ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ನಿರೀಕ್ಷೆಯಂತೆ ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಈ ವೇಳೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ವಿಶ್ವಾಸಮತಕ್ಕೆ 226 ಮಾತ್ರ ಬೇಕಾಗಿತ್ತು. ಎನ್ಡಿಎ 325 ಹಾಗೂ ಪ್ರತಿಪಕ್ಷಗಳು ಕೇವಲ126 ಮತ ಪಡೆದವು. ಹೀಗಾಗಿ ಮೋದಿ ಸರ್ಕಾರ ನಿರೀಕ್ಷೆಯಂತೆ ವಿಶ್ವಾಸ ಮತ ಪರೀಕ್ಷೆಯಲ್ಲಿ ಪಾಸಾಯಿತು.
ಒಬ್ಬ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಇಷ್ಟೊಂದು ಪ್ರಯತ್ನ ಮಾಡುವ ಅಗತ್ಯತೆ ಇತ್ತಾ ಎಂದು ಪ್ರಧಾನಿ ಪ್ರಶ್ನಿಸಿದರು. ಇನ್ನು ಸದನದಲ್ಲಿ ಇನ್ನೂ ಚರ್ಚೆಯೇ ಆಗಿರಲಿಲ್ಲ, ಫಲಿತಾಂಶವೂ ಬಂದಿಲ್ಲ. ಆದರೂ ಒ್ಬಬ್ಬರು ನನ್ನ ಕುರ್ಚಿಯತ್ತ ಬಂದು ಎದ್ದೇಳಿ, ಎದ್ದೇಳಿ ಎಂದ್ರು. ಆದರೆ ನನ್ನನ್ನು ಇಲ್ಲಿಂದ ಎಬ್ಬಿಸಲು ಅಥವಾ ಕೂರಿಸಲು ದೇಶದ 125 ಕೋಟಿ ಜನರಿಂದ ಮಾತ್ರ ಸಾಧ್ಯ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು. ಇದಕ್ಕೂ ಮುನ್ನ ರಾಹುಲ್ ಪ್ರಧಾನಿಯವರ ಬಳಿ ಬಂದು ಅವರಿಗೆ ಎದ್ದೇಳುವಂತೆ ಹೇಳಿ ಅಪ್ಪುಗೆ ನೀಡಿದ್ದರು.
ಮಾತು ಮುಂದುವರಿಸಿದ ಮೋದಿ, ಪ್ರಧಾನಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಹೌದು ನನಗೆ ಹಾಗೆ ನೋಡಲು ಆಗಲ್ಲ, ಯಾಕೆಂದರೆ ನಾನೊಬ್ಬ ಬಡ ತಾಯಿಯ ಮಗ. ನಿಮ್ಮ ಮೇಲೆ ವಿಶ್ವಾಸವಿಟ್ಟವರನ್ನು ನೀವು ಯಾವ ರೀತಿ ಮಾಡಿದ್ದೀರೆಂಬುದು ಎಲ್ಲರಿಗೆ ತಿಳಿದಿದೆ. ಅಲ್ಲದೆ ನೀವು ಕಣ್ಸನ್ನೆಯನ್ನು ಇಂದು ಇಡೀ ದೇಶವೇ ನೋಡಿದೆ ಎಂದರು.
ಇನ್ನು ನಾನು ನಾನು ಚೌಕೀದಾರ್ ನಿಮ್ಮಂತೆ ಸೌದಾಗರ್, ಭಾಗಿದಾರ್ ಅಲ್ಲ. ಬಡವರ ಕಷ್ಟ ಪರಿಹರಿಸುವ ಭಾಗಿದಾರ್, ಈ ಬಗ್ಗೆ ಹೆಮ್ಮೆ ಇದೆ ಎಂದರು.
ಹಾಗೆಯೇ ಕೇವಲ ಒಂದು ಆಧಾರವಿಲ್ಲದ, ಬೇಜವಾಬ್ದಾರಿ ಆರೋಪದಿಂದ ಫ್ರಾನ್ಸ್ ಹಾಗೂ ಭಾರತ ಪರಸ್ಪರ ಹೇಳಿಕೆ ನಿಡುವಂತಾಯಿತು. ಈ ತರಹದ ಬಾಲಿಶ ವರ್ತನೆ ಮಾಡಬಾರದು ಎಂದು ರಫೆಲ್ ಜೆಟ್ ಖರೀದಿ ಬಗ್ಗೆ ಫ್ರಾನ್ಸ್ ಹಾಗೂ ಭಾರತದ ನಡುವಿನ ಒಪ್ಪಂದದ ಬಗ್ಗೆ ರಾಹುಲ್ ನೀಡಿದ್ದ ಹೇಳಿಕೆಯನ್ನು ಟೀಕಿಸಿದರು.
ಇನ್ನು ಸರ್ಜಿಕಲ್ ಸ್ಟ್ರೈಕ್ನ್ನು ಜುಮ್ಲಾ ಸ್ಟ್ರೈಕ್ ಎನ್ನುತ್ತೀರಿ. ನೀವು ನನ್ನನ್ನು ನಿಂದಿಸಬಹುಹು. ಆದರೆ ದೇಶದ ಯೋಧರನ್ನು ಅವಮಾನಿಸುವುದು ಸರಿಯಲ್ಲ. ಸೇನೆಯನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದು ಗುಡುಗಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯುಯವರು ಉತ್ತರಾಖಂಡ್, ಛತ್ತೀಸ್ಗಢ್ ಹಾಗೂ ಜಾರ್ಖಂಡ್ ರಾಜ್ಯಗಳನ್ನು ರಚಿಸಿದರು. ಅವೆಲ್ಲವೂ ಕೂಡ ಅಭಿವೃದ್ಧಿಯತ್ತ ಸಾಗುತ್ತಿವೆ. ಆದರೆ ಕಾಂಗ್ರೆಸ್ ರಚಿಸಿದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸ್ಥಿತಿ ಹಾಗಿಲ್ಲ ಎಂದು ಟೀಕಿಸಿದರು.
ಎನ್ಡಿಎಯಿಂದ ಟಿಡಿಪಿ ದೂರ ಸರಿದಾಗಲೇ ನಾನು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಕರೆದು ನೀವು ವೈಎಸ್ಆರ್ ಕಾಂಗ್ರೆಸ್ ಬಲೆ ಬೀಳುತ್ತಿದ್ದೀರಾ ಎಂದು ಹೇಳಿದ್ದೆ. ಅಲ್ಲದೆ ನಾನು ಆಂಧ್ರ ಜನತೆಗೆ ಹೇಳುವುದೇನೆಂದರೆ ಅಲ್ಲಿನ ಅಭಿವೃದ್ಧಿಗೆ ನಾವು ಯಾವಾಗಲೂ ಶ್ರಮಿಸುತ್ತೇವೆ ಎಂದು ಹೇಳಿದರು.
Click this button or press Ctrl+G to toggle between Kannada and English