ಯಾವುದೇ ನಾಯಕರ ಮನೆ ಬಾಗಿಲಿಗೆ ಹೋಗಿ ಸಚಿವ ಮಾಡಿ ಅಂತ ಕೇಳಿಲ್ಲ: ರಾಮಲಿಂಗಾರೆಡ್ಡಿ

3:25 PM, Wednesday, June 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

ramlinga-reddyಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾದ ಹಿನ್ನೆಲೆ ರಾಮಲಿಂಗಾರೆಡ್ಡಿ ಮತ್ತು ಸೌಮ್ಯಾ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಮೊದಲಿಗೆ ಎಲ್ಲ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸಿದರು.

ಈ ವೇಳೆ ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಲ ಪಕ್ಷಗಳು ಗೆಲ್ಲುವ ದೃಷ್ಟಿಯಿಂದ ಅಭ್ಯರ್ಥಿ ಹಾಕ್ತಾರೆ. ನಾವು ಗೆಲ್ಲುವ ಉದ್ದೇಶದಿಂದ ಸ್ಪರ್ಧೆ ಮಾಡಿದ್ವಿ ಅಂತ ಹೇಳಿದರು. ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಹಾಗೂ ಜಯನಗರ ಕ್ಷೇತ್ರದ ಪ್ರತಿ ಕಾಂಗ್ರೆಸ್ ನಾಯಕರಿಗೆ, ಸ್ಥಳೀಯ ಕಾರ್ಪೋರೇಟರ್‌ಗೆ ಧನ್ಯವಾದಗಳನ್ನ ತಿಳಿಸಿ, ಕೊಟ್ಟ ಆಶ್ವಾಸನೆ ಈಡೇರಿಸುತ್ತೇವೆ. ನಮ್ದೇ ಸಮೀಶ್ರ ಸರ್ಕಾರ ಇದ್ದು, ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಲಾಗುವುದು ಅಂತ ವಿಶ್ವಾಸದ ಮಾತುಗಳನ್ನ ಆಡಿದರು.

ಕಡಿಮೆ ಅಂತರದಲ್ಲಿ ಕಾಂಗ್ರೆಸ್ ಗೆದ್ದ ವಿಚಾರದ ಬಗ್ಗೆ ಮಾತಾನಾಡಿದ ಅವರು, ಸ್ವಲ್ಪ ನೆಕ್ ಟು ನೆಕ್ ಫೈಟ್ ಇತ್ತು. ನಾವು ಈ ಹಿಂದೆ ಇಲ್ಲಿ ಸೋತಿದ್ದೇವೆ. ಸದ್ಯ ಕಡಿಮೆ ಅಂತರದಲ್ಲಿ ಗೆದ್ದಿದ್ದೇವೆ. ಜೆಡಿಎಸ್ ಇಲ್ಲದೆ ಇದ್ರೆ ಕಾಂಗ್ರೆಸ್‌ಗೆ ಗೆಲುವು ಕಷ್ಟ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಬೆಂಬಲ ಅನುಕೂಲವಾಯ್ತು. ಪಕ್ಷೇತರ ಅಭ್ಯರ್ಥಿಗಳು ಕೂಡಾ ಬೆಂಬಲ ನೀಡಿದ್ದಾರೆ. ಎಲ್ಲರ ಪರಿಶ್ರಮದಿಂದ ಗೆಲುವು ದಕ್ಕಿದೆ. ರಾಜಕಾರಣಕ್ಕೆ ಮಗಳು ಬರ್ತಾಳೆ ಅಂತ ಅಂದುಕೊಂಡಿರಲಿಲ್ಲ. ಪರಿಸರ ಕಾಳಜಿ ಬಗ್ಗೆ ಬಹಳ ಆಸಕ್ತಿ ಇತ್ತು. ರಾಜಕಾರಣಕ್ಕೆ ಬರುತ್ತೇನೆ ಎಂಬ ತುಡಿತ ವ್ಯಕ್ತಪಡಿಸಿದಳು. ಹೀಗಾಗಿ ರಾಜಕೀಯಕ್ಕೆ ಬಂದಳು ಅಂತ ಹೇಳಿದ್ರು.

ಬೆಂಗಳೂರಿನಲ್ಲಿ 15 ಸ್ಥಾನ ಗೆಲ್ತಾರೆ ಅಂತ ಹೇಳಿದ್ದೆ, ಗೆದ್ದಾಗಿದೆ. ಅರ್ಹತೆ ಇದ್ರೆ ಸಚಿವ ಸ್ಥಾನ ಕೊಡಲಿ. ನಾನು ಯಾವಾಗ್ಲೂ ಸಚಿವ ಸ್ಥಾನ ಕೊಡಿ ಅಂತ ಕೇಳಿಲ್ಲ. ಅದೃಷ್ಟ ಇದ್ದವರಿಗೆ ಸಚಿವ ಸ್ಥಾನ ಒಲಿಯುತ್ತೆ. ಸಿದ್ದರಾಮಯ್ಯ, ಪರಮೇಶ್ವರ್‌, ವೇಣುಗೋಪಾಲ್‌ ಯಾರ ಬಳಿಯೂ ನಾನು ಲಾಬಿ ನಡೆಸಿಲ್ಲ. ಸಾಮಾರ್ಥ್ಯದಿಂದ ನನಗೆ ಸಚಿವ ಸ್ಥಾನ ನೀಡೋದಾದ್ರೆ ನೀಡಲಿ ಅಂತ ರಾಮಲಿಂಗಾರೆಡ್ಡಿ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.

ಇನ್ನು ಇದೇ ವೇಳೆ ಮಾತಾನಾಡಿದ ಸೌಮ್ಯಾ ರೆಡ್ಡಿ, ಬೆಂಗಳೂರಿನಲ್ಲಿ ಮಹಿಳಾ ಶಾಸಕಿಯರು ಇರಲಿಲ್ಲ. ಮಹಿಳಾ ಸಬಲೀಕರಣ ಕುರಿತು ಅಭಿವೃದ್ಧಿಪರ ಕೆಲಸ ಮಾಡುತ್ತೇನೆ. ಜಯನಗರ ಕ್ಷೇತ್ರದ ಅಭಿವೃದ್ಧಿ ಮಾತ್ರ ನನ್ನ ಉದ್ದೇಶ. ಬೇರೆ ಯಾವುದೇ ವಿಷಯಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English