ಖಾಸಗಿ ಶಾಲೆ ಪರ ಲಾಬಿಗಳಿಂದ ಪಂಜಿಮೊಗರು ಶಾಲೆ ಮುಚ್ಚಿಸುವ ಪ್ರಯತ್ನ : ಪೋಷಕರ ಪ್ರತಿಭಟನೆ

Tuesday, December 21st, 2021
panjimogaru

ಮಂಗಳೂರು  : ಪಂಜಿಮೊಗರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪೂರಕ ವಾತಾವರಣ ಇಲ್ಲವಾಗಿದ್ದು, ಇಲ್ಲಿನ ಮುಖ್ಯೋಪಾದ್ಯಾಯಿನಿ ಹಾಗೂ ಶಿಕ್ಷಕರ ಗುಂಪೊಂದು ಪೋಷಕರ, ಎಸ್.ಡಿ.ಎಂ.ಸಿ ಸದಸ್ಯರ ಯಾವುದೇ ಮಾತಿಗೆ ಬೆಲೆ ಕೊಡದೆ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ, ಮಕ್ಕಳಿಗೆ ತಾರತಮ್ಯ, ದೈಹಿಕ ಹಲ್ಲೆ, ದೂರು ನೀಡಿದ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ, ಗುಣಮಟ್ಟದ ಶಿಕ್ಷಣದ ಕೊರತೆ ಹಲವಾರು ದೋಷಗಳಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಲವಾರು ಮನವಿ ನೀಡಿದರೂ ಯಾವೂದೇ ಕ್ರಮ ಕೈಗೊಳ್ಳದ ಕಾರಣ ಇಂದು ಕೊಟ್ಟಾರ ಡಿಡಿಪಿಐ ಕಛೇರಿ ಮುಂಭಾಗ ಮಕ್ಕಳೊಂದಿಗೆ […]

ಸರಕಾರಿ ಶಾಲೆ ಉಳಿಸಿ ಅಭಿಯಾನದ ರಥಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಚಾಲನೆ

Thursday, September 6th, 2018
Govt-school

ಬಂಟ್ವಾಳ :  ಸೆ. 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸರಕಾರಿ ಶಾಲೆ ಉಳಿಸಿ ಅಭಿಯಾನದ ಕಾಲ್ನಡಿಗೆ ಜಾಥಕ್ಕೆ ಪೂರ್ವಭಾವಿಯಾಗಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ರಾಜ್ಯದ್ಯಂತ ಸಂಚರಿಸಲಿರುವ ರಥಯಾತ್ರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಬಂಟ್ವಾಳ ಬಡ್ಡಕಟ್ಟೆಯ ಹನುಮಾನ್ ದೇವಸ್ಥಾನದ ಬಳಿ ಬುಧವಾರ ಚಾಲನೆ ನೀಡಿದರು. ಕರೆಂಕಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ ರಥಯಾತ್ರೆಗೆ ಬಡ್ಡಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಸಾಥ್ ನೀಡಿ ಬಂಟ್ವಾಳ ಪೇಟೆ ಮೂಲಕ ಬೈಪಾಸ್ ವರೆಗೆ […]

ಸರಕಾರಿ ಶಾಲೆಗಳಿಂದ ಸಾಮರಸ್ಯದ ಸಂದೇಶ : ಎಂ. ಸುರೇಶ್ಚಂದ್ರ ಶೆಟ್ಟಿ

Saturday, August 25th, 2018
Mungaru Suggi

ಮಂಗಳೂರು: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುಗಡೆಯಾಗುವ ಮುನ್ಸೂಚನೆ ಕೇಳಿಬರುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಕಲಾಸಂಘಟನೆಗಳು, ಚಲನಚಿತ್ರರಂಗದವರು ವಿವಿಧ ಪ್ರಕಾರಗಳ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಮತ್ತು ಸಿನಿಮಾಗಳ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಮಕ್ಕಳಿಂದಲೇ ಪ್ರದರ್ಶಿಸುವ ಮೂಲಕ ತಮ್ಮ ಕೊಡುಗೆಯನ್ನು ನೀಡುತ್ತಿರುವುದು ಅಭಿನಂದನೀಯ ಎಂದು ಹಿಂದ್ ಮಜ್ದೂರ್ ಸಭಾ ಕರ್ನಾಟಕ ಘಟಕದ ಅಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿಯವರು ನುಡಿದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ […]

ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ದೊರಕಬೇಕು: ಏರ್ಯ ಲಕ್ಷ್ಮೀನಾರಾಯಣ ಆಳ್ವ

Wednesday, August 10th, 2016
Lakshminarayana-Alwa

ಬಂಟ್ವಾಳ: ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ದೊರಕುವಂತೆ ಹೊಸ ಕಾನೂನು ಜಾರಿಗೊಳಿಸಬೇಕೆಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಹೇಳಿದರು. ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸೋಮವಾರ ನಡೆದ ‘ಸರಕಾರಿ ಶಾಲೆಗಳನ್ನು ಉಳಿಸಿ’ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ದುರ್ಗಾ ಫ್ರೆಂಡ್ಸ್‌ ಕ್ಲಬ್‌ […]

ಸಜ್ಜನ “ಹರೇಕಳ ಹಾಜಬ್ಬ”ರಿಗೆ ಕಿರುಕುಳ

Tuesday, November 13th, 2012
Harekala Hajabba

ಮಂಗಳೂರು :ಹರೇಕಳ ಎಂಬ ಗ್ರಾಮದ ಹೆಸರು ಇಂದು ದೇಶ ವಿದೇಶಗಳಲ್ಲಿ ಗುರುತಿಸಲ್ಪಡಲು, ಅಲ್ಲಿನ ಸರಕಾರಿ ಶಾಲೆಗೆ ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಸಾಲು ಸಾಲಾಗಿ ದೇಣಿಗೆ ಬರಲು ಹರೇಕಳ ಹಾಜಬ್ಬ ಕಾರಣ. ಆದರೆ, ಇಂದು ಅದೇ ಹಾಜಬ್ಬರ ಸ್ಥಾನಪಲ್ಲಟಗೊಳಿಸಲು ಹಾಜಬ್ಬರಿಗೆ ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ. ಈವತ್ತು ಹರೇಕಳ ಎಂದ ತಕ್ಷಣ ಹಾಜಬ್ಬ ನೆನಪಾಗುತ್ತಾರೆ. ಅವರ ಶಾಲೆ ಕಣ್ಣೆದುರು ಬರುತ್ತದೆ. ಆದರೆ, ಹಾಜಬ್ಬರ ಯಶೋಗಾಥೆಯನ್ನು ಸಹಿಸಲು ಮಾತ್ರ ಸ್ಥಳೀಯ ಕೆಲವರಿಗೆ ಸಾಧ್ಯವಾಗಲಿಲ್ಲ. `ಶಾಲೆಯ ಹೆಸರಿನಲ್ಲಿ ಹಾಜಬ್ಬ ವೈಯಕ್ತಿಕ ಲಾಭ […]