ಮಂಗಳೂರು: ಮಹಿಳಾ ಪೊಲೀಸ್ ಒಬ್ಬರು ಟ್ರಾಫಿಕ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶಾಲೆಗೆ ಹೋಗುವ ಅವರ ಮಗು ಶಾಲೆ ಬಿಟ್ಟ ನಂತರ ಅಮ್ಮನ ಜೊತೆ ಟ್ರಾಫಿಕ್ ಸಿಗ್ನಲ್ನ ಗೂಡಿನಲ್ಲಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಳ್ಯದಲ್ಲಿ ಇತ್ತೀಚೆಗೆ ಯೋಗಿತ ಎಂಬುವರನ್ನು ಟ್ರಾಫಿಕ್ ಪೊಲೀಸ್ ಆಗಿ ನಿಯೋಜಿಸಲಾಗಿತ್ತು. ಯೋಗಿತ ಅವರು ಅನಾರೋಗ್ಯದ ಕಾರಣ ಒಂದು ತಿಂಗಳು ರಜೆ ತೆಗೆದುಕೊಂಡು ಜೂನ್ 17 ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಟ್ರಾಫಿಕ್
ಪೊಲೀಸ್ ಆಗಿ ನಿಯೋಜಿಸಲಾಗಿತ್ತು. ಯೋಗಿತ ಅವರ ಪತಿ ಸೇನೆಯಲ್ಲಿದ್ದು , ಯೋಗಿತ ಅವರು ಸುಳ್ಯದ ಪೊಲೀಸ್ ಕ್ವಾಟ್ರಸ್ ನಲ್ಲಿದ್ದಾರೆ.
ಯೋಗಿತ ಅವರ ತಾಯಿ ಮನೆ ಮತ್ತು ಮಾವನ ಮನೆ ಸುಳ್ಯದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಮಗು ಶಾಲೆಗೆ ಹೋಗಿ ಮತ್ತೆ ಪೊಲೀಸ್ ಕ್ವಾಟ್ರಸ್ಗೆ ಹೋದರೆ ಒಬ್ಬಂಟಿಯಾಗಿರಲಿದೆ. ಈ ಕಾರಣದಿಂದ ಮಗುವನ್ನು ಶಾಲೆ ಬಿಟ್ಟ ಬಳಿಕ ತನ್ನ ಕರ್ತವ್ಯದ ಸ್ಥಳಕ್ಕೆ ಕರೆಸುತ್ತಾರೆ. ಮಗು ತಾಯಿಯಿ ಕರ್ತವ್ಯ ಮುಗಿಯುವ ತನಕ ಸುಳ್ಯದ ಟ್ರಾಫಿಕ್ ಗೂಡಿನಲ್ಲಿ ಕಾಲ ಕಳೆಯುತ್ತದೆ. ಮಳೆಯ ಸಂದರ್ಭದಲ್ಲಿಯೂ ಮಗು ಟ್ರಾಫಿಕ್ ಗೂಡಿನಲ್ಲೇ ಇರುತ್ತದೆ.
ಕಳೆದ ವಾರ ಸುಳ್ಯದಲ್ಲಿ ಧಾರಾಕಾರ ಮಳೆ ಸುರಿದಾಗ ಟ್ರಾಫಿಕ್ ಸಿಗ್ನಲ್ ಗೂಡಿನಲ್ಲಿ ಚಳಿಗೆ ನಡುಗುತ್ತ ನಿಂತ ಆ ಪುಟ್ಟ ಕಂದಮ್ಮನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಯೋಗಿತ ಅವರನ್ನು ಸುಳ್ಯ ನಗರ ಠಾಣೆಗೆ ನಿಯೋಜಿಸಿ ಟ್ರಾಫಿಕ್ಗೆ ಬೇರೆ ಪೊಲೀಸರನ್ನು ನಿಯೋಜಿಸಲಾಗಿದೆ.
Click this button or press Ctrl+G to toggle between Kannada and English