ಮಂಗಳೂರು : ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕ ಚುನಾವಣೆ-2018 ನಡೆಸುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಕೂಡಿದ ಶಾಂತಿಯುತ ವಾತಾವರಣದಲ್ಲಿ ಮತದಾನವು ನಡೆಯುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ಅವರು ಪುತ್ತೂರು ನಗರಸಭೆ, ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಆಗಸ್ಟ್ 29 ಸಾಯಂಕಾಲ 6 ಗಂಟೆಯಿಂದ ಆಗಸ್ಟ್ 31 ಸಂಜೆ 6 ಗಂಟೆವರೆಗೆ ಮದ್ಯ ಮುಕ್ತ ದಿನಗಳೆಂದು ಘೋಷಿಸಲಾಗಿದೆ.
ಮತ ಎಣಿಕೆಯ ಸಲುವಾಗಿ ಸೆಪ್ಟಂಬರ್ 3 ರಂದು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 8 ಗಂಟೆವರೆಗೆ ಮತ ಎಣಿಕೆ ನಡೆಯುವ ಪ್ರದೇಶವಾದ ಭಾರತ್ ಪ್ರೌಢಶಾಲೆ ಉಳ್ಳಾಲ, ಪುತ್ತೂರು ಮತ್ತು ಬಂಟ್ವಾಳ ತಾಲೂಕು ಕಚೇರಿಗಳ 3 ಕಿ.ಮೀ. ವ್ಯಾಪ್ತಿ ಪ್ರದೇಶಗಳನ್ನು ಮದ್ಯ ಮುಕ್ತ ದಿನಗಳೆಂದು ಘೋಷಿಸಲಾಗಿದೆ.
ಈ ದಿನಗಳಲ್ಲಿ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ಈ ದಿನಗಳಲ್ಲಿ ಪುತ್ತೂರು ನಗರಸಭೆ, ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಸೂಚಿತ ಅವಧಿಯಲ್ಲಿ ಯಾವುದೇ ಹೊಟೇಲುಗಳಲ್ಲಾಗಲೀ ನಾನ್ ಪ್ರೊಪ್ರೈಟರ್‍ಗಳಲ್ಲಿ, ಸ್ಟಾರ್ ಹೊಟೇಲ್‍ಗಳಲ್ಲಾಗಲೀ ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ಕೂಡ ನಿಷೇಧಿಸಿ ಆದೇಶಿಸಲಾಗಿದೆ.
Click this button or press Ctrl+G to toggle between Kannada and English