ಚಿಕ್ಕಮಗಳೂರು: ಸರಿ ಸುಮಾರು ಒಂದು ತಿಂಗಳು, ಅದ್ರಲ್ಲೂ ಕಳೆದ 9 ದಿನಗಳಿಂದ ಮಲೆನಾಡಲ್ಲಿ ಸೂರ್ಯನ ಕಿರಣಗಳು ನೆಲಕ್ಕೆ ಬೀಳದಂತೆ ಮೋಡಗಟ್ಟಿ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಅಕ್ಷರಶಃ ಮಲೆನಾಡು ತತ್ತರಿಸಿ ಹೋಗಿದೆ.
ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಮಕ್ಕಳ ಆಟದ ಮೈದಾನವಾಗಿದ್ದ ಕೆರೆ, ಹಳ್ಳ-ಕೊಳ್ಳ, ನದಿಗಳೆಲ್ಲಾ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಹೌದು, ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ಸುರಿಯುತ್ತಿರೋ ಮಹಾಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇತ್ತ ಮಲೆನಾಡಿನಾದ್ಯಂತ ಅಸಂಖ್ಯಾತ ಕೃತಕ ಫಾಲ್ಸ್ಗಳು ಜನ್ಮತಾಳಿವೆ. ಗುಡ್ಡದಿಂದ ಹರಿಯೋ ನೀರು ಒಂದೆಡೆ ಸೇರಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ.
ಜಿಲ್ಲೆಯ ಪ್ರಮುಖ ಜಲಪಾತಗಳಾದ ಹೊನ್ನಮ್ಮನ ಹಳ್ಳ, ಸಗೀರ್ ಫಾಲ್ಸ್, ಸಿರಿಮನೆ ಫಾಲ್ಸ್, ಶಂಕರ್ ಫಾಲ್ಸ್, ಮಾಣಿಕ್ಯಧಾರಾ, ಶಬರಿ, ಹೆಬ್ಬೆ ಫಾಲ್ಸ್ಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ಆಕರ್ಷಿಸುತ್ತಿದೆ.
Click this button or press Ctrl+G to toggle between Kannada and English