ಬೆಂಗಳೂರು: ಬಿಬಿಎಂಪಿ ವತಿಯಿಂದ ಆಚರಿಸಲಾಗುವ ಕೆಂಪೇಗೌಡ ದಿನಾಚರಣೆಗೆ ದಿನಾಂಕ ಮರುನಿಗದಿಯಾಗಿದೆ.
ಆಗಸ್ಟ್ 16 ರಸಂಜೆ 6-30 ಕ್ಕೆ ಕೆಂಪೇಗೌಡ ದಿನಾಚರಣೆಗೆ ಸಿಎಂ ಕುಮಾರಸ್ವಾಮಿ ದಿನಾಂಕ ನೀಡಿರುವ ಹಿನ್ನಲೆಯಲ್ಲಿ ಆಗಸ್ಟ್ 16 ರಂದು ಕೆಂಪೇಗೌಡ ದಿನಾಚರಣೆ ನಡೆಯಲಿದೆ.
ಈಗಾಗಲೆ ಮೂರು ಬಾರಿ ಮುಂದೂಡಿಕೆಯಾಗಿದೆ. ಚುನಾವಣಾ ನೀತಿ ಸಹಿಂತೆಯಿಂದಾಗಿ, ಸಿಎಂ ದೆಹಲಿ ಪ್ರವಾಸದ ಹಿನ್ನೆಲೆ, ಮಾಜಿ ಸಿಎಂ ಕರುಣಾನಿಧಿ ನಿಧನ ಹಿನ್ನೆಲೆ ಒಟ್ಟು ಮೂರು ಬಾರಿ ಮುಂದೂಡಿಕೆಯಾಗಿದ್ದ ದಿನಾಚರಣೆಗೆ ಕಡೆಗೂ ದಿನಾಂಕ ನಿಗದಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆ ಮರುದಿನವೇ ನಾಡಪ್ರಭು ಕೆಂಪೇಗೌಡ ದಿನವನ್ನು ಆಚರಿಸಲು ರಾಜ್ಯ ಸರ್ಕಾರ ಹಾಗೂ ಪಾಲಿಕೆ ನಿರ್ಧರಿಸಿದೆ.
ಇನ್ನು ಕೆಂಪೇಗೌಡ ಪ್ರಶಸ್ತಿಯ ಸಂಭಾವ್ಯ ಪಟ್ಟಿ ಕೂಡಾ ಸೋರಿಕೆಯಾಗಿದ್ದು, ಆದರೆ ಅದೇ ಅಂತಿಮ ಪಟ್ಟಿ ಅಲ್ಲ ಬದಲಾವಣೆಯಾಗಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English