ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಗಳಿಗೆ ಸಾವಿನ ಬಗ್ಗೆ ಮೊದಲೇ ತಿಳಿದಿತ್ತು

Friday, July 20th, 2018
shiroor swami

ಉಡುಪಿ : ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಗಳ ಸಾವಿನ ಬಗ್ಗೆ ಎರಡು ತಿಂಗಳ ಮೊದಲೇ ಸೂಚನೆ ಲಭಿಸಿತ್ತು. ಅದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅವರ ಆಪ್ತ ಭಕ್ತರ ವಲಯ ಹೇಳಿಕೊಂಡಿದೆ. ಯೇನಿದು ಸಾವಿನ ರಹಸ್ಯ: ತುಳುನಾಡಿನಲ್ಲಿ ದೈವ ದೇವರುಗಳ ಮೇಲೆ ಬಲವಾದ ನಂಬಿಕೆಯಿದೆ. ಅದರೆ ಇಲ್ಲಿ ಮಾತನಾಡುವ ದೇವರು ಎಂದರೆ ಭೂತಾರಾಧನೆ. ಎರಡು ತಿಂಗಳ ಹಿಂದೆ ಪಡುಬಿದ್ರೆಯಲ್ಲಿ ಬಾಲು ಪೂಜಾರಿ ಎಂಬವರ ಮನೆಯಲ್ಲಿ ಧರ್ಮನೇವವೊಂದು ನಡೆಯುತ್ತದೆ. ಅಲ್ಲಿಗೆ ಲಕ್ಷ್ಮೀವರ ತೀರ್ಥ ಸ್ವಾಮಿಗಳಿಗೂ ಅಹ್ವಾನವಿತ್ತು. ಅಲ್ಲಿ […]

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ

Wednesday, July 18th, 2018
shiroor swamiji

ಉಡುಪಿ : ಅಷ್ಟ ಮಠದ ವಿವಾದದಲ್ಲಿದ್ದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಬುಧವಾರ ಬೆಳಗ್ಗೆ ಅಸ್ವಸ್ಥರಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವಾಮೀಜಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಿಪರೀತ ವಾಂತಿ ಮಾಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆಯ ವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸ್ವಾಮೀಜಿಯವರನ್ನು ಡಯಾಲಿಸಿಸ್ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಸ್ವಾಮೀಜಿಯ ಆಪ್ತವಲಯದವರು ತಿಳಿಸಿದ್ದಾರೆ. ಸ್ವಾಮೀಜಿ ರಕ್ತ ವಾಂತಿ ಮಾಡುತ್ತಿದ್ದು, ರಕ್ತದೊತ್ತಡ ಮತ್ತು ಹೃದಯಬಡಿತ […]

ಶಿರೂರು ರಾಷ್ಟ್ರೀಯ ಹೆದ್ದಾರಿ ಹಳ್ಳದಲ್ಲಿ 3ಸಾವಿರಕ್ಕೂ ಅಧಿಕ ಪಡಿತರ ಚೀಟಿ..!

Thursday, June 21st, 2018
ration-card

ಬೈಂದೂರು: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಳ್ಳದಲ್ಲಿ 3ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ. ಬಂಟ್ವಾಳ ಗ್ರಾಮ ಪಂಚಾಯತ್ ಸಂಬಂಧಪಟ್ಟಿರುವ 2003,2004 ಹಾಗೂ 2011 ಇಸವಿಯ ಸಾಕಷ್ಟು ಪಡಿತರ ಚೀಟಿಗಳು ಪತ್ತೆಯಾಗಿದೆ. ಇಷ್ಟೇ ಅಲ್ಲದೇ ಗ್ರಾಮ ಪಂಚಾಯತ್‍ನ ಹಲವಾರು ದಾಖಲೆಗಳು ಕೂಡ ಪತ್ತೆಯಾಗಿದೆ. ಬುಧವಾರ ತಡರಾತ್ರಿ ಅಪರಿಚಿತರು ಬಂದು ಬಿಸಾಡಿರುವುದು ಅಥವಾ ಗುಜರಿ ವಾಹನದಿಂದ ಗೋಣಿ ಚೀಲ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬೈಂದೂರು ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ […]

ಕೊಪ್ಪಳ ಜಿಲ್ಲೆಯಲ್ಲೂ ಅಬ್ಬರಿಸಿದ ಮಳೆರಾಯ… ಹಲವೆಡೆ ಅವಾಂತರ

Wednesday, May 30th, 2018
kopal-dst

ಕೊಪ್ಪಳ: ಜಿಲ್ಲೆಯಾದ್ಯಂತ ಮಳೆರಾಯ ನಿನ್ನೆ ರಾತ್ರಿ ಅಬ್ಬರಿಸಿದ್ದು, ವ್ಯಾಪಕ ಮಳೆಗೆ ಜಿಲ್ಲೆಯ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಸುಮಾರು ಗಂಟೆಗಳ ಕಾಲ ಸುರಿದ ಮಳೆಗೆ ತಗ್ಗುಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಒಂದಿಷ್ಟು ಅಸ್ತವ್ಯಸ್ಥಗೊಂಡಿದೆ. ಇನ್ನು ಕೆಲವೆಡೆ ಹಳ್ಳಗಳಿಗೆ ನಿರ್ಮಿಸಲಾಗಿರುವ ತಾತ್ಕಾಲಿಕ ಸೇತುವೆಗಳು ಒಡೆದು ಹೋಗಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಸುಮಾರು 18 ಕಿಮೀ ಹೆಚ್ಚು ದೂರ ಸುತ್ತಿಕೊಂಡು ಬೇರೆ ಬೇರೆ ಊರುಗಳಿಗೆ ತೆರಳಬೇಕಿದೆ. ಶಿರೂರು […]