ಹಿಂದುತ್ವವಾದಿ ಪಕ್ಷದಿಂದ ಹಿಂದೂಗಳ ಮತವನ್ನು ಬೇರ್ಪಡಿಸುವ ಷಡ್ಯಂತ್ರ ?

1:54 PM, Tuesday, August 21st, 2018
Share
1 Star2 Stars3 Stars4 Stars5 Stars
(No Ratings Yet)
Loading...

Narendra-Dabholkarಮಂಗಳೂರು  :  ಎಡಪಂಥೀಯ ಚಳುವಳಿಯ ಪ್ರಮುಖರು ಮುಖದಲ್ಲಿ ಪ್ರಗತಿಪರವಾದಿ, ಸಮಾಜವಾದಿ ಕಾರ್ಯಕರ್ತರ ಬುರಖಾವನ್ನು ತೊಟ್ಟು ಸಮಾಜದಲ್ಲಿ ತಮ್ಮ ವಿಚಾರವನ್ನು ಹರಡುವ ಕೆಲಸವನ್ನು ಮಾಡಿದರು. ಅವರ ನಗರ ನಕ್ಸಲವಾದವು ಈಗಷ್ಟೇ ಬಹಿರಂಗವಾಗುತ್ತಿದೆ; ಆದರೆ ಈ ಮಂಡಳಿಯ ಎಲ್ಲಕ್ಕಿಂತ ದೊಡ್ಡ ವೈರಿ ಯಾರೆಂದರೆ, ಹಿಂದುತ್ವವಾದಿ ವಿಚಾರದ ಕಾರ್ಯಕರ್ತರು ! ಬಂಗಾಲ, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಹಿಂದುತ್ವವಾದಿಗಳ ಹತ್ಯೆ ನಡೆಸಿ ಹಿಂದೂ ಸಂಘಟನೆಯನ್ನು ಮುಗಿಸುವ ಪ್ರಯತ್ನ ಮಾಡಲಾಯಿತು. ಅದೂ ಸಾಧ್ಯವಾಗದಿದ್ದಾಗ ಈಗ ಅವರು ಹಿಂದುತ್ವವಾದಿಗಳನ್ನು ಭಯೋತ್ಪಾದಕರೆಂದು ಬಿಂಬಿಸಿ, ಈ ಸಂಘಟನೆಗಳನ್ನು ಮುಗಿಸಲು ಪ್ರಯತ್ನವನ್ನು ಆರಂಭಿಸಿದ್ದಾರೆ. ಅದಕ್ಕಾಗಿಯೇ ಡಾ. ದಾಭೊಲಕರ, ಪಾನ್ಸರೆ ಇವರ ಹತ್ಯೆಯ ನಂತರ ಮೊದಲನೇ ಬೇಡಿಕೆ ಮಾಡಿದ್ದು ‘ಸನಾತನವನ್ನು ನಿಷೇಧಿಸಿ!’ ಎಂದು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ತನಿಖೆಯೂ ಪೂರ್ಣವಾಗಿಲ್ಲ, ಸಾಕ್ಷಿಗಳೂ ಸಿಕ್ಕಿಲ್ಲ, ನ್ಯಾಯಾಲಯವೂ ಯಾರನ್ನೂ ಅಪರಾಧಿ ಎಂದು ನಿರ್ಧರಿಸಿಲ್ಲ, ಹೀಗಿರುವಾಗ ‘ಸನಾತನವನ್ನು ನಿಷೇಧಿಸಿ’ ಈ ಬೇಡಿಕೆಯು ಮಾತ್ರ ಸತತವಾಗಿ ಎತ್ತಿ ಹಿಡಿದ್ದಿದ್ದಾರೆ. ಇದರಿಂದ ನಮಗೆ ಪ್ರಶ್ನೆ ಮೂಡುವುದೇನೆಂದರೆ, ದೇಶದಲ್ಲಿ ನ್ಯಾಯವ್ಯವಸ್ಥೆ, ಪ್ರಜಾಪ್ರಭುತ್ವ ಮುಗಿದಿದೆಯೇ ? ಅಮಾಯಕ ಹಿಂದುತ್ವವಾದಿಗಳನ್ನು ಬಲಿಪಶು ಮಾಡಿ ಮನಬಂದಂತೆ ನಡೆಯಲಾಗುತ್ತದೆಯೇ ?

ಅನೇಕ ಜನರ ಮನಸ್ಸಿನಲ್ಲಿ ಹೀಗೆ ಪ್ರಶ್ನೆಯೊಂದಿದೆ, ಭಾಜಪದ ಸರ್ಕಾರ ಇದ್ದರೂ ಇದೆಲ್ಲ ಹೇಗೆ ನಡೆಯುತ್ತಿದೆ; ಆದರೆ ನಾವು ಒಂದನ್ನು ಗಮನದಲ್ಲಿಡಬೇಕು, ಅದೆಂದರೆ ಮಹಾರಾಷ್ಟ್ರ ರಾಜ್ಯದಲ್ಲಿ ಅನೇಕ ವರ್ಷಗಳ ಕಾಲ ಪ್ರಗತಿಪರ ವಿಚಾರದ ರಾಜಕೀಯ ಪಕ್ಷಗಳ ಆಡಳಿತವಿತ್ತು. ಆ ಕಾಲದಲ್ಲಿ ಆಡಳಿತದಲ್ಲಿ ಪ್ರಗತಿಪರ ವಿಚಾರದ ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಯಿತು. ಅದರ ಪರಿಣಾಮವೇ, ಮಹಾರಾಷ್ಟ್ರ ಬ್ಯಾಂಕ್‌ನ ಅಧ್ಯಕ್ಷ ಶ್ರೀ. ಮರಾಠೆ ಇವರನ್ನು ರಾಜ್ಯ ಪೊಲೀಸರು ಬಂಧಿಸಿದರು ಮತ್ತು ಗೃಹಸಚಿವರೂ ಆದ ಮುಖ್ಯಮಂತ್ರಿಗಳಿಗೆ ಅದರ ಬಗ್ಗೆ ಮಾಹಿತಿಯೂ ಸಿಗುವುದಿಲ್ಲ ! ಸರ್ವೋಚ್ಚ ನ್ಯಾಯಾಲಯದ ಕೆಲವು ನ್ಯಾಯಾಧೀಶರು ಪತ್ರಕರ್ತರ ಪರಿಷತ್ತನ್ನು ತೆಗೆದುಕೊಂಡು (ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ) ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಾರೆ. ಕೆಲವು ಪ್ರಗತಿಪರರು ಉನ್ನತಮಟ್ಟದ ‘ಅವಾರ್ಡ್ ವಾಪಸಿ’ಯ ಒತ್ತಡ ತಂತ್ರವನ್ನು ಉಪಯೋಗಿಸುತ್ತಾರೆ ! ಇದರ ಲಾಭವನ್ನು ಪಡೆಯಲು ಭಯೋತ್ಪಾದಕ ಝಾಕೀರ್ ನಾಯಿಕ್‌ನನ್ನು ಆಲಂಗಿಸುವ, ಮುಸಲ್ಮಾನ ಭಯೋತ್ಪಾದಕರ ಮನೆಗೆ ಹೋಗಿ ಧನಸಹಾಯ ಮಾಡುವ ಕಾಂಗ್ರೆಸ್ ನಾಯಕರು ಸನಾತನದ ಮೇಲೆ ನಿರ್ಬಂಧ ಹೇರುವ ಬಗ್ಗೆ ಆಗ್ರಹಿಸುತ್ತಾರೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಇದೊಂದು ಷಡ್ಯಂತ್ರ ಅಲ್ಲತಾನೆ, ಇದರ ಬಗ್ಗೆ ವಿಚಾರ ಆಗಬೇಕಿದೆ. ಇದರಿಂದ ಹಿಂದುತ್ವವಾದಿಗಳ ಮೇಲೆ ಕ್ರಮಕೈಗೊಂಡರೆ ಒಂದು ಹಿಂದುತ್ವವಾದಿಗಳನ್ನು ಅಸಮಧಾನಗೊಳಿಸಿ ಅವರ ಮತವನ್ನು ಭಾಜಪದಿಂದ ಬೇರ್ಪಡಿಸುವುದು ಮತ್ತು ಇನ್ನೊಂದು ಹಿಂದೂಗಳಿಗೆ ಭಯೋತ್ಪಾದಕವೆಂದು ಬಿಂಬಿಸಿ ಅಲ್ಪಸಂಖ್ಯಾತ ಸಮಾಜದ ಇಡುಗಂಟು ಮತದ ಕಬಳಿಸುವುದು, ಹೀಗೆ ಒಂದು ಬಾಣದಿಂದ ಎರಡು ಪಕ್ಷಿಯನ್ನು ಹೊಡೆಯುವ ಷಡ್ಯಂತ್ರವನ್ನು ಈಗ ಮಹಾರಾಷ್ಟ್ರ ರಾಜ್ಯದ ಹಿಂದುತ್ವವಾದಿ ರಾಜಕೀಯ ಪಕ್ಷದವರು ಗಮನಿಸಬೇಕಿದೆ.

ಇಂದು ಡಾ. ದಾಭೊಲಕರ ಹತ್ಯೆ ಪ್ರಕರಣಕ್ಕೆ ೫ ವರ್ಷ ಪೂರ್ಣವಾಗುತ್ತಿದೆ. ಈ ಕಾಲಾವಧಿಯಲ್ಲಿ ಸನಾತನ ಸಂಸ್ಥೆ ಇದೊಂದೇ ತನಿಖೆಯ ಕೇಂದ್ರಬಿಂದುವನ್ನಾಗಿಟ್ಟುಕೊಂಡು ತನಿಖೆಯನ್ನು ಮಾಡಲಾಯಿತು. ಯಾವುದೇ ಸಾಕ್ಷಿಗಳು ಇಲ್ಲದಿದ್ದರೂ ಸನಾತನ ಸಂಸ್ಥೆಯನ್ನು ಆರೋಪಿ ಎಂದು ನಿರ್ಧರಿಸಲಾಯಿತು. ಈ ಪ್ರಕರಣದಲ್ಲಿ ಆರಂಭದಲ್ಲಿ ಸನಾತನದ ಅನೇಕ ಸಾಧಕರನ್ನು ವಿಚಾರಣೆಗೊಳಪಡಿಸಲಾಯಿತು. ಅವರನ್ನು ಈ ಹತ್ಯೆಗೆ ಜವಾಬ್ದಾರರು ಎಂದು ಹೇಳಲಾಯಿತು. ನಂತರ ಇತರ ಕೆಲವು ಸಾಧಕರ ಹೆಸರನ್ನು ಹೇಳಿ ಇವರೆಲ್ಲರೂ ಪರಾರಿಯಾಗಿದ್ದಾರೆ ಹಾಗೂ ಮುಖ್ಯ ಸೂತ್ರಧಾರ ಎಂದು ಹೇಳಲಾಯಿತು. ಆದರೆ ಈಗ ಬಂಧಿಸಲಾದ ಇಬ್ಬರೂ ಬೇರೆಯೇ ಆಗಿದ್ದಾರೆ ! ಹಾಗಾದರೆ ದಾಭೋಲಕರ ಹತ್ಯೆಗಾಗಿ ಉಪಯೋಗಿಸಲಾದ ಪಿಸ್ತೂಲ್ ಯಾರ ಬಳಿ ಸಿಕ್ಕಿತೋ, ಆ ನಾಗೋರಿ ಮತ್ತು ಖಂಡೆಲವಾಲ ಬಗ್ಗೆ ಏನು ಹೇಳುವಿರಿ ? ಈ ಬಗ್ಗೆ ಸನಾತನದ ಅನೇಕ ಸಾಧಕರ ಹೆಸರು ತೆಗೆದುಕೊಳ್ಳಲಾಗಿತ್ತು, ಹಾಗಾದರೆ ಅವರ ಬಗ್ಗೆ ಏನು ?

ಅಂಧಶ್ರದ್ಧಾ ನಿರ್ಮೂಲನ ಸಮಿತಿಯವರೇ, ಪ್ರಗತಿಪರರೇ, ‘ಜವಾಬ್ ದೋ !’
* ಕಳೆದ 5 ವರ್ಷಗಳಲ್ಲಿ ಅನೇಕ ಅಮಯಕ ಸಾಧಕರ ಹೆಸರನ್ನು ತೆಗೆದುಕೊಂಡು ಅವರ ಮಾನಹಾನಿಯನ್ನು ಏಕೆ ಮಾಡಲಾಯಿತು ?
* ಡಾ. ದಾಭೊಲಕರ ಇವರ ಹತ್ಯೆಗೆ ಉಪಯೋಗಿಸಿದ್ದ ಪಿಸ್ತೂಲ್ ನಾಗೋರಿ-ಖಂಡೆಲವಾಲ ಬಳಿ ಸಿಕ್ಕಿದ್ದರೂ ದಾಭೋಲಕರ ಕುಟುಂಬದವರು ಅವರ ಜಾಮೀನನ್ನು ಏಕೆ ವಿರೋಧಿಸಲಿಲ್ಲ ?
* ’25 ಲಕ್ಷ ಕೊಡುತ್ತೇವೆ, ಅಪರಾಧವನ್ನು ಒಪ್ಪಿಕೊಳ್ಳಿ’, ಎಂದು ನಾಗೋರಿಗೆ ಹೇಳಿದ ರಾಕೇಶ ಮಾರಿಯಾನಗೆ ಏಕೆ ಪ್ರಶ್ನೆಯನ್ನು ಕೇಳಲಿಲ್ಲ ?
* ‘ಅಂಧಶ್ರದ್ಧಾ ನಿರ್ಮೂಲನ ಸಮಿತಿ’ಯ ಹೆಸರು ನಕ್ಸಲವಾದಿಗಳೊಂದಿಗೆ ಜೋಡಿಸಲ್ಪಟ್ಟಿರುವ ಬಗ್ಗೆ ಮಹಾರಾಷ್ಟ್ರದ ಗೃಹಸಚಿವಾಲಯದ ವರದಿಯಲ್ಲಿರುವಾಗಲೂ ಆ ದಿಕ್ಕಿನಲ್ಲಿ ಏಕೆ ತನಿಖೆ ನಡೆಸುತ್ತಿಲ್ಲ ?
* ದಾಭೋಲಕರ ಹತ್ಯೆ ಪ್ರಕರಣದಲ್ಲಿ ಉಪಯೋಗಿಸಲಾಗಿದ್ದ ಪಿಸ್ತೂಲ್ ಪೊಲೀಸರಲ್ಲಿ ಇರುವಾಗ ಅದೇ ಪಿಸ್ತೂಲ್ ಪಾನ್ಸರೆ ಹತ್ಯೆಗಾಗಿ ಉಪಯೋಗಿಸಲಾಗಿದೆ, ಎಂಬ ತಲೆಬುಡ ಇಲ್ಲದ ಆರೋಪ ಮಾಡಲಾಯಿತು. ನಿಜವಾಗಿ ‘ಸ್ಕಾಟಲ್ಯಾಂಡ್ ಯಾರ್ಡ್’ನಿಂದ ರಿಪೋರ್ಟ್ ಬರುವ ತನಕ ದಾರಿಕಾಯುವ ಹೆಸರಿನಲ್ಲಿ 9 ತಿಂಗಳ ಕಾಲ ಉಚ್ಚ ನ್ಯಾಯಾಲಯದ ಗಂಭೀರವಾಗಿ ಮೋಸ ಮಾಡಲಾಯಿತು, ಇದರ ಬಗ್ಗೆ ಎಲ್ಲರೂ ಮೌನವಹಿಸಿದ್ದಾರೆ ?
* ತನಿಖೆಯನ್ನು ಆರಂಭಿಸುವ ಮೊದಲೇ ಕಾಂಗ್ರೆಸ್ಸಿನ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣರು ಹತ್ಯೆಯ ಹಿಂದೆ ಬಲಪಂಥೀಯರ ಕೈವಾಡ ಇರಬೇಕು ಎಂದು ಹೇಳಿ ತನಿಖೆಯ ದಿಕ್ಕನ್ನು ತಪ್ಪಿಸಿದರು, ಇದರ ಬಗ್ಗೆ ಅವರಿಗೆ ಏಕೆ ಕೇಳಲಿಲ್ಲ ?
* ದಾಬೋಲಕರ ಅವರ ಟ್ರಸ್ಟನಲ್ಲಿಯ ಆರ್ಥಿಕ ಹಗರಣದ ಬಗೆಗಿನ ತನಿಖೆಯನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದರಿಂದಾಗಿಯೇ ಅವರ ಹತ್ಯೆ ಆಗಿದೆಯೇ, ಇದರ ಬಗ್ಗೆ ತನಿಖೆಯನ್ನು ಏಕೆ ಮಾಡಲಿಲ್ಲ ?

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English