ಮೈಸೂರು -ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ..ಆಗಸ್ಟ್​​ 31ರವರೆಗೆ ಅನ್ವಯ!

11:23 AM, Friday, July 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

kodaguಕೊಡಗು: ಜಿಲ್ಲೆಯ ಮೈಸೂರು -ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ – 275 ಸೇರಿದಂತೆ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ನಿಯಮ ಆಗಸ್ಟ್ 31ರವರೆಗೆ ಅನ್ವಯವಾಗಲಿದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಈ ಹೆದ್ದಾರಿಗಳಲ್ಲಿ ಮರಳು, ಮರದ ದಿಮ್ಮಿ ಸೇರಿದಂತೆ ಕಂಟೇನರ್ಗಳು ತೆರಳುವುದರಿಂದ ರಸ್ತೆ ಕುಸಿಯುತ್ತಿದ್ದು, ರಸ್ತೆಯ ಇಕ್ಕೆಲಗಳಿಗೂ ಹಾನಿಯುಂಟಾಗುತ್ತಿದೆ. ಇದರಿಂದ ಅಪಘಾತ ನಡೆದು ಸ್ಥಳೀಯರ ಆಸ್ತಿಪಾಸ್ತಿಗೂ ಹಾನಿಯಾಗುತ್ತಿದೆ. ಆದ್ದರಿಂದ ಇದನ್ನೆಲ್ಲಾ ತಡೆಯಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಕೊಡಗು ಜಿಲ್ಲೆ ಒಂದು ಉತ್ತಮ ಪ್ರವಾಸಿತಾಣವಾಗಿರುವ ಹಿನ್ನೆಲೆಯಲ್ಲಿ ದಿನನಿತ್ಯ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹಾಗಾಗಿ ತುಂಬಾ ವಾಹನ ಸಂಚಾರದಿಂದ ಗುಡ್ಡ ಕುಸಿತ, ರಸ್ತೆ ಕುಸಿತ ದಂತಹ ಘಟನೆಗಳು ನಡೆಯುತ್ತಿವೆ.

ಇನ್ನೂ ಜಿಲ್ಲೆಯಲ್ಲಿರುವ ಬಹುತೇಕ ರಸ್ತೆಗಳು ಕಿರಿದಾಗಿದ್ದು, ಲಾರಿಗಳ ಸಂಚಾರದಿಂದ ರಸ್ತೆಯಲ್ಲಿ ಅಳವಡಿಸಿರುವ ಶೋಲ್ಡರ್ಗಳು ಹಾನಿಗೆ ಉಂಟಾಗಿವೆ. ಈ ಹಿನ್ನೆಲೆಯಲ್ಲಿ ಮಳೆಗಾಲ ಕಳೆಯುವವರೆಗೂ ಭಾರೀ ವಾಹನಗಳ ಸಂಚಾರವನ್ನು ತಡೆಯಲು ಕರ್ನಾಟಕ ಪೋಲಿಸ್ ಕಾಯ್ದೆ 1963ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005 ಕಲಂ 33, ಮೋಟರ್ ವಾಹನ ಕಾಯ್ದೆ 1988ರ ತಿದ್ದುಪಡಿ ನಿಯಮಾವಳಿ 1990 ನಿಯಮ 221ಏ (5), ದಂಡಪ್ರಕ್ರಿಯೆ ಸಂಹಿತೆ 1973ರ ಕಲಂ 144ರ ಅಡಿಯಲ್ಲಿ ವಾಹನ ಸವಾರರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ದೃಷ್ಠಿಯಿಂದ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English