ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ಹಾಗೂ ಆಡಳಿತ ವಿಕೇಂದ್ರಿಕರಣ ಕುರಿತಂತೆ ಬಿಬಿಎಂಪಿ ಪುನರ್ ವಿಂಗಡಣಾ ಸಮಿತಿಯು ತನ್ನ ಅಂತಿಮ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲಿಸಿ, ಅಧ್ಯಯನ ನಡೆಸಿದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬಿಬಿಎಂಪಿಯನ್ನು ಐದು ಕಾರ್ಪೋರೇಷನ್ಗಳಾಗಿ ವಿಭಜಿಸಬೇಕೆಂಬ ಕುರಿತು ಬಿ.ಎಸ್. ಪಾಟೀಲ್ ನೇತೃತ್ವದ ತಜ್ಞರ ಸಮಿತಿ ಶಿಫಾರಸು ಅಂತಿಮ ವರದಿ ಸಲ್ಲಿಸಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ಅಧ್ಯಕ್ಷರಾಗಿರುವ ಸಮಿತಿ ಜತೆ ಮುಖ್ಯಮಂತ್ರಿ ಅವರು ಸಭೆ ನಡೆಸಿದರು. ಅಂತಿಮ ವರದಿ ಪ್ರಕಾರ: * ಬಿಬಿಎಂಪಿಯನ್ನು ಐದು ಕಾರ್ಪೋರೇಷನ್ಗಳಾಗಿ ವಿಭಜಿಸಬೇಕು. * ಬೆಂಗಳೂರಿನ ಸಮಗ್ರತೆ ಕಾಪಾಡಲು ಗ್ರೇಟರ್ ಬೆಂಗಳೂರು ಕಾರ್ಪೋರೇಷನ್ ಅಡಿಯಲ್ಲಿ ತರಬೇಕು, * ಮೂರು ಜೋನ್ ಗಳಲ್ಲಿ ಕಾರ್ಪೋರೇಷನ್-ನಗರಪಾಲಿಕೆ-ಕಾರ್ಪೋರೇಟರ್ ನೇತೃತ್ವದ ಆಡಳಿತ ವ್ಯವಸ್ಥೆ. * ಬೆಂಗಳೂರು ಆಡಳಿತಕ್ಕೆ ಪ್ರತ್ಯೇಕವಾದ ಕಾಯಿದೆ.
ಬಿಬಿಎಂಪಿ 5000- 6000 ಕೋಟಿ ರೂ. ಕಂದಾಯ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಹಳೆ ನಗರ ಪ್ರದೇಶದಲ್ಲಿ 30,000 ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ ಪುನರ್ ವಿಂಗಡಣೆ ಮಾಡಿ 400 ವಾರ್ಡ್ ರಚನೆಗೂ ಸಮಿತಿ ಶಿಫಾರಸು * ಬಿಬಿಎಂಪಿ ಅಧಿಕಾರಿಗಳ ನೇಮಕಾತಿ ವಿಷಯದಲ್ಲೂ ಸುಧಾರಣೆಯಾಗಬೇಕು. * ಪೌರ ಕಾರ್ಮಿಕ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮಾಡುವುದು ಸೂಕ್ತ * ಗ್ರೇಟರ್ ಬೆಂಗಳೂರು ಅಥಾರಿಟಿಗೆ ಮೇಯರ್ ಆಯ್ಕೆ ಜನರಿಂದಲೇ ಆಗಬೇಕು ಮತ್ತು ಮೇಯರ್ ಅಧಿಕಾರಾವಧಿ 5 ವರ್ಷಗಳಿಗೆ ನಿಗದಿಯಾಗಬೇಕು
Click this button or press Ctrl+G to toggle between Kannada and English