ಸರಕಾರಿ ಶಾಲೆಗಳಿಂದ ಸಾಮರಸ್ಯದ ಸಂದೇಶ : ಎಂ. ಸುರೇಶ್ಚಂದ್ರ ಶೆಟ್ಟಿ

3:13 PM, Saturday, August 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

Mungaru Suggiಮಂಗಳೂರು: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುಗಡೆಯಾಗುವ ಮುನ್ಸೂಚನೆ ಕೇಳಿಬರುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಕಲಾಸಂಘಟನೆಗಳು, ಚಲನಚಿತ್ರರಂಗದವರು ವಿವಿಧ ಪ್ರಕಾರಗಳ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಮತ್ತು ಸಿನಿಮಾಗಳ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಮಕ್ಕಳಿಂದಲೇ ಪ್ರದರ್ಶಿಸುವ ಮೂಲಕ ತಮ್ಮ ಕೊಡುಗೆಯನ್ನು ನೀಡುತ್ತಿರುವುದು ಅಭಿನಂದನೀಯ ಎಂದು ಹಿಂದ್ ಮಜ್ದೂರ್ ಸಭಾ ಕರ್ನಾಟಕ ಘಟಕದ ಅಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿಯವರು ನುಡಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ರಂಗಸ್ಪಂದನ (ರಿ) ಮಂಗಳೂರು ದ.ಕ.ಜಿ.ಪ.ಹಿ.ಪ್ರಾ ಶಾಲೆ ಮಣ್ಣಗುಡ್ಡ, ಮಂಗಳೂರು ಇಲ್ಲಿ ಹಮ್ಮಿಕೊಂಡ ‘ಮುಂಗಾರು ರಂಗಸುಗ್ಗಿ’ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ಸ್ವರ್ಣ ಉದ್ಯಮಿ ಎಸ್.ಎಲ್. ಶೇಟ್ ಜ್ಯುವೆಲ್ಲರ‍್ಸ್ ಮತ್ತು ಡೈಮಂಡ್ ಹೌಸ್‌ನ ಅಡಳಿತ ಪಾಲುದಾರರಾದ ಪದ್ಮಾ ಆರ್. ಶೇಟ್ ಅವರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಮೀರಾ ಎಂ.ವಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಬಾನ ಬಾನು ಉಪಸ್ಥಿತರಿದ್ದರು. ರಂಗಸ್ಪಂದನದ ಸಂಚಾಲಕ ರಂಗಕರ್ಮಿ ವಿ.ಜಿ.ಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಶಶಿಕಲಾ ಬಿ.ಕೆ. ಕಾರ್ಯಕ್ರಮ ನಿರೂಪಿಸಿ, ಗೀತಾ ಕುಮಾರಿ ಸ್ವಾಗತಿಸಿದರು. ಪುಷ್ಪಲತಾ ವಂದನಾರ್ಪಣೆಗೈದರು. ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಪದ್ಮಾ ಆರ್. ಶೇಟ್‌ರವರನ್ನು ಶಾಲೆ ಮತ್ತು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕೋಸ್ಟಲ್ ರೌಂಡ್ಸ್‌ನ ನಿಶಾಂತ್ ಆರ್. ಶೇಟ್, ಹಳೆ ವಿದ್ಯಾರ್ಥಿ ಸಂಘದ ಪ್ರ. ಕಾರ್ಯದರ್ಶಿ ರಾಜೇಶ್ ಶೆಟ್ಟಿ, ರಂಗಸ್ಪಂದನದ ಧನಂಜಯ ಪುತ್ರನ್ ಬೆಂಗ್ರೆ, ಸುರೇಶ್ ಬಾಬು ಬೊಕ್ಕಪಟ್ಣ, ಕುಡ್ಲ ತುಳು ಕೂಟದ ಜೆ.ವಿ. ಶೆಟ್ಟಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಭ್ರಮದ ಶಿಕ್ಷಕಿಯರಾದ ವನಿತಾ ಶೆಟ್ಟಿ, ವನಿತಾ ಆಳ್ವರವರ ನಿರ್ದೇಶನದಲ್ಲಿ, ಸಂಗೀತ ನಿರ್ದೇಶಕ ಮುರಳೀಧರ್ ಕಾಮತ್ ಹಾಗೂ ಹಿನ್ನೆಲೆ ಗಾಯಕಿ ಮಂಜುಳಾ ಶೆಟ್ಟಿ ಸಾರಥ್ಯದಲ್ಲಿ ಶಾಲಾ ಮಕ್ಕಳಿಂದ ‘ಕುಣಿಯೋಣ-ಹಾಡೋಣ ಬನ್ನಿ’ ಸಂಗೀತ ಗಂಗೆ ಪ್ರದರ್ಶಿಸಲ್ಪಟ್ಟಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English