ಶುದ್ಧ ಉದ್ದೇಶದಿಂದ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ

12:30 PM, Friday, August 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

gouri-lankeshಮಂಗಳೂರು: ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಇತ್ತೀಚೆಗೆ ಹಿಂದುತ್ವವಾದಿ ಸಂಘಟನೆಗಳ ಅನೇಕ ಯುವಕರನ್ನು ಬಂಧಿಸಲಾಯಿತು. ಪ್ರತಿನಿತ್ಯ ಎನ್ನುವಂತೆ ಒಬ್ಬೊಬ್ಬರ ಬಂಧನವಾಗುತ್ತಿರುವುದನ್ನು ವಾರ್ತೆಯಲ್ಲಿ ಓದುತ್ತಿದ್ದೇನೆ. ಎಸ್ಐಟಿ ಅಧಿಕಾರಿಗಳ ತನಿಖೆಯ ದಿಶೆಯನ್ನು ನೋಡುವಾಗ ಬಹಳ ಗಂಭೀರ ಮತ್ತು ಭಯ ಹುಟ್ಟಿಸುವಂತಹ ರೀತಿಯಲ್ಲಿದೆ ಎನಿಸಿತು.

ಯಾರದೋ ಮನೆಯಲ್ಲಿ ಊಟ ಮಾಡಿದನೆಂದು ಅವರಿಗೆ, ಯಾರದೋ ಮನೆಯಲ್ಲಿ ವಾಸ್ತವ್ಯ ಮಾಡಿದನೆಂದು ಅವರಿಗೆ ಬಂಧಿಸಲಾಗುತ್ತಿದೆ ! ತನಿಖೆಯ ಈ ಪರಿಯನ್ನು ನೋಡುವಾಗ ಮುಂದೊಂದು ದಿನ ಅನಾರೋಗ್ಯಕ್ಕೆ ತಪಾಸಣೆ ಮಾಡಿದರೆಂದು ಆ ವೈದ್ಯರನ್ನು, ಬಸ್ಸಿನಲ್ಲಿ ಟಿಕೆಟ್ ಕೊಟ್ಟಿದ್ದರೆಂದು ನಿರ್ವಾಹಕರನ್ನು, ಒಡಹುಟ್ಟಿದವರೆಂದು ಅಣ್ಣ-ತಮ್ಮಂದಿರನ್ನು, ಜನ್ಮನೀಡಿದರೆಂದು ಪಾಲಕರನ್ನು ಹೀಗೆ ಎಲ್ಲರನ್ನೂ ಬಂಧಿಸುತ್ತ ಹೋಗಬಹುದೇ ಎಂಬ ಸಂದೇಹ ಮೂಡುತ್ತಿದೆ.!! ಅದರೊಂದಿಗೆ ಒಂದು ಅವ್ಯಕ್ತ ಭಯವೂ ಸಮಾಜದಲ್ಲಿ ತಲೆಯೆತ್ತುತ್ತಿದೆಯೆನಿಸಿತು.

ಇದು ನಿಜವಾದ ತನಿಖೆಯೇ ಅಥವಾ ಹಿಂದುತ್ವದ ಕಾರ್ಯ ಮಾಡುವವರಲ್ಲಿ ಭಯ ಹುಟ್ಟಿಸುವ ಹುನ್ನಾರವೇ?! ಎಸ್ಐಟಿ ಅಧಿಕಾರಿಗಳಿಗೆ, “ದಯವಿಟ್ಟು ಯಾವುದೇ ವ್ಯಕ್ತಿಯದ್ದಾಗಲೀ, ಯಾವುದೇ ಪಕ್ಷದ ಹಿಡಿತದಲ್ಲಿದ್ದಾಗಲೀ ನಿರಪರಾಧಿಗಳ ಭವಿಷ್ಯವನ್ನು ಹಾಳು ಮಾಡದೇ ನಿಷ್ಪಕ್ಷಪಾತವಾಗಿ ಹಾಗೂ ಶುದ್ಧ ಉದ್ದೇಶದಿಂದ ತನಿಖೆಯನ್ನು ಮಾಡಿ” ಎಂದು ಹಿಂದೂ ಜನ ಜಾಗ್ರತ ಸಮಿತಿಯ ಸದಸ್ಯರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English