ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸರ್ಕಾರ‌ ನನಗೆ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ: ಸಾಲುಮರದ ತಿಮ್ಮಕ್ಕ

5:05 PM, Tuesday, July 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

salumarada-thimakkaಮಂಗಳೂರು: ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸರ್ಕಾರ‌ ನನಗೆ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ಸ್ವಂತ ಮನೆ ಬೇಕು ಎನ್ನುವ ತನ್ನ ಕನಸಿಗೆ ಸರ್ಕಾರ‌ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ತನ್ನ ಕನಸು ಸಾಕಾರಗೊಳಿಸಲಿ ಎಂದು ಸಾಲುಮರದ ತಿಮ್ಮಕ್ಕ ಅಳಲು ತೋಡಿಕೊಂಡಿದ್ದಾರೆ.

ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ವೃಕ್ಷಾಂಜಲಿ ವನ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಇದೇ ವೇಳೆ‌ ಮಾತನಾಡಿದ ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್, ಹಿಂದೆ ಯಡಿಯೂರಪ್ಪ ಸರ್ಕಾರ‌ದ ಸಂದರ್ಭದಲ್ಲಿ ಹುಲಿಕಲ್ನಲ್ಲಿ ಹೆರಿಗೆ ಆಸ್ಪತ್ರೆಯನ್ನು ನಿರ್ಮಾಣ ಮಾಡುವುದು ಮತ್ತು ಸ್ವಂತ ‌ನಿವೇಶನ ನೀಡಬೇಕೆಂಬ ಮನವಿ ಪುರಸ್ಕರಿಸಿ ಸರ್ಕಾರ‌ ಮನೆ ಮಂಜೂರು ಮಾಡಿತ್ತು. ಆದರೂ ಅದು ತುಂಬಾ ದೂರದಲ್ಲಿದೆ ಎಂದು ತಿರಸ್ಕರಿಸಲಾಯಿತು. ಆಸ್ಪತ್ರೆ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರಣಗಳನ್ನು ನೀಡಿ ಅದನ್ನು ಕೈಬಿಡಲಾಗಿದೆ. ತಿಮ್ಮಕ್ಕನವರ ಹೆಸರಿನಲ್ಲಿ ಸರ್ಕಾರ‌ ಗ್ರೀನ್ ಪಾರ್ಕ್ ನಿರ್ಮಾಣ ಮಾಡಿದ್ದರೂ ಅದರ ಮಾಹಿತಿಯನ್ನು ಅವರಿಗೆ ನೀಡಿಲ್ಲ. ತಿಮ್ಮಕ್ಕನವರಿಂದ ಉದ್ಘಾಟನೆ ಕೂಡ ಮಾಡಿಸಿಲ್ಲ ಎಂದು ಅಳಲು ತೋಡಿಕೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English