ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳು ಪರದಾಟ ಪಡುತ್ತಿದ್ದು ವೀಲ್ ಚೇರ್ ಸಿಗದೇ ರೋಗಿಯನ್ನು ಕೈಯಲ್ಲಿಯೇ ಹೊತ್ತು ನಿಂತ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಅನಾರೋಗ್ಯದಿಂದ ನರಳಾಡುತ್ತಿದ್ದ ವೃದ್ಧೆಯನ್ನು ವೀಲ್ ಚೇರ್ ಸಿಗದೇ ಕೈಯಲ್ಲಿಯೇ ಎತ್ತಿಕೊಂಡು ಡಾಕ್ಟರ್ ಬಳಿ ಸಂಬಂಧಿಕರು ಕರೆದುಕೊಂಡು ಬಂದಿದ್ದಾರೆ.
ಸುಮಾರು 10 ನಿಮಿಷಗಳ ಕಾಲ ವೃದ್ಧೆಯನ್ನು ಎತ್ತಿಕೊಂಡೇ ನಿಂತಿದ್ದಾರೆ. ವೀಲ್ ಚೇರ್ ಇದ್ದರೂ ರೋಗಿಗಳಿಗೆ ವೀಲ್ ಚೇರ್ ನೀಡದೇ ಸಿಬ್ಬಂದಿಗಳು ಸತಾಯಿಸುತ್ತಿದ್ದಾರೆ,ಲಂಚ ಕೊಟ್ಟರೇ ಮಾತ್ರ ವೀಲ್ ಚೇರ್ ನೀಡುತ್ತಾರೆ ಎಂಬ ಆರೋಪವು ಕೇಳಿ ಬರುತ್ತಿದೆ.
ಜಿಲ್ಲಾಸ್ವತ್ರೆಯ ಸಿಬ್ಬಂದಿಗಳ ವರ್ತನೆ ಕಂಡು ಸಾರ್ವಜನಿಕರು ಹಿಡಿ ಶಾಪ ಹಾಕಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
Click this button or press Ctrl+G to toggle between Kannada and English