ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮನ..!

5:19 PM, Tuesday, July 31st, 2018
Share
1 Star2 Stars3 Stars4 Stars5 Stars
(No Ratings Yet)
Loading...

dakshina-kannadaಮಂಗಳೂರು: ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ಮಳೆರಾಯ ಕೊಂಚ ಬಿಡುವು ಪಡೆದಿದ್ದಾನೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಭತ್ತದ ನಾಟಿ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಕೃಷಿಕರು ಕೈಚೆಲ್ಲಿ ಕೂತಿದ್ದಾರೆ. ಆದರೆ ಈ ನಡುವೆ ದೂರದ ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ.

125 ಕೃಷಿ ಕಾರ್ಮಿಕರ ಈ ತಂಡ ಮಂಗಳೂರು ತಾಲೂಕಿನ ಬಜಪೆ ಪರಸರದಲ್ಲಿ ಬೀಡು ಬಿಟ್ಟಿದ್ದು, ನೇಜಿ ನಾಟಿ ಕಾರ್ಯ ಆರಂಭಿಸಿದೆ. ಉಡುಪಿ: ಕೃಷಿ ಉಳಿವಿಗೆ ಪಣತೊಟ್ಟ ಉದ್ಯಮಿ ವಿಶ್ವನಾಥ ಶೆಟ್ಟಿ 15 ಕಾರ್ಮಿಕರ ಒಂದು ತಂಡದಂತೆ 8 ತಂಡಗಳು ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ನಡೆಸಿದ್ದಾರೆ. ನಾಟಿ ಮಾಡುವ ಈ ಕೃಷಿ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಈ ಅವಧಿಯಲ್ಲಿ ಕೊಪ್ಪಳ, ಗಂಗಾವತಿ ಭಾಗದಲ್ಲಿ ಹೊಲದಲ್ಲಿ ಗಂಡಸರಿಗೆ ಮಾತ್ರ ಕೆಲಸವಿರುತ್ತದೆ. ಮಹಿಳೆಯರಿಗೆ ಕೆಲಸ ಕಡಿಮೆ.

ಅಲ್ಲಿ ಹೆಚ್ಚಾಗಿ ಒಣ ಬೇಸಾಯವಾದ ಕಾರಣ ಸ್ವಲ್ಪ ಮಳೆ ಬಂತೆಂದರೆ ಒಮ್ಮೆ ಉಳುಮೆ ಮಾಡಿರುವ ಈ ಕಾರ್ಮಿಕರು ಇಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯಲು ಬರುತ್ತಾರೆ. ಈ ಕೃಷಿ ಕಾರ್ಮಿಕರ ತಂಡ ಈಗಾಗಲೇ ಮಂಗಳೂರು ತಾಲೂಕಿನಲ್ಲಿ 50 ಎಕರೆ ಭತ್ತ ನಾಟಿ ಮಾಡಿ ಮುಗಿಸಿದೆ. 1 ಎಕರೆ ನಾಟಿ ಕಾರ್ಯಕ್ಕೆ ಈ ಕಾರ್ಮಿಕರ ತಂಡ 4 ಸಾವಿರ ರೂಪಾಯಿ ಮಜೂರಿ ನಿಗದಿ ಮಾಡುತ್ತದೆ. ಈ ಕಾರ್ಮಿಕರಿಗೆ ಚಹಾ ಕೊಟ್ಟರೆ ಸಾಕು. ಬೇರೇನನ್ನೂ ಕೇಳುವುದಿಲ್ಲ. ಆದ್ದರಿಂದ ರೈತರು ಈ ಕೃಷಿ ಕಾರ್ಮಿಕರಿಂದಲೇ ಭತ್ತದ ನಾಟಿಮಾಡಿಸಲು ಮುಂದಾಗುತ್ತಿದ್ದಾರೆ.

ಸ್ಥಳೀಯ 22 ಮಂದಿ ಕೃಷಿ ಕಾರ್ಮಿಕರು ಒಂದು ದಿನಕ್ಕೆ ಒಂದು ಎಕರೆ ಜಾಗದಲ್ಲಿ ಭತ್ತ ನಾಟಿ ಮಾಡುತ್ತಾರೆ. ಅದಲ್ಲದೇ ಈ ಸ್ಥಳೀಯ ಕಾರ್ಮಿಕರಿಗೆ ತಲಾ ಒಬ್ಬರಿಗೆ 350 ರೂಪಾಯಿ ಮಜೂರಿ, ಊಟ, ತಿಂಡಿ ,ಚಹಾ ನೀಡಬೇಕು. ಇದನ್ನೆಲ್ಲಾ ಸೇರಿಸಿದರೆ ಒಟ್ಟು ಒಂದು ಎಕರೆಗೆ ಸರಿ ಸುಮಾರು 7,500 ರೂಪಾಯಿ ಮಜೂರಿಯಾಗುತ್ತದೆ.

ಅದೇ ಗಂಗಾವತಿಯ 15 ಮಂದಿಯ ತಂಡ ಒಂದು ದಿನಕ್ಕೆ 2 ಎಕರೆ ಜಾಗ ನಾಟಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಗಂಗಾವತಿಯ ಕೃಷಿ ಕಾರ್ಮಿಕರು ಸ್ಥಳೀಯ ರೈತರಿಗೆ ವರದಾನವಾಗಿ ಪರಿಣಮಿಸಿದ್ದಾರೆ. ಕೃಷಿ ಕಾರ್ಮಿಕರೇ ಸಿಗುತ್ತಿಲ್ಲ ಎನ್ನುವ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English