ಸ್ಥಳೀಯ ಸಂಸ್ಥೆ ಚುನಾವಣೆ : ವರ್ಕಾಡಿ 3ನೇ ಡಿವಿಷನ್ ನಲ್ಲಿ ಬಿರುಸಿನ ಪ್ರಚಾರ

Tuesday, December 8th, 2020
Ananda Tachire

ವರ್ಕಾಡಿ :  ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಸಿದ್ದತೆಗಳು ಬಿರುಸಿನಿಂದ ಸಾಗಿದ್ದು ಡಿಸೆಂಬರ್ 14 ರಂದು ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ತ್ರೀ ಸ್ತರಗಳಲ್ಲಿ ಚುನಾವಣೆ ನಡೆಯಲಿದೆ. ವರ್ಕಾಡಿ 3ನೇ ಡಿವಿಷನ್ ನಲ್ಲಿ ಈ ಬಾರಿ ತೀವ್ರ ಪೈಪೋಟಿ ಇದ್ದು ಬ್ಲಾಕ್ ಪಂಚಾಯತ್ ನಲ್ಲಿ ಮುಸ್ಲಿಂ ಲೀಗ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ. ಜಿಲ್ಲಾ ಪಂಚಾಯತ್ ನಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ. 2015 ರಲ್ಲಿ ನಡೆದ ಸ್ಥಳೀಯ ಸಂಸ್ಥೆ […]

ಸ್ಥಳೀಯ ಸಂಸ್ಥೆ ಚುನಾವಣೆ – ಆಗಸ್ಟ್ 29 ರಿಂದ ಮದ್ಯ ಮಾರಾಟ ನಿಷೇಧ

Monday, August 27th, 2018
Shashikanth Senthil

ಮಂಗಳೂರು : ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕ ಚುನಾವಣೆ-2018 ನಡೆಸುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಕೂಡಿದ ಶಾಂತಿಯುತ ವಾತಾವರಣದಲ್ಲಿ ಮತದಾನವು ನಡೆಯುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ಅವರು ಪುತ್ತೂರು ನಗರಸಭೆ, ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಆಗಸ್ಟ್ 29 ಸಾಯಂಕಾಲ 6 ಗಂಟೆಯಿಂದ ಆಗಸ್ಟ್ 31 ಸಂಜೆ 6 ಗಂಟೆವರೆಗೆ ಮದ್ಯ ಮುಕ್ತ ದಿನಗಳೆಂದು ಘೋಷಿಸಲಾಗಿದೆ. ಮತ ಎಣಿಕೆಯ ಸಲುವಾಗಿ ಸೆಪ್ಟಂಬರ್ 3 ರಂದು ಬೆಳಿಗ್ಗೆ 6 […]

ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಸಂಪೂರ್ಣ ವಿವರ

Monday, March 25th, 2013

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 7 ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸುಳ್ಯ ಹೊರತುಪಡಿಸಿ ಉಳಿದೆಡೆ ಬಿಜೆಪಿ ಧೂಳೀಪಟವಾಗಿದೆ. ಜೆಡಿಎಸ್, ಸಿಪಿಎಂ, ಎಸ್ ಡಿಪಿಐ ಖಾತೆ ತೆರೆದಿದ್ದರೆ ಹೊಸ ಪಕ್ಷಗಳಾದ ಕೆಜೆಪಿ, ಡಬ್ಲುಪಿಐ, ಬಿಎಸ್ಆರ್ ಹಳೆ ಪಕ್ಷಗಳಾದ ಜೆಡಿಯು, ಸಿಪಿಐ, ಐಎಂಎಲ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಜಿಲ್ಲೆಯ 189 ಸ್ಥಾನಗಳ ಪೈಕಿ ಕಾಂಗ್ರೆಸ್ 108, ಬಿಜೆಪಿ 63, ಜೆಡಿಎಸ್ 6, ಎಸ್ ಡಿಪಿಐ 5, ಸಿಪಿಎಂ 2 […]

ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 66.24%, ಉಡುಪಿ 75.23% ಮತ ಚಲಾವಣೆ, ಅಲ್ಲಲ್ಲಿ ಮಾತಿನ ಸಂಘರ್ಷ, ಕಲ್ಲು ತೂರಾಟ

Thursday, March 7th, 2013
MCC Election

ಮಂಗಳೂರು : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಚ್  7 ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಜೆ 5ಕ್ಕೆ ಮುಕ್ತಾಯ ಗೊಂಡಿದೆ. ಮತದಾನದ ಕೊನೆಯ ಅಂಕಿ ಅಂಶ ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 66.24 ಮತದಾನ ನಡೆದಿದೆ. ಒಟ್ಟು 1,48,311 ಪರುಷ ಮತ್ತು 1,59,226 ಮಹಿಳಾ ಮತದಾರರು ಮತಚಲಾಯಿಸಿದ್ದಾರೆ. ಬಹುತೇಕ ಶಾಂತಿಯುತ ಮತದಾನ ವಾಗಿದ್ದರೂ ಅಲ್ಲಲ್ಲಿ ಸಣ್ಣ ಪುಟ್ಟ ಮಾತಿನ ಸಂಘರ್ಷ ಮತ್ತು ಸಂಜೆಯ ವೇಳೆಗೆ ಮಂಗಳೂರಿನ ಬದ್ರಿಯ ಕಾಲೇಜು ಸಮೀಪ  ಕಲ್ಲು ತೂರಾಟ […]

ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ವ ಸಿದ್ದತೆ

Thursday, March 7th, 2013
ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ವ ಸಿದ್ದತೆ

ಮಂಗಳೂರು : ಮಾರ್ಚ್ 7 ರಂದು ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ  ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ದ.ಕ. ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 544 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 84 ಮತಗಟ್ಟೆಗಳನ್ನು ಅತಿಸೂಕ್ಷ್ಮಹಾಗೂ 70 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ 31 ಸೂಕ್ಷ್ಮ ಹಾಗೂ 61 ಅತಿಸೂಕ್ಷ್ಮ, ಮೂಡಬಿದಿರೆ […]