ಪ್ರಿಯತಮೆಯ ಮನೆ ಮುಂದೆಯೇ ಕತ್ತು ಕುಯ್ದುಕೊಂಡ ಪ್ರೇಮಿಗಳು

11:30 AM, Friday, July 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

loversಮೈಸೂರು : ಅಂತರ್ಜಾತಿ ವಿವಾಹಕ್ಕೆಒಪ್ಪದ ಮನೆಯವರ ಮುಂದೆಯೇ ಪ್ರೇಮಿಗಳಿಬ್ಬರು ಕತ್ತು ಕುಯ್ದುಕೊಂಡ  ಘಟನೆ ನಂಜನಗೂಡು ತಾಲ್ಲೂಕಿನ ದುಗ್ಗ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಯವರ ವಿರೋಧ ವ್ಯಕ್ತವಾದ ಕಾರಣ ಗ್ರಾಮದಲ್ಲಿರುವ ಪ್ರಿಯತಮೆಯ ಮನೆ ಮುಂದೆ ಇಬ್ಬರೂ ಕತ್ತು ಕುಯ್ದುಕೊಂಡು ವಿಲ ವಿಲ ಒದ್ದಾಡುತ್ತಿದ್ದಾಗಲೇ ಗಂಭೀರ  ಪರಿಸ್ಥಿತಿಯಲ್ಲಿ  ಪ್ರೇಮಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಸ್ಪರ ಪ್ರೀತಿಸುತ್ತಿದ್ದ ಇವರ ಮದುವೆಗೆ ಎರಡೂ ಕುಟುಂಬದ ಒಪ್ಪಿಗೆಯಿರಲಿಲ್ಲ. ಇದರಿಂದ ನೊಂದ ಪ್ರೇಮಿಗಳು, ಯುವತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ, ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English