ಮಂಗಳೂರು : ಪಂಜಿಮೊಗರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪೂರಕ ವಾತಾವರಣ ಇಲ್ಲವಾಗಿದ್ದು, ಇಲ್ಲಿನ ಮುಖ್ಯೋಪಾದ್ಯಾಯಿನಿ ಹಾಗೂ ಶಿಕ್ಷಕರ ಗುಂಪೊಂದು ಪೋಷಕರ, ಎಸ್.ಡಿ.ಎಂ.ಸಿ ಸದಸ್ಯರ ಯಾವುದೇ ಮಾತಿಗೆ ಬೆಲೆ ಕೊಡದೆ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ, ಮಕ್ಕಳಿಗೆ ತಾರತಮ್ಯ, ದೈಹಿಕ ಹಲ್ಲೆ, ದೂರು ನೀಡಿದ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ, ಗುಣಮಟ್ಟದ ಶಿಕ್ಷಣದ ಕೊರತೆ ಹಲವಾರು ದೋಷಗಳಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಲವಾರು ಮನವಿ ನೀಡಿದರೂ ಯಾವೂದೇ ಕ್ರಮ ಕೈಗೊಳ್ಳದ ಕಾರಣ ಇಂದು ಕೊಟ್ಟಾರ ಡಿಡಿಪಿಐ ಕಛೇರಿ ಮುಂಭಾಗ ಮಕ್ಕಳೊಂದಿಗೆ ಪೋಷಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಎಂ.ಸಿ ಅದ್ಯಕ್ಷರಾದ ದಯಾನಂದ ಶೆಟ್ಟಿ ಜಿಲ್ಲೆಯಲ್ಲಿ ಮಾದರಿಯಾಗಿ ಬೆಳೆಯುತ್ತಿದ್ದ ಸರಕಾರಿ ಪಂಜಿಮೊಗರು ಶಾಲೆ ಸುತ್ತಮುತ್ತಲಿನ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಮುನ್ನುಗ್ಗುತ್ತಿದ್ದ ಸಂಧರ್ಭದಲ್ಲಿ ಇಲ್ಲಿಗೆ ವರ್ಗಾವಣೆಗೊಂಡು ಬಂದ ಮುಖ್ಯಶಿಕ್ಷಕಿ ಅಭಿವೃದ್ದಿಗೆ ಅಡ್ಡಗಾಲು ಹಾಕಿದ್ದಾರೆ. ಅವ್ಯವಸ್ಥೆಯಿಂದ ಕೂಡಿದ್ದ ಬೋಧನಾ ವ್ಯವಸ್ಥೆಯನ್ನು ಸರಿಪಡಿಸಲು ಸೂಕ್ತ ನಿಯಮಾವಳಿಗಳನ್ನು ತಂದಿದ್ದು ಶಿಕ್ಷಕರು ಶಾಲಾ ಸಮಯದಲ್ಲಿ ಮೊಬೈಲ್ ಬಳಕೆ ಹಾಗೂ, ತರಗತಿಯಲ್ಲಿರದಿರುವುದನ್ನು ಎಸ್.ಡಿ.ಎಂ.ಸಿ ಹಾಗೂ ಶಾಲೆಯನ್ನು ದತ್ತು ಪಡೆದ ಸಂಸ್ಥೆಯು ಆಕ್ಷೇಪಿಸಿದ್ದು ಇದರಿಂದ ಕೆಲವು ಶಿಕ್ಷಕರು ಮುಖ್ಯೋಪಾದ್ಯಾಯಿನಿಯೊಂದಿಗೆ ಸೇರಿ 60 ಲಕ್ಷದಷ್ಟು ವೆಚ್ಚದ ಅಭಿವೃದ್ದಿ ನಡೆಸಿದ ದತ್ತು ಪಡೆದ ಟ್ರಸ್ಟ್ ವಿರುದ್ದ ಪಿತೂರಿ ನಡೆಸಿ ಯಾವುದೇ ದೂರುಗಳಿಲ್ಲದೆ ಅಮಾನ್ಯ ಮಾಡುವಂತೆ ಮಾಡಲಾಗಿದೆ ಇದರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಭಾಗಿಯಾಗಿದ್ದು ಖಾಸಗಿ ಶಾಲೆಗಳ ಲಾಭಿಗೆ ಇವರು ಮಣಿದಿದ್ದಾರೆ. ತದನಂತರ ಶಾಲೆಯ ಅಭಿವೃದ್ದಿ ಹಿಮ್ಮುಖವಾಗಿದ್ದು ಈ ಕೊರೊನಾ ಕಾಲಗಟ್ಟದಲ್ಲಿಯೂ ಮಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲೂ ಕೂಡ ಪೋಷಕರ ಸಭೆ ಕರೆದಿಲ್ಲ ಹಾಗೂ ಮೂರನೇ ತರಗತಿ ಮಕ್ಕಳಿಗೆ ಪಾಠ ಪುಸ್ತಕ ವಿತರಿಸುತ್ತಿಲ್ಲ. 60 ರಿಂದ 70 ಮಕ್ಕಳನ್ನು ಮಕ್ಕಳನ್ನು ಒಟ್ಟಿಗೆ ಕೂಡಿ ಹಾಕಲಾಗಿದೆ ಸರಕಾರದ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ಇದನ್ನು ಪ್ರಶ್ನಿಸಲು ಬರುವ ಪೋಷಕರನ್ನು ಕಡೆಗಣಿಸುತ್ತಿದ್ದು ಶಾಲಾ ಎಸ್.ಡಿ.ಎಮ್.ಸಿ ಸದಸ್ಯರು ಬಂದಾಗ ಪೋಲೀಸರನ್ನು ಕರೆಸುತ್ತಿದ್ದಾರೆ ಇದರಿಂದ ಮಕ್ಕಳು ಭಯಭೀತರಾಗಿದ್ದಾರೆ. ಶಾಲೆಯಲ್ಲಿ ಶಿಕ್ಷಣದ ಪೂರಕ ವಾತಾವರಣ ಇಲ್ಲದಾಗಿದೆ. ಪೋಷಕರಲ್ಲದವರನ್ನು ಕರೆಸಿ ರಾಜಕೀಯ ಮಾಡಲಾಗುತ್ತಿದೆ. ಅವ್ಯವಹಾರ ನಡೆದಿದೆ ಎಂದು ದೂರಲಾಗಿದ್ದು ಯಾವೊಬ್ಬ ಅಧಿಕಾರಿಯೂ ತನಿಖೆ ಮಾಡಲು ಮುಂದಾಗುತ್ತಿಲ್ಲ. ಅವ್ಯವಹಾರ ಸುಳ್ಳು ಆರೋಪವಾಗಿದ್ದು ಇವರ ನಿಜ ಬಣ್ಣ ಹೊರ ಬರುತ್ತದೆ ಎಂಬ ಕಾರಣಕ್ಕೆ ತನಿಖೆ ವಿಳಂಬ ಮಾಡಲಾಗುತ್ತಿದೆ. ಇಂತಹ ಸುಳ್ಳು ಆರೋಪ ಮುಂದಿಟ್ಟು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿರುವುದು ಸಮಂಜಸವಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮುಖೋಪಾದ್ಯಾಯಿನಿ ಹಾಗೂ ಶಾಲಾ ವಿರೋಧಿ ಚಟುವಟಿಕೆ ಮಾಡುವ ಶಿಕ್ಷಕರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಎಸ್.ಡಿ.ಎಂ.ಸಿ ರಾಜ್ಯ ಅದ್ಯಕ್ಷರು ಮಾತನಾಡಿ ಈ ಪ್ರತಿಭಟನೆಯಲ್ಲಿ ಪೋಷಕರ ಸಂಖ್ಯೆ ಗಮನಿಸಿದಾಗ ಇಲ್ಲಿ ಅನ್ಯಾಯವಾಗಿರುವುದು ಸ್ಫಷ್ಟವಾಗಿ ತಿಳಿಯುತ್ತದೆ. ಎಸ್.ಡಿ.ಎಂ.ಸಿ ಸದಸ್ಯರ ಕಡೆಗಣಣೆ ಖಂಢನೀಯ ಪೋಷಕರ ಬೇಡಿಕೆಗಳನ್ನು ತಾನೂ ಬೆಂಬಲಿಸುವುದಾಗಿ ತಿಳಿಸಿದರು.
ಪೋಷಕರು ಬಂದರೆ ಪೋಲೀಸ್ ಕರೆಸುವ ಮುಖ್ಯೋಪಾದ್ಯಾಯಿನಿ ನಿನ್ನೆ ಪೋಷಕರಲ್ಲದವರ ಶಾಲೆಯ ಮುಂದೆ ಪ್ರತಿಭಟನೆ ನಡೆದಾಗ ಯಾಕೆ ಪೋಲೀಸ್ ಕರೆಸಿಲ್ಲ? ಇವರು ಬಾಹ್ಯ ಬೆಂಬಲ ನೀಡಿದ್ದು ಇವರ ಕುಮ್ಮಕ್ಕಿನಿಂದ ಪ್ರತಿಬಟನೆ ನಡೆಸಲಾಗಿದೆ ಎಂಬ ಕೂಗು ಪೋಷಕರಿಂದ ಕೇಳಿ ಬಂದಿತು.
ಮುಖ್ಯೋಪಾದ್ಯಾಯಿನಿ ವಿರುದ್ದ ಮಾತನಾಡಿದವರ ಮನೆಗೆ ಅವರ ಚೇಳಾಗಳು ಬಂದು ಗೂಂಡಾಗಿರಿ ಮಾಡುತ್ತಿದ್ದು ಹೆದರಿಸುವ ಕೆಲಸ ಮಾಡುತ್ತಿದ್ದಾರೆಂದು ಪೋಷಕರು ದೂರಿದರು..
ಡಿಡಿಪಿಐ ಮುಂದೆ ಪೋಷಕರು ತಮ್ಮ ಆಳಲನ್ನು ತೋರ್ಪಡಿಸಿದರು ಇತ್ತೀಚೆಗೆ ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದ್ದು ಒಂದು ಮಗುವಿನ ತಾಯಿ ಮುಖ್ಯೋಪಾದ್ಯಾಯಿನಿ ಬಳಿ ತಾನು ಮಗುವಿಗೆ ಈಗಾಗಲೇ ಚುಚ್ಚುಮದ್ದು ನೀಡಿದ್ದು ಶಾಲೆಯಲ್ಲಿ ಕೊಡಬೇಡಿ ಅಂದಿದ್ದು ಆದರೆ ಪುನಃಹ ಚುಚ್ಚುಮದ್ದು ನೀಡಲಾಗಿದೆ ಇದು ನಿರ್ಲಕ್ಷತನವಾಗಿದೆ.
ಕೆಲವು ಮಕ್ಕಲಿಗೆ ಇನ್ನೂ ಪಾಠ ಪುಸ್ತಕ ವಿತರಿಸಿಲ್ಲ, ಹೊಸ ಮಕ್ಕಳ ಸೇರ್ಪಡೆ ಮಅಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದವು ಇನ್ನೊಬ್ಬ ಪೋಷಕರು ತಮ್ಮ ಮಗಳು ಮುಖ್ಯೋಪಾದ್ಯಾಯಿನಿ ವಿರುದ್ದ ಮಕ್ಕಳ ಹಕ್ಕು ಸಮಿತಿಗೆ ದುರು ನೀಡದಕ್ಕಗಿ ತಾರತಮ್ಯ ಎಸಗಲಾಗುತ್ತಿದೆ ಎಂದು ದೂರಿದರೆ. ಮಕ್ಕಳನ್ನು ಕಾಲಿ ಕಾಲಲ್ಲಿ ನಡೆಸಿಕೊಂಡು ಕೊಂಡಯ್ಯುತ್ತರೆ ಎಂದು ಇನ್ನುಬ್ಬರು ದೂರಿದರು.
ಶಾಲೆಯಲ್ಲಿ ಶಿಕ್ಷಕರ ಕೊರತೆ ಜೊತೆಗೆ ಇರುವ ಶಿಕ್ಷಕರ ಉದ್ದಟನದಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಎಸ್.ಡಿ.ಎಮ್.ಸಿ ಸದಸ್ಯರ ಕಡೆಗಣಣೆ ಹಾಗೂ ಪೋಷಕರ ಮಾತಿಗೆ ಬೆಲೆ ಕೊಡದ ಮಕ್ಖಳನ್ನು ತಾರತಮ್ಯ ಮಾಡುವ ಮುಖ್ಯೋಪಾದ್ಯಾಯಿನಿ ಹಾಗೂ ಮೂವರು ಶಿಕ್ಷಕರನ್ನು ವರ್ಗಾವಣೆಗೊಳಿಸಬೇಕೆಂದು ಪೋಷಕರೆಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದರು.
ಡಿಡಿಪಿಐ ಮನವಿ ಸ್ವೀಕರಿಸಿ ಅದಷ್ಟು ಬೇಗ ಸಮಸ್ಯೆ ಪರಿಹಾರ ಮಾಡುವುದಾಗಿ, ಪೋಷಕರ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಮುಕ್ತಾಯಗೊಲಿಸಲಾಯಿತು. ಪ್ರತಿಭಟನೆಯಲ್ಲಿ ಎಸ್.ಡಿ.ಎಂ.ಸಿ ಉಪಾದ್ಯಕ್ಷರಾದ ಮಂಜುಳಾ ಹಾಗೂ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ರಾಜ್ಯ ಮತ್ತು ಜಿಲ್ಲಾ ನಾಯಕರು, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
Click this button or press Ctrl+G to toggle between Kannada and English