ಜನಪ್ರತಿನಿಧಿಗಳು ಸರ್ಕಾರಿ ಶಾಲೆ ಉನ್ನತೀಕರಣಕ್ಕೆ ಪ್ರಯತ್ನಿಸಬೇಕು : ಬಸವರಾಜ ಹೊರಟ್ಟಿ 

10:17 PM, Saturday, July 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

Aequs ಹುಬ್ಬಳ್ಳಿ : ಜನಪ್ರತಿನಿಧಿಗಳು ತಾವು ಓದಿದ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ಪ್ರಯತ್ನಿಸಬೇಕು. ಶಾಲೆಗಳನ್ನು ದತ್ತು ತೆಗೆದುಕೊಂಡು ಉನ್ನತೀಕರಿಸಿದಾಗ ಶಾಲೆಗಳಲ್ಲಿ ಹಾಜರಾತಿ ಹೆಚ್ಚಳವಾಗುತ್ತದೆ ಆಗ ಸರ್ಕಾರ  ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಮೆಯವೇ ಬರುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಅವರು ಹುಬ್ಬಳ್ಳಿಯ ಸರಕಾರಿ ಪ್ರಾಥಮಿಕ ಶಾಲೆ ಕೆಬಿಎಸ್ ನಂ.16 ರಲ್ಲಿ ಏಕಸ್ ಪ್ರತಿಷ್ಠಾನವು ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಅಗಸ್ತ್ಯ ಇಂಟರ್ನ್ಯಾಷನಲ್  ಫೌಂಡೇಷನ್ ಪಾಲುದಾರಿಕೆಯಲ್ಲಿ ಸರಕಾರಿ ಮಕ್ಕಳಿಗೆ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಶಿಕ್ಷಣ ಒದಗಿಸಲು ನೂತನವಾಗಿ ಕಟ್ಟಿರುವ ಅನಸೂಯ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಉದ್ಘಾಟಸಿ ಮಾತನಾಡಿದರು.

Aequs ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಲಿತವರು ಇಂದು ಅನೇಕ ಉನ್ನತ ಹುದ್ದೆಗಳನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಪಾಲಕರು ಇಂಗ್ಲೀಷ್ ಶಿಕ್ಷಣದಿಂದ ಮಾತ್ರ ಮಕ್ಕಳ ಏಳಿಗೆ ಸಾಧ್ಯ ಎಂದು ತಪ್ಪು ತಿಳಿಯಬಾರದು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕ ಸಿಬ್ಬಂದಿಗಳಿದ್ದಾರೆ. ಎಲ್ಲರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕು. ಶಿಕ್ಷಕರು ಶಾಲೆಗಳಲ್ಲಿ ವಿಜ್ಞಾನ ತಂತ್ರಜ್ಞಾನದ ವಿಷಯಗಳನ್ನು ಮಕ್ಕಳಿಗೆ ಆಸಕ್ತಿದಾಯಕವಾಗಿ ಕಲಿಸುವುದುರ ಮೂಲಕ ವಿಜ್ಞಾನ ವಿಷಯದಲ್ಲಿ ಆಸಕ್ತಿ ಉಂಟಾಗುವ ರೀತಿ ಮಾಡಬೇಕು.

ತಾಯಿ ಹಾಗೂ ಗುರುಗಳ ಋಣ ತೀರಿಸುವುದು ಕಷ್ಟ, ಇಂದು ಅರವಿಂದ ಮೆಳ್ಳಿಗೇರಿಯವರು ತಮ್ಮ ತಾಯಿ ಹೆಸರಿನಲ್ಲಿ ತಾವು ಕಲಿತ ಶಾಲೆಗೆ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಕಟ್ಟಿಸಿ ಕೊಟ್ಟಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ನವಲಗುಂದ ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿ,  ವಿಜ್ಞಾನ ತಂತ್ರಜ್ಞಾನದ ವಿಷಯಗಳನ್ನು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಪ್ರಾಯೋಗಿಕವಾಗಿ ಕಲಿಸುವುದರಿಂದ ಅವರ ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ. ಈ ವಿಜ್ಞಾನ ಕೇಂದ್ರದ ಸದುಪಯೋಗವನ್ನು ಎಲ್ಲಾ ಶಿಕ್ಷಕರು ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.

Aequs ಸಾರ್ವಜನಿಕ ಸಂಪರ್ಕ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಪಾಶ್ಚಿಮಾತ್ಯ ದೇಶಗಳಲ್ಲಿ ವೈಜ್ಞಾನಿಕ ಮನೋಭಾವನ್ನು ಅಳವಡಿಸಿಕೊಂಡಿದ್ದರಿಂದ ಅವುಗಳು ಇಂದು ಮುಂದುವರೆದಿವೆ. ನಮ್ಮ ದೇಶದಲ್ಲೂ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರಗಳು ನೆರವಾಗಲಿವೆ. ಶಿಕ್ಷಣ ಇಲಾಖೆಯು ಅನಸೂಯ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಗುಣಾತ್ಮಕವಾಗಿ ಬಳಸಿಕೊಳ್ಳಲಿದೆ ಎಂದು ಹೇಳಿದರು.

ಏಕಸ್ ಪೌಂಡೇಷನ್ನ ಅರವಿಂದ ಮೆಳ್ಳಿಗೇರಿ ಮಾತನಾಡಿ, ಸರಕಾರಿ ಶಾಲೆಗಳ ಮಕ್ಕಳಿಗೆ ಸ್ಟೆಮ್ ಶಿಕ್ಷಣ ಒದಗಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ವಿಜ್ಞಾನದ ಪ್ರಾಯೋಗಿಕ ಪಾಠಗಳು ಮತ್ತು ಡಿಜಿಟಲ್ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಅತ್ಯುತ್ತಮ ವಿಜ್ಞಾನ ಶಿಕ್ಷಣ ನೀಡುವುದು ಹಾಗೂ ಮಕ್ಕಳಿಗೆ ಸಂತಸದಾಯ ಕಲಿಕೆಯ ವಾತಾವರಣವನ್ನು ಕೇಂದ್ರದಲ್ಲಿ ನಿಮರ್ಿಸಲಾಗಿದೆ.

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರದಲ್ಲಿನ ವಿಷಯಗಳನ್ನು ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ಪ್ರಯೋಗದ ಮೂಲಕ ಕಲಿಸುವುದಕ್ಕೆ ಕೇಂದ್ರದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಸೃಜನಶೀಲ ಬರಹ, ಮಾಧ್ಯಮ ಕಲೆ, ರೊಬೋಟಿಕ್ಸ್ ಮತ್ತು ಐಟಿ ವಿಷಯಗಳ ಬಗ್ಗೆಯೂ ಕೇಂದ್ರದಲ್ಲಿ ತಿಳಿಸಿಕೊಡಲಾಗುವುದು. ಸರಕಾರಿ ಮಕ್ಕಳಿಗೆ ವಿನೂತ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಶಾಲೆಯ ಸುತ್ತ ಮುತ್ತಲಿನ 20 ಕಿ.ಮೀ. ವ್ಯಾಪ್ತಿಯ ಮಕ್ಕಳು ಈ ಕೇಂದ್ರದಲ್ಲಿ ಬಂದು ಕಲಿಯಲು ಬಸ್ ಸೇವೆಯನ್ನು ಸಹ ಒದಗಿಸಲಾಗಿದೆ. ನನ್ನ ಬಾಲ್ಯದ ಅಪೂರ್ವ 7 ವರ್ಷಗಳ ಶೈಕ್ಷಣಿಕ ಅವಧಿಯನ್ನು ಹುಬ್ಬಳ್ಳಿಯ ಸರಕಾರಿ ಪ್ರಾಥಮಿಕ ಶಾಲೆ ಕೆಬಿಎಸ್ ನಂ.16ರಲ್ಲಿ ಕಳೆದಿದ್ದೇನೆ. ಈ ಶಾಲೆಯಲ್ಲಿನ ಅನುಭವಗಳು ಇನ್ನೂ ನನ್ನಲ್ಲಿ ಹಚ್ಚ ಹಸಿರಾಗಿವೆ. ನಮ್ಮ ಈ ಪ್ರಯತ್ನವು ಸಕರ್ಾರಿ ಶಾಲೆಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳಲು ಸರ್ಕಾರ ಮಾಡುತ್ತಿರುವ ಪ್ರಯತ್ನಕ್ಕೆ ಪೂರಕವಾಗಿರಲಿದೆ. ಶಿಕ್ಷಣದ ಬಗ್ಗೆ  ಅಪಾರ ಒಲವಿರುವ ನನ್ನ ತಾಯಿಯವರ ಹೆಸರನ್ನೇ ಕೇಂದ್ರಕ್ಕೆ ಇಡಲಾಗಿದೆ ಎಂದು ಹೇಳಿದರು.

Aequs ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶಟ್ಟರ್,  ಉಪಮಹಾಪೌರರಾದ ಮೇನಕಾ ಹುರುಳಿ, ಮಾಜಿ ಮಹಾಪೌರ ಶಿವು ಹಿರೇಮಠ, ಪಾಲಿಕೆ ಸದಸ್ಯೆ ಲೀನಾ ಸುನೀಲ ಮಿಸ್ಕಿ, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಅಗಸ್ತ್ಯ ಪೌಂಡೇಷನ್ ಮ್ಯಾನೇಜರ್ ಎಫ್ ಮಹಾವೀರ ಕುಮಾರ, ಬಿಇಓ ಅಶೋಕ ಬಿ ಕಮ್ಮಾರ ಸೇರಿದಂತೆ ಶಾಲೆಯ ಹಳೆಯ ಗುರುವೃಂದದವರು,  ವಿದ್ಯಾರ್ಥಿಗಳು, ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.
Aequs

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English