ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಹೊರ ವಲಯದಲ್ಲಿರುವ ಉಳ್ಳಾಲದ ಹಳೆರೈಲ್ವೆ ನಿಲ್ದಾಣದ ಕಟ್ಟಡ ಕುಸಿದಿದೆ.
ಇಂದು ಸುರಿದ ಭಾರಿ ಗಾಳಿಮಳೆಗೆ ಕಟ್ಟಡದ ಛಾವಣಿ ಕುಸಿದಿದೆ. ಈ ವೇಳೆ ನಿಲ್ದಾಣದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಕಟ್ಟಡ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಹೊಸ ನಿಲ್ದಾಣ ನಿರ್ಮಿಸಲಾಗಿತ್ತು. ನಿಲ್ದಾಣದ ಚಟುವಟಿಕೆಗಳೆಲ್ಲವೂ ಹೊಸ ನಿಲ್ದಾಣದಲ್ಲಿಯೇ ನಡೆಯುತ್ತಿದ್ದವು. ಈ ಕಟ್ಟಡದಲ್ಲಿ ಇತ್ತೀಚಿನವರೆಗೆ ಕ್ಯಾಂಟೀನ್ ಮಾತ್ರ ಕಾರ್ಯಾಚರಿಸುತ್ತಿದ್ದು, ಇತ್ತೀಚೆಗೆ ಇದು ಕೂಡ ಹೊಸ ನಿಲ್ದಾಣಕ್ಕೆ ಸ್ಥಳಾಂತರಗೊಂಡಿತ್ತು.
Click this button or press Ctrl+G to toggle between Kannada and English