ಮಂಗಳೂರು : ಪ್ರತಿಭಟನೆ, ಮೆರವಣಿಗೆ ಹೆಸರಿನಲ್ಲಿ ಶಾಲಾಮಕ್ಕಳ ದುರುಪಯೋಗವನ್ನು ತಡೆಯಲು ಸೂಕ್ತ ಕ್ರಮ ಜರುಗಿಸುವ ಕುರಿತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಶಿಕ್ಷಣ ಇಲಾಖೆಗೆ ಮನವಿ ನೀಡಲಾಯಿತು.
ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಕೆಲವು ತಥಾಕಥಿತಬುದ್ಧಿಜೀವಿಗಳು, ಪ್ರಗತಿಪರರರು, ಸಾಮ್ಯವಾದಿ ವಿಚಾರಸರಣಿಯವರು ತಮ್ಮ ಸ್ವಾರ್ಥದ ರಾಜಕೀಯ ಪ್ರೇರಿತ ಕಾರ್ಯಕ್ರಮ, ಪ್ರತಿಭಟನೆ, ಮೆರವಣಿಗೆಗಳಿಗೆ ಉಪಯೋಗಿಸುವುದು, ಆ ಮೂಲಕ ತಮ್ಮ ವಾಂಛಿಕ ಸ್ವಾರ್ಥಸಾಧನೆ ಮಾಡುವುದು ಗಮನಕ್ಕೆ ಬರುತ್ತಿದೆ. ಇದು ಖಂಡನೀಯವಾಗಿದೆ. ಅದಕ್ಕಾಗಿ ಶಾಲಾ ಮಕ್ಕಳನ್ನು ಯಾವುದೇ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳ ಅವರ ಸ್ವಾರ್ಥಸಾಧನೆಗೆ ದುರ್ಬಳಕೆಯಾಗದಂತೆ ಸೂಕ್ತ ಕ್ರಮತೆಗೆದುಕೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ವಿವಿಧ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿ ಪತ್ರದಲ್ಲಿ ಕಳೆದ ವರ್ಷ ಪತ್ರೆಕರ್ತೆ ಗೌರಿ ಲಂಕೇಶ ಹತ್ಯೆಯ ಪ್ರಕರಣ, ಅನ್ಯ ವಿಷಯಗಳಲ್ಲಿ ಸಾಮ್ಯವಾದಿಗಳು ಅನೇಕ ಕಡೆ ಪ್ರತಿಭಟನೆ, ಮೆರವಣಿಗೆ, ಧರಣಿಯ ಹೆಸರಿನಲ್ಲಿ ರಾಜ್ಯದ ಅನೇಕ ಕಡೆಗಳಲ್ಲಿ ಶಾಲಾ ಮಕ್ಕಳನ್ನು ಬಳಸಿದ್ದರು. ಈ ಪ್ರತಿಭಟನೆಯಲ್ಲಿದೇಶದ ಮಾನ್ಯ ಪ್ರಧಾನ ಮಂತ್ರಿಯವರನ್ನು ಟೀಕೆ ಮಾಡಲಾಗಿತ್ತು.ಅಷ್ಟೇ ಅಲ್ಲದೇ ಬಹುಸಂಖ್ಯಾತ ಸಮುದಾಯದ ವಿರುದ್ಧ ದ್ವೇಷಭಾವನೆ ಬಿತ್ತುವ ಪ್ರಚೋದನೆಕಾರಿ ಭಾಷಣವನ್ನು ಮಾಡಲಾಗಿತ್ತು ಈ ರೀತಿಯಲ್ಲಿ ಶಾಲಾ ಮಕ್ಕಳ ಮನಸ್ಸಿನಲ್ಲಿ ದೇಶದ ಕೋಮುಭಾವನೆ ಬಿತ್ತುವ, ದೇಶದ ಪ್ರಧಾನ ಮಂತ್ರಿಗಳ ವಿರುದ್ಧಮಕ್ಕಳನ್ನು ಎತ್ತಿಕಟ್ಟುವುದು ದಂಡನೀಯ ಅಪರಾಧವಾಗಿದೆ ಮತ್ತು ಇದು ಶಾಲಾನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸಹ 2-2-2017 ರಂದು ಖಾಸಗಿ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿಧ್ಯಾರ್ಥಿಗಳನ್ನು ಬಳಸಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸುತ್ತೋಲೆ ಹೊರಡಿಸಿದೆ. ಇದಲ್ಲದೇ ಈ ಹಿಂದೆ ಗೌರಿ ಲಂಕೇಶ್ ಪ್ರಕರಣದಲ್ಲಿ ಪ್ರತಿಭಟಿಸಲು ವಿದ್ಯಾರ್ಥಿಗಳನ್ನು ಬಳಸಿದುದರ ವಿರುಧ್ಧ ದೂರನ್ನು ಸಹ ನೊಂದಾಯಿಸಲಾಗಿತ್ತು. ಈ ಬಾರಿಯೂ ಸಹ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹದ ಹೆಸರಿನ ಪ್ರತಿಭಟನೆಯಲ್ಲಿ ವಿಧ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯವ್ಯಾಪಿ ಸಂಬಂಧಿತ ಶಿಕ್ಷಣ ಇಲಾಖೆಗೆ ಮನವಿ ಪತ್ರ ನೀಡಿದೆ.
ಮಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ. ಗಿರೀಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು.
ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ, ಶ್ರೀ. ಉಪೇಂದ್ರ ಆಚಾರ್ಯ, ಶ್ರೀ. ರಮೇಶ್ ನಾಯಕ್, ಸೌ. ವಿನಯಾ ಗೌಡ, ಶೀ. ಪ್ರಭಾಕರ ನಾಯ್ಕ್ ಹಾಗೂ ಇತರ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English