ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ

5:53 PM, Saturday, July 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

pilukula-zoomಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘ ಮಂಗಳೂರು ಜಂಟಿಯಾಗಿ ಆಯೋಜಿಸಿದ ಖಗ್ರಾಸ ಚಂದ್ರಗ್ರಹಣದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಶತಮಾನದ ಸುಧೀರ್ಘ ಚಂದ್ರಗ್ರಹಣವನ್ನು ಸಾರ್ವಜನಿಕರು ಕುತೂಹಲದಿಂದ ಕಣ್ತುಂಬಿಕೊಂಡರು. ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ 1 ಗಂಟೆಗೆ ಖಗ್ರಾಸ ಗ್ರಹಣವಾಗಿ ಮುಂಜಾನೆ 2.43ಕ್ಕೆ ಮೋಕ್ಷವಾಯಿತು.

ಗ್ರಹಣದ ವೀಕ್ಷಣೆಯೊಂದಿಗೆ ಹತ್ತಿರದಲ್ಲಿ ಕಂಗೊಳಿಸುತ್ತಿದ್ದ ಮಂಗಳನ ದರ್ಶನವೂ ವೀಕ್ಷಕರಿಗೆ ಲಭಿಸಿತು.

ದೂರದರ್ಶಕ ಮತ್ತು ದುರ್ಬೀನುಗಳ ಮೂಲಕ ಈ ಅಪೂರ್ವ ವಿದ್ಯಮಾನಗಳ ವಿಕ್ಷಣೆಯ ಸಂಧರ್ಭದಲ್ಲಿ ಮೋಡಗಳ ದೆಸೆಯಿಂದ ಆಗಾಗ ಅಡಚಣೆಯುಂಟಾದರೂ ವೀಕ್ಷಕರು ತಾಳ್ಮೆಯಿಂದ ಈ ಸಮಯದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞ ಡಾ| ಜಯಂತ್ ಅವರು ನೀಡುತ್ತಿದ್ದ ವಿವರಣೆಗಳನ್ನು ಕೇಳಿ ಸಂಶಯಗಳನ್ನು ಪರಿಹರಿಸಿ ಕೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English