ವಾಟಾಳ್ ನಾಗರಾಜ್ ಪತ್ನಿ ಜ್ಞಾನಾಂಬಿಕೆ ನಿಧನ

Wednesday, August 5th, 2020
jnanabike

ಬೆಂಗಳೂರು : ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಪತ್ನಿ ಜ್ಞಾನಾಂಬಿಕೆ (60) ಮಂಗಳವಾರ ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಅವರು ಮಂಗಳವಾರ ಸಂಜೆ 7:30ಕ್ಕೆ ಶೇಷಾದ್ರಿ ಪುರಂನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲನಿಯ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಬುಧವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸ್ವಗ್ರಾಮದಲ್ಲಿ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ಮಾಹಿತಿ […]

ಪ್ರಿಯತಮೆಯ ಮನೆ ಮುಂದೆಯೇ ಕತ್ತು ಕುಯ್ದುಕೊಂಡ ಪ್ರೇಮಿಗಳು

Friday, July 10th, 2020
lovers

ಮೈಸೂರು : ಅಂತರ್ಜಾತಿ ವಿವಾಹಕ್ಕೆಒಪ್ಪದ ಮನೆಯವರ ಮುಂದೆಯೇ ಪ್ರೇಮಿಗಳಿಬ್ಬರು ಕತ್ತು ಕುಯ್ದುಕೊಂಡ  ಘಟನೆ ನಂಜನಗೂಡು ತಾಲ್ಲೂಕಿನ ದುಗ್ಗ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯವರ ವಿರೋಧ ವ್ಯಕ್ತವಾದ ಕಾರಣ ಗ್ರಾಮದಲ್ಲಿರುವ ಪ್ರಿಯತಮೆಯ ಮನೆ ಮುಂದೆ ಇಬ್ಬರೂ ಕತ್ತು ಕುಯ್ದುಕೊಂಡು ವಿಲ ವಿಲ ಒದ್ದಾಡುತ್ತಿದ್ದಾಗಲೇ ಗಂಭೀರ  ಪರಿಸ್ಥಿತಿಯಲ್ಲಿ  ಪ್ರೇಮಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಇವರ ಮದುವೆಗೆ ಎರಡೂ ಕುಟುಂಬದ ಒಪ್ಪಿಗೆಯಿರಲಿಲ್ಲ. ಇದರಿಂದ ನೊಂದ ಪ್ರೇಮಿಗಳು, ಯುವತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ, ಆಯಂಬುಲೆನ್ಸ್ […]

ಮೈಸೂರು : ತಹಶೀಲ್ದಾರ್ ವಿರುದ್ಧ ರೈತರ ಪ್ರತಿಭಟನೆ

Monday, September 23rd, 2019
mysuru

ಮೈಸೂರು : ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರ ಬಂಧನ ಖಂಡಿಸಿ, ನಂಜನಗೂಡು ತಹಶೀಲ್ದಾರ್ ಕೆ‌. ಮಹೇಶ್ ವಿರುದ್ಧ ಜಿಲ್ಲಾಧಿಕಾರಿ ಎದುರು ರೈತರು ಪ್ರತಿಭಟನೆ ನಡೆಸಿದರು. ನಂಜನಗೂಡು ತಾಲೂಕು ಕಚೇರಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲು ಹೋದ ಸಮಯದಲ್ಲಿ ತಹಶೀಲ್ದಾರ್ ರೈತರ ಜೊತೆ ಸರಿಯಾಗಿ ವರ್ತಿಸಿಲ್ಲ. ಇದೇ ಸಂದರ್ಭದಲ್ಲಿ ನಗರ ಜಿಲ್ಲಾಧ್ಯಕ್ಷ ಮಂಜುನಾಥ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ‌ ಎಂದು ರೈತರು ಆರೋಪಿಸಿದ್ದಾರೆ. ಮಂಜುನಾಥ್ ಅವರನ್ನು ಕೂಡಲೇ ಬಿಡುಗಡೆಗೊಳಿಸಿ ತಹಶೀಲ್ದಾರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ […]

ಬೈಕ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

Thursday, August 29th, 2019
bike-car-dikki

ಮೈಸೂರು : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು- ಗುಂಡ್ಲುಪೇಟೆ ಹೆದ್ದಾರಿಯ ಸಿಂಧುವಳ್ಳಿ ಪುರ ಬಳಿ ನಡೆದಿದೆ. ಕಿರಣ್ ಕುಮಾರ್ ಹಾಗೂ ಪ್ರತಾಪ್ ಮೃತ ದುರ್ದೈವಿಗಳು, ಇವರು ಗುಂಡ್ಲುಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳೆಂದು ಗುರುತಿಸಲಾಗಿದೆ. ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಹೆದ್ದಾರಿಯಲ್ಲಿ ಬರುವಾಗ, ಗುಂಡ್ಲುಪೇಟೆಯಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಪುಡಿ ಪುಡಿಯಾಗಿದೆ. ಇನ್ನು ಯುವಕರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ […]

ಬರೋಬ್ಬರಿ 18 ವರ್ಷಗಳ ನಂತರ ತುಂಬಿದ ಕೆರೆ

Wednesday, June 27th, 2018
river

ಮೈಸೂರು: ಒಣಗಿ ಬರಡಾಗಿದ್ದ ಕೆರೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳಬೇಕೆಂದು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದರು. ಆದರೆ ಅವರ ತೀರ್ಮಾನವನ್ನೇ ತಲೆಕೆಳಗಾಗುವಂತೆ ಬತ್ತಿದ್ದ ಕೆರೆಯ ಒಡಲು ತುಂಬುವಷ್ಟು ನೀರು ಬಂದಿದೆ. ಹೌದು, ನಂಜನಗೂಡು ತಾಲೂಕಿನ ಹುರ ಗ್ರಾಮದ ಮುಂಭಾಗದಲ್ಲಿರುವ ಕೆರೆ ಕಳೆದ 18 ವರ್ಷಗಳಿಂದ ತುಂಬಿರಲಿಲ್ಲ. ಆದರೆ ಮೂರು ವರ್ಷಗಳಿಂದ ನೀರು ಬತ್ತಿದ್ದ ಪರಿಣಾಮ ಈ ಕೆರೆಯ ಮೇಲೆ ಭೂ ಮಾಫಿಯಾದವರ ಕಣ್ಣು ಒಂದು ಕಡೆಯಾದರೆ, ಮತ್ತೊದೆಡೆ ಸಾರ್ವಜನಿಕರ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರು ತೀರ್ಮಾನಿಸಿದ್ದರು. ಆದರೆ ಇವರಿಬ್ಬರ ಲೆಕ್ಕಾಚಾರವನ್ನು […]