ಮಂಗಳೂರು: ಮಟ್ಕಾ ಅಡ್ಡೆಯೊಂದರ ಮೆಲೆ ದಾಳಿ ನಡೆಸಿದ ಪೊಲೀಸರು, ಓರ್ವ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಮಂಗಳೂರಿನ ಅಶೋಕನಗರ ನಿವಾಸಿ ರಾಜೇಶ್ ಶೆಟ್ಟಿ (49) ಬಂಧಿತ ಆರೋಪಿ. ಈತನ ಬಳಿಯಿಂದ ಮಟ್ಕಾ ಬರೆಯುತ್ತಿದ್ದ ಚೀಟಿ, ಮೊಬೈಲ್ ಫೋನ್ ಮತ್ತು 1,740 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಉರ್ವ ಸ್ಟೋರ್ ಮೈದಾನದ ಬಳಿ ಮಟ್ಕಾ ಅಡ್ಡೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಚಂದ್ರ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
Click this button or press Ctrl+G to toggle between Kannada and English