ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ: ಅತಂತ್ರವಾದ ಗೈಡ್‌ ಗಳ ಬದುಕು

Tuesday, September 8th, 2020
Hampi

ವಿಶೇಷ ವರದಿ : ಶಂಭು – ಹಂಪಿ : ವಿಶ್ವವ್ಯಾಪಿ ಹರಡಿರುವ ಕೊರೋನಾ ಹಿನ್ನೆಲೆಯಲ್ಲಿ ಪ್ರಖ್ಯಾತ ಪ್ರವಾಸಿ ತಾಣವಾಗಿರುವ ಹಂಪಿಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು, ಹಂಪಿ ಇತಿಹಾಸ ವಿವರಿಸುವ ಮಾರ್ಗದರ್ಶಿಗಳ ಬದುಕು ಸಂಕಷ್ಟಕ್ಕೀಡಾಗಿದೆ. ಹಂಪಿಗೆ ಆಗಮಿಸುವ ಪ್ರವಾಸಿಗರನ್ನು ನೆಚ್ಚಿಕೊಂಡು ಕಳೆದ 15-20  ವರ್ಷಗಳಿಂದ ಜೀವನ ನಡೆಸುತ್ತಿರುವ ಸುಮಾರು 180 ಮಾರ್ಗದರ್ಶಿಗಳ ಬದುಕು ಲಾಕ್‌ ಡೌನ್‌ ನ ಕಳೆದ 5 ತಿಂಗಳಿಂದ ಅತಂತ್ರದಲ್ಲಿದೆ. ಕೊರೋನಾ ವೈರಸ್‌ ಹಂಪಿಯ ಮಾರ್ಗದರ್ಶಿಗಳ ಜೀವನಕ್ಕೆ ಪೆಟ್ಟು ನೀಡಿದೆ. ಜೀವನ ನಡೆಸುವುದು ಕಷ್ಟಕರವಾಗಿದೆ. ಮಾರ್ಗದರ್ಶಿಗಳ ನೂರಾರು […]

ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್​ ಶಿಪ್​ : ಎರಡನೇ ಸ್ಥಾನದಲ್ಲಿ ಕೊನೆರು ಹಂಪಿ

Tuesday, December 31st, 2019
hampi

ಮಾಸ್ಕೋ : ಭಾರತದ ಗ್ರಾಂಡ್ ಮಾಸ್ಟರ್ ಕೊನೆರು ಹಂಪಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ ಗೆಲುವಿನ ಬೆನ್ನಲ್ಲೇ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಭಾನುವಾರ ಆರಂಭಗೊಂಡ ಮಹಿಳೆಯರ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಷಿಪ್ನ ಮೊದಲ ದಿನ ಆಂಧ್ರ ಆಟಗಾರ್ತಿ ಕೊನೆರು ಹಂಪಿ 2ನೇ ಸ್ಥಾನ ಅಲಂಕರಿಸಿದ್ದಾರೆ. ರ್ಯಾಪಿಡ್ ಚೆಸ್ಗಿಂತ ವೇಗದ ಆಟವಾದ ಬ್ಲಿಟ್ಜ್ ಚೆಸ್ ಸ್ಪರ್ಧೆಯ ಎರಡು ದಿನಗಳ ಕೂಟದಲ್ಲಿ 32 ವರ್ಷದ ಹಂಪಿ ಮೊದಲ 5 ಸುತ್ತಿನ ಪಂದ್ಯಗಳ ಬಳಿಕ ಅಗ್ರಸ್ಥಾನದಲ್ಲಿದ್ದರು. ಬಳಿಕ ನಂತರದ 2 […]

ಹಂಪಿ ವಿರೂಪಾಕ್ಷ ದೇವಸ್ಥಾನದ ಎಡಬದಿಯಲ್ಲಿ ಚಿಕ್ಕ ಕೊಳ ಪತ್ತೆ..!

Monday, July 9th, 2018
historical-pond

ಬಳ್ಳಾರಿ: ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಪ್ರವೇಶ ದ್ವಾರದ ಎಡಬದಿಯಲ್ಲಿ ಚಿಕ್ಕ ಕೊಳ ಪತ್ತೆಯಾಗಿದೆ. ಮಧ್ಯಮ ಗಾತ್ರದ ಈ ಕೊಳದ ಸುತ್ತಲೂ ಸುಂದರ ಕೆತ್ತನೆಯ ಬಂಡೆಗಲ್ಲುಗಳಿವೆ. ಒಂದು ಕಡೆ ನಂದಿ ಸ್ಮಾರಕವಿದ್ದು, ಕೆಳಗೆ ಇಳಿಯಲು ಮೆಟ್ಟಿಲುಗಳಿವೆ. ದೇವಸ್ಥಾನದ ಪ್ರವೇಶ ದ್ವಾರದ ಎಡಬದಿಯಲ್ಲಿ ನಿರ್ಮಿಸಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ಇತ್ತೀಚೆಗೆ ತೆರವುಗೊಳಿಸಿ ಅಲ್ಲಿ ಹಾಸುಗಲ್ಲುಗಳನ್ನು ಜೋಡಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆತ್ತನೆಯ ಕಲ್ಲುಗಳು ಕಂಡು ಬಂದಿದ್ದರಿಂದ ನೆಲವನ್ನು ಅಗೆಯುತ್ತ ಹೋದಂತೆ ಈ ಕೊಳ ಪತ್ತೆಯಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ […]