ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಒಳಗಿಂದ ಬಂದ ಭಾರೀ ಸದ್ದು ಕೇಳಿ ಆತಂಕಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಕಳೆದೆರಡು ತಿಂಗಳಿಂದ ಆಗಾಗ ಇಂತಹ ಅನುಭವ ಆಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಶಬ್ದದಿಂದ ಮನೆಯಲ್ಲಿನ ಪಾತ್ರೆಗಳು, ಗೃಹಪಯೋಗಿ ವಸ್ತುಗಳು ಕೆಳಗೆ ಬೀಳುತ್ತಿವೆ. ಒಂದೆಡೆ ಮಳೆ, ಮತ್ತೊಂದೆಡೆ ಭೂಮಿಯೊಳಗಿಂದ ಬರುತ್ತಿರುವ ಸದ್ದಿನಿಂದ ಜನರಲ್ಲಿ ಆತಂಕ ಮನೆ ಮಾಡಿದೆ.
Click this button or press Ctrl+G to toggle between Kannada and English