ಜಿಲ್ಲೆಯಲ್ಲಿ ಮಳೆ ನಿಂತರೂ ನಿಲ್ಲದ ಭೂಕುಸಿತ..!

Saturday, August 18th, 2018
chik-magaluru

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ನಿಂತರು ಭೂ ಕುಸಿತ ನಿಲ್ಲುತ್ತಿಲ್ಲ. ಮಳೆ ನಿಂತ ಬಳಿಕ ಮಲೆನಾಡಲ್ಲಿ ಭಾರೀ ಗಾಳಿ ಬೀಸುತ್ತಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿ ಕುಸಿದು ಸುರಂಗ ಸೃಷ್ಟಿಯಾಗಿದೆ. ಪ್ರೇಮಾ ಶೆಟ್ಟಿ ಎಂಬುವರಿಗೆ ಸೇರಿದ ಬಾವಿ ಕುಸಿದಿದ್ದು, ಸುರಂಗ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಭೂ ಕುಸಿತ..ಸಂಪರ್ಕ ಕಳೆದುಕೊಂಡ ಗ್ರಾಮಗಳು!

Thursday, August 16th, 2018
chikmagaluru

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಆರ್ಭಟಕ್ಕೆ ಕೆಲವೆಡೆ ಭೂ ಕುಸಿತವಾಗಿದ್ದು, ಕಳಸ-ಹೊರನಾಡು, ಕೊಪ್ಪ, ಎನ್.ಆರ್.ಪುರ, ಮೇಲ್ಪಾಲ್, ಹೊದಸಾಳು, ಕೆರೆಹಕ್ಲು ಸೇರಿದಂತೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ನಗರದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಿದ್ದು 45 ದಿನದಲ್ಲಿ 15 ನೇ ಬಾರಿ ಮುಳುಗಿದೆ. ಹೆಬ್ಬಾಳೆ ಸೇತುವೆ ಕುದುರೆಮುಖ, ಕಳಸದ ಭಾಗದಲ್ಲಿ ಮಳೆ ಆಗುತ್ತಲೇ ಇರುವುದರಿಂದ ಭದ್ರೆಗೆ‌ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕಳಸ-ಹೊರನಾಡು ಸಂಪರ್ಕ ಸೇತುವೆಯನ್ನು ಸಂಪೂರ್ಣ ಮುಳುಗುವಂತೆ ಮಾಡಿದೆ. ಇನ್ನೂ ಮಳೆಯಿಂದ ಮೂರು ದಿನದಲ್ಲಿ ನಾಲ್ಕೈದು ಕಡೆ […]

ಭೂಮಿ ಒಳಗಿಂದ ಭಾರೀ ಸದ್ದು.. ಆತಂಕಗೊಂಡ ಜನ!

Friday, August 10th, 2018
chikmagaluru

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ‌ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಒಳಗಿಂದ ಬಂದ ಭಾರೀ ಸದ್ದು ಕೇಳಿ ಆತಂಕಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಳೆದೆರಡು ತಿಂಗಳಿಂದ ಆಗಾಗ ಇಂತಹ ಅನುಭವ ಆಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಶಬ್ದದಿಂದ ಮನೆಯಲ್ಲಿನ ಪಾತ್ರೆಗಳು, ಗೃಹಪಯೋಗಿ ವಸ್ತುಗಳು ಕೆಳಗೆ‌ ಬೀಳುತ್ತಿವೆ. ಒಂದೆಡೆ ಮಳೆ, ಮತ್ತೊಂದೆಡೆ ಭೂಮಿಯೊಳಗಿಂದ ಬರುತ್ತಿರುವ ಸದ್ದಿನಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಕಳೆದ 9 ದಿನಗಳಿಂದ ವರುಣನ ಅಬ್ಬರ..ಮಲೆನಾಡು ತತ್ತರ!

Saturday, July 14th, 2018
chik-magaluru

ಚಿಕ್ಕಮಗಳೂರು: ಸರಿ ಸುಮಾರು ಒಂದು ತಿಂಗಳು, ಅದ್ರಲ್ಲೂ ಕಳೆದ 9 ದಿನಗಳಿಂದ ಮಲೆನಾಡಲ್ಲಿ ಸೂರ್ಯನ ಕಿರಣಗಳು ನೆಲಕ್ಕೆ ಬೀಳದಂತೆ ಮೋಡಗಟ್ಟಿ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಅಕ್ಷರಶಃ ಮಲೆನಾಡು ತತ್ತರಿಸಿ ಹೋಗಿದೆ. ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಮಕ್ಕಳ ಆಟದ ಮೈದಾನವಾಗಿದ್ದ ಕೆರೆ, ಹಳ್ಳ-ಕೊಳ್ಳ, ನದಿಗಳೆಲ್ಲಾ ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಹೌದು, ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ಸುರಿಯುತ್ತಿರೋ ಮಹಾಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇತ್ತ ಮಲೆನಾಡಿನಾದ್ಯಂತ ಅಸಂಖ್ಯಾತ ಕೃತಕ ಫಾಲ್ಸ್ಗಳು ಜನ್ಮತಾಳಿವೆ. ಗುಡ್ಡದಿಂದ ಹರಿಯೋ ನೀರು ಒಂದೆಡೆ […]

ಮುಂದುವರೆದ ಧಾರಾಕಾರ ಮಳೆ..ಇಂದು ಕೂಡಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

Friday, July 13th, 2018
chikk-magaluru

ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಇಂದೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮೂರು ತಾಲೂಕು ಸೇರಿದಂತೆ ಹಲವೆಡೆ ಶಾಲಾ-ಕಾಲೇಜುಗಳಿಗೆ ಇಂದು ಕೂಡಾ ರಜೆ ಘೋಷಿಸಲಾಗಿದೆ. ಶೃಂಗೇರಿ, ಕೊಪ್ಪ, ಕಳಸ, ಕುದುರೆಮುಖ, ಮೂಡಿಗೆರೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ನಿವಾಸಿಗಳು ಆತಂಕದಲ್ಲಿ ಬದುಕುವಂತಾಗಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ ಹಾಗೂ ಮೂಡಿಗೆರೆ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ […]

ಮಲೆನಾಡಿನಲ್ಲಿ ಭಾರಿ ಮಳೆ…ಶಾಲಾ-ಕಾಲೇಜುಗಳಿಗೆ ರಜೆ!

Thursday, June 28th, 2018
raining

ತೀರ್ಥಹಳ್ಳಿ: ಮಲೆನಾಡಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿ ಸೇರಿದಂತೆ ಎಲ್ಲಾ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನೀರಿ‌ನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ. ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ, ಆಗುಂಬೆ ಸೇರಿದಂತೆ ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಭಾರಿ ಮಳೆಗೆ ಹಲವೆಡೆ ಹಾನಿಯಾಗಿದೆ. ಕೆಲವೆಡೆ ಗುಡ್ಡಗಳು ಕುಸಿದಿರುವ ಬಗ್ಗೆ ವರದಿಯಾಗಿದೆ. ಮುಂಜಾಗ್ರತಾ […]

ಕಾಫಿನಾಡಿನಲ್ಲಿ ಮತ್ತೆ ವರುಣನ ಆಗಮನ..ಜಿಲ್ಲೆಯಾದ್ಯಂತ ಭಾರಿ ಮಳೆ..!

Tuesday, June 19th, 2018
heavy-rain

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮತ್ತೆ ವರುಣನ ಆಗಮನವಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮಲೆನಾಡಿನ ಹಲವೆಡೆ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟಿಯಲ್ಲಿಯೂ ಹೆಚ್ಚು ಮಳೆಯಾಗುತ್ತಿದೆ. ಅಷ್ಟೇ ಅಲ್ಲದೇ ರಸ್ತೆ ಕಾಣದಂತೆ ಮಂಜು ಆವರಿಸಿದೆ. ಮಂಜಿನ ಜೊತೆಯೇ ಮಳೆ ಸುರಿಯುತ್ತಿರುವುದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರಿಗೆ ಕೊಂಚ ತೊಂದರೆಯುಂಟಾಗಿದೆ. ಇನ್ನು ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಮೂಡಿಗೆರೆ, ಚಾರ್ಮಾಡಿ ಘಾಟ್ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ.