ಬೆಂಗಳೂರು ನಗರದಲ್ಲಿ ನೀರು ಕೊಡುವ ನೂತನ ಎಟಿಎಂ ಉದ್ಘಾಟನೆ..!

6:00 PM, Wednesday, June 27th, 2018
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು: ನಗರದಲ್ಲಿ ನೀರು ಕೊಡುವ ನೂತನ ಎಟಿಎಂವೊಂದನ್ನು ಉದ್ಘಾಟನೆ ಮಾಡುವ ಮೂಲಕ ಹೊಸ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಯಿತು.

ಜಯನಗರದ ಭೈರಸಂದ್ರದಲ್ಲಿ ಈ ನೀರು ಕೊಡುವ ಎಟಿಎಂ ಅನ್ನು ಶಾಸಕ ರಾಮಲಿಂಗಾರೆಡ್ಡಿ ಇಂದು ಸಾರ್ವಜನಿಕರಿಗಾಗಿ ಲೋಕಾರ್ಪಣೆಗೊಳಿಸಿದರು. ಎಟಿಎಂ ಕಾರ್ಡ್ ಇನ್ಸರ್ಟ್ ಮಾಡಿದ್ರೆ ಸಾಕು ನೀರು ಅಂತ ಬಂದವರಿಗೆ ದಾಹ ತೀರಿಸುತ್ತದೆ ಈ ‘ಭಗೀರಥ’ ಎಟಿಎಂ.

ಸ್ವಯಂ ಚಾಲಿತ ಎಟಿಎಂ ಕಾರ್ಡ್ ಹಾಗೂ ಶುದ್ಧ ನೀರಿನ ಘಟಕ ಇದಾಗಿದ್ದು ಶಾಸಕಿ ಸೌಮ್ಯ ರೆಡ್ಡಿ ಹಾಗೂ ಕಾರ್ಪೊರೇಟರ್ ನಾಗರಾಜ್ ಸಹ ಹಾಜರಿದ್ದರು. ಸಾರ್ವಜನಿಕರ ದಾಹ ತಣಿಸಲು ಇದೊಂದು ಹೊಸ ಯೋಜನೆಯಾಗಿದ್ದು, ಈ ವೇಳೆ ಕುಡಿಯುವ ನೀರು ಪಡೆಯಲು ಉಚಿತ 500 ಎಟಿಎಂ ಕಾರ್ಡ್ಗಳನ್ನು ಸ್ಲಂ ನಿವಾಸಿಗಳಿಗೆ ವಿತರಣೆ ಮಾಡಲಾಯಿತು‌.

ಇದೇ ವೇಳೆ ಮಾತನಾಡಿದ ಶಾಸಕ ಸೌಮ್ಯ ರೆಡ್ಡಿ, ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಿನ ಸಮಸ್ಯೆಯನ್ನ ಕಡಿಮೆ ಮಾಡಲೆಂದೇ ಇಂದು ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ತಂದೆ ರಾಮಲಿಂಗಾರೆಡ್ಡಿ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಸ್ಲಂ ನಿವಾಸಿಗಳಿಗೆ ಉಚಿತ 500 ಎಂಟಿಎಂ ಕಾರ್ಡ್ಗಳನ್ನ ಮಾಡಲಾಗಿದೆ. ನನ್ನ ಕ್ಷೇತ್ರದ ಪ್ರತಿ ವಾರ್ಡ್ಗಳಲ್ಲಿಯೂ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡುವೆ. ಇದಕ್ಕೆ ಜನರ ಸಹಕಾರ ಬೇಕು. ಮಹಿಳೆಯರಿಗೂ ಉತ್ತಮ ಕಾರ್ಯಕ್ರಮಗಳನ್ನು ನೀಡುವೆ. ಶೀಘ್ರ ಹೊಲಿಗೆ ಯಂತ್ರ, ಟೈಲರಿಂಗ್ ತರಬೇತಿ ಶಿಬಿರವನ್ನು ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ಕಾಪೋರೇಟರ್ ನಾಗರಾಜ್ ಮಾತಾನಾಡಿ, ಈ ನೀರು ಎಟಿಎಂ ಮಷಿನ್ ಯಾವುದೇ ವ್ಯಕ್ತಿಯ ಸಹಾಯವಿಲ್ಲದೇ ಕಾರ್ಯ ನಿರ್ವಹಿಸಲಿದೆ. ಜನರಿಗೆ ನೀಡಲಾದ ಕಾರ್ಡ್ಅನ್ನ ವಾಟರ್ ಮಷಿನ್ನಲ್ಲಿ ಸ್ಕ್ಯಾನ್ ಮಾಡಿದ್ರೆ ಸಾಕು ಶುದ್ಧವಾದ 20 ಲೀಟರ್ ಕುಡಿಯೋ ನೀರು ಸಿಗುತ್ತೆ ಅಂತ ತಿಳಿಸಿದರು‌. ಇನ್ನು, ನೀರಿಗಾಗಿ ಹಲವೆಡೆ ಪರದಾಟ ಇದೆ. ಇದಕ್ಕೆ ಬ್ರೇಕ್ ಹಾಕಲು ವಿನೂತನ ತಂತ್ರಜ್ಞಾನ ಅಳವಡಿಸಿ ನೀರಿನ ಘಟಕ ತೆರೆದಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English