ಸೋಮೇಶ್ವರ ಬೀಚ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರ ರಕ್ಷಣೆ..!

12:52 PM, Tuesday, July 31st, 2018
Share
1 Star2 Stars3 Stars4 Stars5 Stars
(No Ratings Yet)
Loading...

someshwra-beachಮಂಗಳೂರು: ಇಲ್ಲಿನ ಸೋಮೇಶ್ವರ ಬೀಚ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರನ್ನು ಜೀವರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಳಿಗ್ಗೆ 9.30ಕ್ಕೆ ಸೋಮೇಶ್ವರ ಬೀಚಿಗೆ ಬಂದ 70 ವರ್ಷದ ವೃದ್ಧೆ ನೇರ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆ ಯತ್ನವನ್ನು ಗಮನಿಸಿದ ಸಮುದ್ರ ತೀರದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ.

ವೃದ್ಧೆಯನ್ನು ಕೌನ್ಸೆಲಿಂಗ್ ಮಾಡಿದ ಬಳಿಕ ಆಕೆಯನ್ನು ಕುಟುಂಬಿಕರಿಗೆ ಜೀವರಕ್ಷಕ ದಳದ ಸಿಬ್ಬಂದಿ ಹಸ್ತಾಂತರಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English