ಉಡುಪಿ : ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಗಳ ಸಾವಿನ ಬಗ್ಗೆ ಎರಡು ತಿಂಗಳ ಮೊದಲೇ ಸೂಚನೆ ಲಭಿಸಿತ್ತು. ಅದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅವರ ಆಪ್ತ ಭಕ್ತರ ವಲಯ ಹೇಳಿಕೊಂಡಿದೆ.
ಯೇನಿದು ಸಾವಿನ ರಹಸ್ಯ: ತುಳುನಾಡಿನಲ್ಲಿ ದೈವ ದೇವರುಗಳ ಮೇಲೆ ಬಲವಾದ ನಂಬಿಕೆಯಿದೆ. ಅದರೆ ಇಲ್ಲಿ ಮಾತನಾಡುವ ದೇವರು ಎಂದರೆ ಭೂತಾರಾಧನೆ. ಎರಡು ತಿಂಗಳ ಹಿಂದೆ ಪಡುಬಿದ್ರೆಯಲ್ಲಿ ಬಾಲು ಪೂಜಾರಿ ಎಂಬವರ ಮನೆಯಲ್ಲಿ ಧರ್ಮನೇವವೊಂದು ನಡೆಯುತ್ತದೆ. ಅಲ್ಲಿಗೆ ಲಕ್ಷ್ಮೀವರ ತೀರ್ಥ ಸ್ವಾಮಿಗಳಿಗೂ ಅಹ್ವಾನವಿತ್ತು. ಅಲ್ಲಿ ಕೊಡಮಾಣಿತ್ತಾಯ ದೈವದ ನೇಮ ನಡೆಯುತ್ತಿತ್ತು. ಅದೇ ಸಂದರ್ಭ ಸ್ವಾಮಿಗೆ ದೈವ ಸನ್ನೆ ಮಾಡಿ ಸಾವಿನ ಸೂಚನೆ ನೀಡಿದೆ. ನಾಲಗೆ ತೋರಿಸಿ ನನ್ನ ಮಾತು ನಿಜ ಎಂದು ಎಚ್ಚರಿಸಿದೆ. ಆದರೆ ಸ್ವಾಮಿಜೀ ದೈವದ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಈ ವಿಡಿಯೋದಲ್ಲಿ ಅದು ಸ್ಪಷ್ಟವಾಗಿ ನಾವು ನೋಡಬಹುದು. ದೈವ ಹೇಳುವುದನ್ನು ಸ್ವಾಮಿಜೀ ಪ್ರಶ್ನಿಸುತಿದ್ದರು. ಸಾಮಾನ್ಯವಾಗಿ ದೈವಾರಾಧಕರಿಗೆ ದೈವಗಳು ಹೇಳುವ ನುಡಿಗಳು ಅರ್ಥವಾಗುತ್ತದೆ. ಸ್ವಾಮೀಜಿಗೂ ಇದು ಅರ್ಥವಾಗಿದೆ ಎಂದು ಅಲ್ಲಿದ್ದ ಜನ ಹೇಳಿದ್ದರು.
ಇದೇ ರೀತಿ ಇನ್ನೊಂದು ನೇಮೋತ್ಸವದಲ್ಲಿ ಶಿರೂರು ಸ್ವಾಮಿಗಳಿಗೆ ಕೊರ್ದಬ್ಬು ದೈವ ತಾವು ಚುನಾವಣೆಗೆ ನಿಲ್ಲುವುದರಿಂದ ನಿಮಗೆ ಹಿನ್ನಡೆಯಾಗುತ್ತದೆ ಎಂದು ನುಡಿದಿತ್ತಂತೆ. ಆದರೆ ಸ್ವಾಮೀಜಿ ಆ ಮಾತನ್ನು ಗಂಬೀರವಾಗಿ ಯೋಚಿಸಲಿರಲಿಲ್ಲ. ದೈವದ ಈ ಮಾತು ಅವರ ಜೀವನದಲ್ಲಿಪರಿಣಾಮ ಬೀರಿದೆ ಎಂದು ಭಕ್ತರು ಹೇಳುತ್ತಿದ್ದಾರೆ.
Click this button or press Ctrl+G to toggle between Kannada and English