ಬರೋಬ್ಬರಿ 18 ವರ್ಷಗಳ ನಂತರ ತುಂಬಿದ ಕೆರೆ

4:39 PM, Wednesday, June 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

riverಮೈಸೂರು: ಒಣಗಿ ಬರಡಾಗಿದ್ದ ಕೆರೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳಬೇಕೆಂದು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದರು. ಆದರೆ ಅವರ ತೀರ್ಮಾನವನ್ನೇ ತಲೆಕೆಳಗಾಗುವಂತೆ ಬತ್ತಿದ್ದ ಕೆರೆಯ ಒಡಲು ತುಂಬುವಷ್ಟು ನೀರು ಬಂದಿದೆ.

ಹೌದು, ನಂಜನಗೂಡು ತಾಲೂಕಿನ ಹುರ ಗ್ರಾಮದ ಮುಂಭಾಗದಲ್ಲಿರುವ ಕೆರೆ ಕಳೆದ 18 ವರ್ಷಗಳಿಂದ ತುಂಬಿರಲಿಲ್ಲ. ಆದರೆ ಮೂರು ವರ್ಷಗಳಿಂದ ನೀರು ಬತ್ತಿದ್ದ ಪರಿಣಾಮ ಈ ಕೆರೆಯ ಮೇಲೆ ಭೂ ಮಾಫಿಯಾದವರ ಕಣ್ಣು ಒಂದು ಕಡೆಯಾದರೆ, ಮತ್ತೊದೆಡೆ ಸಾರ್ವಜನಿಕರ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರು ತೀರ್ಮಾನಿಸಿದ್ದರು.

ಆದರೆ ಇವರಿಬ್ಬರ ಲೆಕ್ಕಾಚಾರವನ್ನು ತಲೆಕೆಳಗಾಗಿ ಮಾಡಿದ ಮಳೆರಾಯ ಬತ್ತಿದ್ದ ಕೆರೆಯ ಒಡಲನ್ನು ತುಂಬಿಸಿದ್ದಾನೆ. ಸುಮಾರು 50 ಎಕರೆ ಪ್ರದೇಶಕ್ಕಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಈ ಕೆರೆ ತುಂಬಿರುವುದರಿಂದ ಗ್ರಾಮಸ್ಥರಲ್ಲಿ ಮಂದಹಾಸ ಮೂಡಿ, ಜಾನುವಾರುಗಳಿಗೂ ನೀರಿನ ಕೊರತೆ ನೀಗಿದೆ. ಕೆರೆ ತುಂಬಿರುವುದರಿಂದ ಅಕ್ಕಪಕ್ಕದ ಹೊಲಗಳಿಗೂ ನೀರಿನ ಅಭಾವ ಕಡಿಮೆಯಾಗಿದ್ದು, ಕೆರೆಗೆ ಬಾಗಿನ ಅರ್ಪಿಸಲು ಗ್ರಾಮಸ್ಥರು ಖುಷಿಯಲ್ಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English