ಬಾಗಲಕೋಟೆ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಎರಡು ಲಕ್ಷ ರೂ. ಸಾಲ ಮನ್ನಾ ಮಾಡಿದ್ದರೂ ಅದು ತನ್ನ ನೆರವಿಗೆ ಬರಲಿಲ್ಲ ಅಂತಾ ಬೇಸತ್ತು ಬಾಗಲಕೋಟೆಯ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೌದು,ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ರೈತ ಪಾಂಡಪ್ಪ ರಾಮಪ್ಪ ಅಂಬಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ.
ನಿನ್ನೆ ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ 2017 ಡಿಸೆಂಬರ್ 31ರ ಅಂತ್ಯಕ್ಕೆ ಎರಡು ಲಕ್ಷ ರೂ. ಸಾಲ ಮನ್ನಾ ಘೋಷಣೆ ಮಾಡಿದ್ರು. ಆದರೆ, ಸುಸ್ತಿ ಸಾಲ ಇಲ್ಲದ ಪಾಂಡಪ್ಪ, ವಿವಿಧ ಬ್ಯಾಂಕ್ಗಳು, ಪತ್ತಿನ ಸಹಕಾರಿ ಸಂಘ, ಇನ್ನಿತರ ಕಡೆಗಳಿಂದ ತನ್ನ ಹಾಗೂ ಕುಟುಂಬದ ಸದಸ್ಯರ ಹೆಸರಲ್ಲಿ ಒಂಭತ್ತು ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಟ್ರ್ಯಾಕ್ಟರ್ ಮೇಲೆ ಸಾಲಕ್ಕೆ ಅರ್ಜಿ ಹಾಕಿದ್ರು. ಸರ್ಕಾರದ ಸಾಲ ಮನ್ನಾ ತನ್ನ ನೆರವಿಗೆ ಬರಲಿಲ್ಲ ಎಂದು ರಾತ್ರಿ ಕಬ್ಬಿನ ಗದ್ದೆಗೆ ನೀರು ಹಾಯಿಸಿ ಬರುವುದಾಗಿ ಹೇಳಿದ್ದ ರೈತ ಪಾಂಡಪ್ಪ, ಜಮೀನಿನಲ್ಲಿ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪಾಂಡಪ್ಪ ಅವರಿಗೆ ಎರಡು ಎಕರೆ ಜಮೀನು ಇದ್ದು, ಕಬ್ಬು ಹಚ್ಚಿದ್ದಾರೆ. ಈ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English