ವೈದ್ಯರ ನಿವಾಸ ಮತ್ತು ಕ್ಲಿನಿಕ್‌ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ

10:30 AM, Thursday, November 24th, 2011
Share
1 Star2 Stars3 Stars4 Stars5 Stars
(3 rating, 1 votes)
Loading...

it Official Raid

ಮಂಗಳೂರು : ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ಮಂಗಳೂರಿನ ಆಯ್ದ ಪ್ರಸಿದ್ಧ ವೈದ್ಯರ ನಿವಾಸಗಳಿಗೆ ಮತ್ತು ಕ್ಲಿನಿಕ್‌ಗಳಿಗೆ ದಾಳಿ ಮಾಡಿ ದಾಖಲೆ ಪತ್ರಗಳನ್ನು ಪರಿಶೀಲಿಸಿ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಐ.ಟಿ. ಅಧಿಕಾರಿಗಳು ಕದ್ರಿಯ ಕೈಬಟ್ಟಲ್‌, ಡಾಕ್ಟರ್ ಕಾಲನಿಗಳಲ್ಲಿರುವ ವೈದ್ಯರ ನಿವಾಸಗಳು, ಬಲ್ಮಠದಲ್ಲಿರುವ ಕ್ಲಿನಿಕ್‌ಗೆ ದಾಳಿ ನಡೆಸಸಿದ್ದಾರೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಹೇಳಲಾಗುತ್ತಿದೆ ಯಾದರೂ ಯಾವ್ಯಾವ ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂಬ ವಿಚಾರ ತಿಳಿದು ಬಂದಿಲ್ಲ. ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಈ ಕುರಿತು ಯಾವುದೇ ವಿವರಗಳನ್ನು ನೀಡಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English