ಬಳ್ಳಾರಿ: ಇಷ್ಟು ದಿನ ಬಿಜೆಪಿಯಲ್ಲಿದ್ದು ಇದೀಗ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮುಲು ತಮ್ಮ ಚಿಹ್ನೆ ಸೀಲಿಂಗ್ ಫ್ಯಾನ್ ಹಿಡಿದು ಪ್ರಚಾರ ನಡೆಸಲು ಬೀದಿಗಿಳಿದಿದ್ದಾರೆ.
ಬಳ್ಳಾರಿ ಜನರಿಗೆ ಶ್ರೀರಾಮುಲು ಅಂದರೆ ಬಿಜೆಪಿ ಹಾಗೂ ಕಮಲ ಎಂದರೆ ರಾಮುಲು ಎಂಬಾಂತಾಗಿತ್ತು. ಹೀಗಾಗಿ ಹಳ್ಳಿಗಾಡಿನ ಜನರಿಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ರಾಮುಲು ಮತದಾರರಿಗೆ ತನ್ನ ಚುನಾವಣಾ ಪ್ರಚಾರದಲ್ಲಿ ತಿಳಿಸಿದರು.
ಬುಧವಾರ ಮೋಕಾ, ಯರಗುಡಿ, ಬೆಣಕಲ್ಲು, ಸಿಂಧವಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಶ್ರೀರಾಮುಲು, ಫ್ಯಾನ್ಗೆ ಮತ ನೀಡುವಂತೆ ಮತದಾರರದಲ್ಲಿ ಮನವಿಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಸುರೇಶ ಬಾಬು, ಸಂಸದರಾದ ಜೆ ಶಾಂತಾ, ಸಣ್ಣ ಪಕೀರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English