ಹಂಪಿ ವಿರೂಪಾಕ್ಷ ದೇವಸ್ಥಾನದ ಎಡಬದಿಯಲ್ಲಿ ಚಿಕ್ಕ ಕೊಳ ಪತ್ತೆ..!

10:57 AM, Monday, July 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

historical-pondಬಳ್ಳಾರಿ: ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಪ್ರವೇಶ ದ್ವಾರದ ಎಡಬದಿಯಲ್ಲಿ ಚಿಕ್ಕ ಕೊಳ ಪತ್ತೆಯಾಗಿದೆ.

ಮಧ್ಯಮ ಗಾತ್ರದ ಈ ಕೊಳದ ಸುತ್ತಲೂ ಸುಂದರ ಕೆತ್ತನೆಯ ಬಂಡೆಗಲ್ಲುಗಳಿವೆ. ಒಂದು ಕಡೆ ನಂದಿ ಸ್ಮಾರಕವಿದ್ದು, ಕೆಳಗೆ ಇಳಿಯಲು ಮೆಟ್ಟಿಲುಗಳಿವೆ.

ದೇವಸ್ಥಾನದ ಪ್ರವೇಶ ದ್ವಾರದ ಎಡಬದಿಯಲ್ಲಿ ನಿರ್ಮಿಸಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ಇತ್ತೀಚೆಗೆ ತೆರವುಗೊಳಿಸಿ ಅಲ್ಲಿ ಹಾಸುಗಲ್ಲುಗಳನ್ನು ಜೋಡಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆತ್ತನೆಯ ಕಲ್ಲುಗಳು ಕಂಡು ಬಂದಿದ್ದರಿಂದ ನೆಲವನ್ನು ಅಗೆಯುತ್ತ ಹೋದಂತೆ ಈ ಕೊಳ ಪತ್ತೆಯಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English