ತುಳುನಾಡ ರಕ್ಷಣಾ ವೇದಿಕೆ ವೆಬ್ ಸೈಟ್ ಲೋಕಾರ್ಪಣೆ

5:47 PM, Monday, June 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

trv websiteಮಂಗಳೂರು :  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿ ಸಭಾಂಗಣದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧಿಕೃತ ಅಂತರ್ಜಾಲ ತಾಣ (ವೆಬ್ ಸೈಟ್) ಸೋಮವಾರ ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ. ಭಂಡಾರಿ ಮಾತನಾಡಿ ತುರವೇ ಸಮಾಜದ ನಾಡಿ ಮಿಡಿತವಾಗಿ ಬೆಳೆಯುತ್ತಿದೆ, ಇದರ ಕಾರ್ಯಚಟುವಟಿಕೆಗಳು ಬಹುತೇಕ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿದ್ದು ತುಳುವರಾದ ನಮಗೆ ಹೆಮ್ಮೆಯ ಸಂಗತಿಯಾಗಿದೆ, ಇದೀಗ ದಶಮಾನೋತ್ಸವದ ಸುಸಂಧರ್ಭದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದರ ವೆಬ್ ಸೈಟ್ ಲೋಕಾರ್ಪಣೆಗೊಳಿಸಿದ್ದು ಶ್ಲಾಘನೀಯ ಎಂದರು.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ  ಯೋಗೀಶ್ ಶೆಟ್ಟಿ ಜೆಪ್ಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಿಟಿ ಕ್ರೈಮ್ ಬ್ರಾಂಚ್ ಇನ್ಸ್ ಪೆಕ್ಟರ್ ಶಾಂತಾರಾಮ್ http://tulunadarakshanavedike.com/ವೈಬ್ ಸೈಟ್ ಲೋಕಾರ್ಪಣೆಗೊಳಿಸಿದರು, ಅಖಿಲ ಬಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ವಿಧುಷಿ ಸೌಮ್ಯ ಸುಧೀಂದ್ರ ರಾವ್, ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

trv websiteಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ.ಸಿರಾಜ್ ಅಡ್ಕರೆ ಪ್ರಾಸ್ತಾವಿಕ ಹಾಗೂ ಸ್ವಾಗತ ಮಾಡಿದರು, ಕಾಸರಗೊಡು ಜಿಲ್ಲಾಧ್ಯಕ್ಷರಾದ ಭಾಸ್ಕರ ಕಾಸರಗೋಡು ನಿರೂಪಣೆಗೈದರು.

ತುರವೇ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ  ಆನಂದ್ ಅಮೀನ್ ಅಡ್ಯಾರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಜೈನ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹಮೀದ್ ಹಸನ್ ಮಾಡೂರು, ಉಡುಪಿ ಜಿಲ್ಲಾಧ್ಯಕ್ಷರಾದ ರಮೆಶ್ ಪೂಜಾರಿ ಶೀರೂರು, ಯುವ ಘಟಕದ ಪ್ರಸಾದ್ ಕೊಂಚಾಡಿ, ಪ್ರಸಾದ್ ಬಿಜೈ, ನಾಗಾರಾಜ್, ಶಿವಪ್ರಸಾದ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಮಹಿಳಾ ಘಟಕದ ಅದ್ಯಕ್ಷೆಯಾದ ವಿದ್ಯಾ ಯು. ಜ್ಯೋಗಿ, ಮಮತಾ ರಾವ್, ಆಸೀಫ್ ಜಪ್ಪು ಪಟ್ನ, ಶ್ರೀಕಾಂತ್ ಸಲ್ಯಾನ್, ಶಿವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English