ಬೈಂದೂರು: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಳ್ಳದಲ್ಲಿ 3ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಬಂಟ್ವಾಳ ಗ್ರಾಮ ಪಂಚಾಯತ್ ಸಂಬಂಧಪಟ್ಟಿರುವ 2003,2004 ಹಾಗೂ 2011 ಇಸವಿಯ ಸಾಕಷ್ಟು ಪಡಿತರ ಚೀಟಿಗಳು ಪತ್ತೆಯಾಗಿದೆ. ಇಷ್ಟೇ ಅಲ್ಲದೇ ಗ್ರಾಮ ಪಂಚಾಯತ್ನ ಹಲವಾರು ದಾಖಲೆಗಳು ಕೂಡ ಪತ್ತೆಯಾಗಿದೆ.
ಬುಧವಾರ ತಡರಾತ್ರಿ ಅಪರಿಚಿತರು ಬಂದು ಬಿಸಾಡಿರುವುದು ಅಥವಾ ಗುಜರಿ ವಾಹನದಿಂದ ಗೋಣಿ ಚೀಲ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಬೈಂದೂರು ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Click this button or press Ctrl+G to toggle between Kannada and English