ದೇವೆ. ನಮ್ಮ ಹೆಸರಿನಲ್ಲಿ ಕಾನೂನು ಪ್ರಕಾರವೇ ನೋಂದಣಿಯಾಗಿದೆ ಎಂದಿದ್ದಾರೆ.

Kachi Memon

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English