ತಲೆಸುತ್ತು ಬಂದು ಸ್ಟಿಯರಿಂಗ್ ಕೈಬಿಟ್ಟ ಚಾಲಕ..ನದಿ ಪಾಲಾಗುತ್ತಿದ್ದ 25 ಮಂದಿ ರಕ್ಷಿಸಿದ ಕಂಡಕ್ಟರ್!

5:29 PM, Tuesday, June 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

conductorಶಿವಮೊಗ್ಗ: ಶಿವಮೊಗ್ಗದಿಂದ ಮಂಗಳೂರು ಕಡೆ ಹೊರಟಿದ್ದ ಕ್ರಿಸ್ತರಾಜ ಬಸ್‍ನ ಪ್ರಯಾಣಿಕರು ಜಲಸಮಾಧಿಯಾಗುತ್ತಿದ್ದರು. ಆದರೆ ಕಂಡಕ್ಟರ್ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಸುಮಾರು 25 ಮಂದಿಯ ಪ್ರಾಣ ಉಳಿದಿದೆ.

ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು ನಿರ್ವಾಹಕ ಭಗವಾನ್ ಸಮಯಪ್ರಜ್ಞೆಗೆ ಪ್ರಯಾಣಿಕರಿಗೆ ಕಂಡಕ್ಟರ್ ಇಂದು ದೇವರಂತೆ ಕಾಪಾಡಿದ್ದಾರೆ.

ಇಂದು ಮಳೆ ಪುನಃ ಆರಂಭವಾಗಿದೆ. ಮಂಡಗದ್ದೆ ಸಮೀಪ ರಸ್ತೆಯೆಲ್ಲಾ ಜಾರುಬಂಡೆಯಾಗಿದೆ. ಇಂತಹ ಸಮಯದಲ್ಲಿ ಇಲ್ಲಿನ ಅಪಗಘಾತ ವಲಯ 17ನೇ ಮೈಲುಗಲ್ಲು ಬಳಿ ಬಂದ ಕಿಸ್ತರಾಜ’ ಬಸ್‍ಗೆ ಗ್ರಹಚಾರ ಕಾದಿತ್ತು. ಬಸ್‍ನ ಚಾಲಕ ಅಪ್ಸರ್ ಗೆ ತಲೆಸುತ್ತು ಬಂದು ಬಸ್ ಸ್ಟೀಯರಿಂಗ್ ಕೈಬಿಟ್ಟಿದ್ದರು. ಉಡುಪಿ-ಮಂಗಳೂರು ಬಸ್ ಆಗಿದ್ದರಿಂದ ಟಿಕೆಟ್ ಮಾಡಿ ಮುಗಿಸಿದ್ದ ಕಂಡಕ್ಟರ್ ಭಗವಾನ್, ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ಅವಘಡಕ್ಕೆ ತುತ್ತಾಗುತ್ತಿದ್ದ ಬಸ್‍ನ್ನ ತಕ್ಷಣ ಸ್ಟೀಯರಿಂಗ್ ತಿರುಗಿಸಿದ್ದಾರೆ. ತುಂಗಾನದಿಯತ್ತ ಹೊರಳಿದ್ದ ಬಸ್‍ನ್ನ ತಿರುಗಿಸಿ ಸುಮಾರು 25 ಜನರ ಜೀವ ಉಳಿಸಿದ್ದಾರೆ.

ದುರಂತ ಎಂದರೆ ಪ್ರಾಣಭಯದಿಂದ ಬಸ್‍ನಿಂದ ಹಾರಿದ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ತೀರ್ಥಹಳ್ಳಿಯ ಬದನೇಹಕ್ಲು ಗ್ರಾಮದ ಭಗವಾನ್ ಇವತ್ತು ಪ್ರಯಾಣಿಕರ ಪಾಲಿಗೆ ದೇವರಾಗಿದ್ದಾರೆ. ಅವರ ಈ ಕಾರ್ಯಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English