ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವ ನೇತೃತ್ವದ ನೂತನ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಆರು ಲಕ್ಷ ನೌಕರರ ಮೂಲ ವೇತನದಲ್ಲಿ ಶೇ 1.75ರಷ್ಟು ಹೆಚ್ಚಳ ಶಿಫಾರಸಿಗೆ ಸಮ್ಮತಿ ಸಿಕ್ಕಿದೆ.
ಹಣಕಾಸು ಖಾತೆ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಬಜೆಟ್ ಪೂರ್ವಭಾವಿ ಸಭೆ ಕರೆದಿದ್ದು ಆ ವೇಳೆ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಈ ಹೆಚ್ಚಳವು ಜನವರಿ 1, 2018ರಿಂದ ಪೂರ್ವಾನ್ವಯವಾಗಲಿದೆ. ಈ ಸೌಲಭ್ಯವು ರಾಜ್ಯ ಸರ್ಕಾರಿ ನೌಕರರು, ಜಿಲ್ಲಾಪಂಚಾಯತ್ ಪೂರ್ನಾವಧಿ ನೌಕರರು, ಸರ್ಕಾರಿ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆ, ಪೂರ್ಣಾವಧಿ ನೌಕರರುಗಳಿಗೆ ಅನ್ವಯಿಸಲಿದೆ.
ಈ ತುಟ್ಟಿ ಭತ್ಯೆ ಹೆಚ್ಚಳದ ಕಾರಣ ಬೊಕ್ಕಸಕ್ಕೆ ಸುಮಾರು 560 ಕೋಟಿ ಹೊರೆ ಬೀಳುತ್ತದೆ ಎನ್ನಲಾಗಿದೆ.
`
ಏತನ್ಮಧ್ಯೆ ರಾಜ್ಯ ಸರ್ಕಾರಿ ನೌಕರರ ಸಂಘವು ಶೇ.4.25ರ ಮೂಲ ವೇತನ ಹೆಚ್ಚಳಕ್ಕೆ ಸಲ್ಲಿಸಿದ್ದ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ.
ಇದಕ್ಕೂ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಪ್ರಮಾಣದಲ್ಲಿ ಶೇ 2ರಷ್ಟು ಹೆಚ್ಚಳ ಮಾಡಿತ್ತು.
Click this button or press Ctrl+G to toggle between Kannada and English